Advertisement

ಗ್ರಾಮೀಣರ ಆರ್ಥಿಕಾಭಿವೃದ್ಧಿಗೆ ಆದ್ಯತೆ

04:06 PM Oct 19, 2020 | Suhan S |

ಬಂಗಾರಪೇಟೆ: ಗ್ರಾಮೀಣ ಪ್ರದೇಶದ ಜನರ ಆರ್ಥಿಕಾಭಿವೃದ್ಧಿಗೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸದಾ ಶ್ರಮಿಸುತ್ತಿದ್ದು, ರೈತರು, ಕೂಲಿ ಕಾರ್ಮಿಕರು ಹಾಗೂ ಮಹಿಳೆಯರುಈ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ಎಂದು ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ವಿಜಯಕುಮಾರ್‌ ಸಲಹೆ ನೀಡಿದರು.

Advertisement

ತಾಲೂಕಿನ ತೊಪ್ಪನಹಳ್ಳಿ ಗ್ರಾಮದಲ್ಲಿರುವ ಚಂದ್ರಮೌಳೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ ಪಂಜಾಬ್‌ ನ್ಯಾಷ ನಲ್‌ ಬ್ಯಾಂಕ್‌ ತೊಪ್ಪನಹಳ್ಳಿ ಶಾಖೆ ವತಿಯಿಂದಹಮ್ಮಿಕೊಂಡಿದ್ದ ಗ್ರಾಮ ಸಂಪರ್ಕ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಗಾಂಧೀಜಿ ಕನಸು ಕಂಡಿದ್ದರು. ಅವರ ಆಶಯಗಳಂತೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಗ್ರಾಮಗಳ ಹಾಗೂ ಜನರಆರ್ಥಿಕಾಭೀವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು. ಬ್ಯಾಂಕ್‌ನಿಂದ ದೊರೆಯುವ ಸಾಲ ಸೌಲಭ್ಯ, ಡಿಜಿಟಲ್‌ ಬ್ಯಾಂಕಿಂಗ್‌ ಬಗ್ಗೆ ಸ್ವಯಂ ಸುರಕ್ಷೆ ಯೋಜನೆಗಳ ಬಗ್ಗೆ ವಿವರವಾಗಿ ಜನರಿಗೆ ಮನದಟ್ಟು ಮಾಡಿಕೊಟ್ಟರೂ ಕೊರೊನಾ ಸಂಕಷ್ಟದಲ್ಲಿ ಗ್ರಾಮೀಣ ಜನರ ಬದುಕು ಸಹ ಮೂರಾಬಟ್ಟೆಯಾಗಿದೆ.ಈಸಮಯದಲ್ಲಿ ರೈತರನ್ನು ಕೃಷಿಯತ್ತ ಉತ್ತೇಜಿಸುವಕಾರ್ಯಕ್ರಮಗಳು ನಡೆಯಬೇಕಿದೆ.ಬ್ಯಾಂಕ್‌ ರೈತರ ನೆರವಿಗೆ ಸದಾ ಸಿದ್ಧವಿದ್ದು ಪಡೆದಸಾಲವನ್ನು ಸಕಾಲಕ್ಕೆ ಮರು ಪಾವತಿ ಮಾಡಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಗ್ರಾಮ ಸಂಪರ್ಕ ಅಭಿಯಾನದಡಿ ಅರ್ಹ 50 ಫ‌ಲಾನು ಭವಿಗಳಿಗೆ 14 ಲಕ್ಷ ರೂ. ಸಾಲ ವಿತರಣೆ ಮಾಡಲಾಯಿತು. ಶಾಖೆ ವ್ಯವಸ್ಥಾಪಕ ಪಿ.ಬಾಲಕೃಷ್ಣರೆಡ್ಡಿ,ಬ್ಯಾಂಕ್‌ಅಧಿಕಾರಿಶ್ರೀಧರ್‌, ಕೃಷಿ ಅಧಿಕಾರಿ ಅನುಷಾ, ಪಿಡಿಒಗಳಾದರಾಘವೇಂದ್ರ ರಾವ್‌, ಕೆ.ಆರ್‌.ಸುರೇಶ್‌ಬಾಬು, ಲವಕು ಮಾರ್‌, ಹೀರಾ, ರಾಣೆಮ್ಮ, ಸಂಪಂಗಿ, ರಾಜಪ್ಪ ಲಿ ಇದ್ದರು

ಗ್ರಾಪಂ ಆಡಳಿತಾಧಿಕಾರಿ ವರ್ಗಾಯಿಸಿ :

Advertisement

ಮುಳಬಾಗಿಲು: ತಾಲೂಕಿನ ದೇವರಾಯಸಮುದ್ರ ಗ್ರಾಪಂ ಆಡಳಿತ ಅಧಿಕಾರಿಯಾಗಿರುವ ಬಿಇಒ ಡಿ. ಗಿರಿಜೇಶ್ವರಿದೇವಿ ಜಲ್ಲಿ ಕ್ರಷರ್‌ಗಳ ಮಾಲೀಕರೊಂದಿಗೆ ಶಾಮೀಲಾಗಿ ಸರ್ವಾಧಿಕಾರಿಯಂತೆ ವರ್ತಿಸುತ್ತಾ ಬೆಟ್ಟದ ಪರಿಸರ ನಾಶಪಡಿಸುತ್ತಿದ್ದಾರೆಂದು ಆರೋಪಿಸಿ ಕೂಡಲೇ ಪಿಡಿಒ ಸ್ಥಾನದಿಂದ ತೆರವು ಮಾಡಬೇಕೆಂದು ಪರಿಸರಹಿತರಕ್ಷಣಾ ಸಮಿತಿ ಅಧ್ಯಕ್ಷ ವಿ.ರಾಜಪ್ಪ ಒತ್ತಾಯಿಸಿದ್ದಾರೆ.

ತಾಲೂಕಿನ ದೇವರಾಯಸಮುದ್ರದಲ್ಲಿನ ಪರಿಸರಹಿತರಕ್ಷಣಾ ಸಮಿತಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆಮಾತನಾಡಿ, ಬಿಇಒ ಡಿ.ಗಿರಿಜೇಶ್ವರಿ ದೇವಿ ಗ್ರಾಪಂ ವ್ಯಾಪ್ತಿಯಲ್ಲಿನ ಬೆಟ್ಟ ಗುಡ್ಡಗಳನ್ನು, ಅರಣ್ಯ ಸಂಪತ್ತನ್ನು ಸಂರಕ್ಷಿಸುವುದು ಬಿಟ್ಟು ಸದಾ ತಮ್ಮ ಎರಡು ದಿನಗಳ ಪ್ರಚಾರಕ್ಕಾಗಿ ಹಳ್ಳಿಗಾಡಿನ ಪರಿಸರವನ್ನು ಹಾಳು ಮಾಡುವುದನ್ನು ಬಿಡಬೇಕು ಎಂದು ಆಗ್ರಹಿಸಿದರು.

ಗ್ರಾಪಂ ವ್ಯಾಪ್ತಿಯಲ್ಲಿರುವಕಲ್ಲು ಗಣಿಗಾರಿಕೆ ಮೂಲಕ ಜನರ ನೆಮ್ಮದಿ ಹಾಳು ಮಾಡುತ್ತಿರುವ ಕ್ರಷರ್‌ಗಳ ಮಾಲೀಕರೊಂದಿಗೆ ಶಾಮೀಲಾಗಿ ಅವರಿಂದ ದೇಣಿಗೆ ಪಡೆದು ಕಸದ ಬುಟ್ಟಿ ವಿತರಣೆ ನೆಪದಲ್ಲಿ ಕಸದ ಬುಟ್ಟಿಗಳ ಮೇಲೆ ಕ್ರಷರ್‌ಗಳ ಹೆಸರುಗಳನ್ನು ನಮೂದಿಸಿ, ಜಲ್ಲಿ ಕ್ರಷರ್‌ಗಳ ವಿರುದ್ಧ ಧ್ವನಿ ಎತ್ತಿರುವ ಜನರ ಧ್ವನಿ ದಮನ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಸರ್ಕಾರ ಅವರನ್ನು ಬೇರೆ ಕಡೆಗೆ ವರ್ಗಾಯಿಸಬೇಕು ತಪ್ಪಿದಲ್ಲಿ ನೂರಾರು ಜನರೊಂದಿಗೆ ಅಂತಹ ಅಧಿಕಾರಿಗಳಿಗೆ ತಕ್ಕ ಉತ್ತರ ನೀಡಲಾಗುವುದುಎಂದು ಎಚ್ಚರಿಸಿದರು. ಪರಿಸರ ಹಿತರಕ್ಷಣಾ ಸಮಿತಿ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next