Advertisement

ಜನರಿಗೆ ನೀರು ನೀಡುವುದು ಆದ್ಯ ಕರ್ತವ್ಯ

11:22 AM Apr 08, 2022 | Team Udayavani |

ಅಳ್ನಾವರ: ಪಟ್ಟಣದ ಜನತೆ ಪ್ರತಿ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಎದುರಿಸುತ್ತಿತ್ತು. ಅದನ್ನು ಮನಗಂಡು ಶಾಶ್ವತ ಪರಿಹಾರಕ್ಕಾಗಿ ಕಾಳಿ ನದಿಯಿಂದ ನೀರು ಒದಗಿಸಲಾಗಿದೆ ಎಂದು ಹಳಿಯಾಳ ಶಾಸಕ ಆರ್‌.ವಿ. ದೇಶಪಾಂಡೆ ಹೇಳಿದರು.

Advertisement

ಇಲ್ಲಿನ ಪಪಂ ಸದಸ್ಯರ ನಿಯೋಗ ಗುರುವಾರ ಹಳಿಯಾಳಕ್ಕೆ ಹೋಗಿ ಶಾಸಕ ದೇಶಪಾಂಡೆ ಅವರನ್ನು ಭೇಟಿ ಮಾಡಿ ಕಾಳಿ ನದಿ ನೀರು ಯೋಜನೆ ಅನುಷಾನಗೊಳ್ಳಲು ಕೈಜೋಡಿಸಿದ್ದಕ್ಕೆ ಸತ್ಕರಿಸದ ನಂತರ ಅವರು ಮಾತನಾಡಿ, ಜನರಿಗೆ ನೀರು ನೀಡುವುದು ನಮ್ಮ ಆದ್ಯ ಕರ್ತವ್ಯ ಎಂದರು.

ಅಳ್ನಾವರ ಮತ್ತು ಹಳಿಯಾಳ ಅಕ್ಕಪಕ್ಕದ ಪಟ್ಟಣಗಳು. ಹಿಂದಿನ ಕಾಲದಿಂದ ಪರಸ್ಪರ ಸಹೋದರತ್ವ ಭಾವನೆಯಿಂದ ನಡೆದುಕೊಂಡು ಬಂದಿವೆ. ಎರಡು ಪಟ್ಟಣದ ಮಧ್ಯ ಭಾವನಾತ್ಮಕ ಸಂಬಂಧ ಇದೆ. ಪಕ್ಕದ ಊರಿನ ಜನರಿಗೆ ಕುಡಿಯುವ ನೀರು ನೀಡಿದ ತೃಪ್ತಿ ನನಗಿದೆ. ಅಭಿವೃದ್ಧಿ ವಿಷಯದಲ್ಲಿ ಎಲ್ಲರೂ ಸೇರಿ ಕೆಲಸ ಮಾಡೋಣ. ಜನರಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಹೇಳಿದರು.

ಪಪಂ ಉಪಾಧ್ಯಕ್ಷ ನದೀಮ ಕಾಂಟ್ರ್ಯಾಕ್ಟರ್‌, ಹಳಿಯಾಳ ಪುರಸಭೆ ಅಧ್ಯಕ್ಷ ಅಜರ್‌ ಬಸರಿಕಟ್ಟಿ, ಪಪಂ ಸದಸ್ಯರಾದ ಛಗನಲಾಲ ಪಟೇಲ, ಮಧು ಬಡಸ್ಕರ್‌, ಅಮೂಲ ಗುಂಜೀಕರ, ಸ್ಥಾಯಿ ಸಮಿತಿ ಅಧ್ಯಕ್ಷ ರಾಜು ಯಲಕಪಾಟಿ, ರಮೇಶ ಕುನ್ನೂರಕರ, ಯಲ್ಲಪ್ಪ ಹೂಲಿ, ಶಾಲೆಟ್‌ ಬರೆಟ್ಟೊ, ಮಂಗಳಾ ರವಳಪ್ಪನವರ, ಭಾಗ್ಯವತಿ ಕುರುಬರ, ನೇತ್ರಾವತಿ ಕಡಕೋಳ, ಅನ್ನಪೂರ್ಣಾ ಕೌಜಲಗಿ, ತಮೀಮ ತೇರಗಾಂವ, ಸುನಂದಾ ಕಲ್ಲು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next