Advertisement

ಹಿತ್ತಲಶಿರೂರ ಅಭಿವೃದ್ದಿಗೆ ಆದ್ಯತೆ: ಶಾಸಕ ಗುತ್ತೇದಾರ

02:39 PM Sep 03, 2022 | Team Udayavani |

ಆಳಂದ: ತಾವು ಶಾಸಕರಾಗಿ ಆಯ್ಕೆ ಯಾದ ಮೇಲೆ ಹಿತ್ತಲಶಿರೂರ ಗ್ರಾಮಕ್ಕೆ ಸುಮಾರು 2ಕೋಟಿ ರೂ. ಅನುದಾನ ನೀಡಿ, ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಸುಭಾಷ ಆರ್‌. ಗುತ್ತೇದಾರ ಹೇಳಿದರು.

Advertisement

ತಾಲೂಕಿನ ಹಿತ್ತಲಶಿರೂರ ಗ್ರಾಮದಲ್ಲಿ 2021-22ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನದಡಿ ಮಂಜೂರಾದ 15.81ಲಕ್ಷ ರೂ. ವೆಚ್ಚದ ಅಂಬಿಗರ ಚೌಡಯ್ಯನವರ ಸಮುದಾಯ ಭವನ ನಿರ್ಮಾಣ, ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಮುಜರಾಯಿ ಇಲಾಖೆಯಿಂದ ಮಂಜೂರಾದ 20ಲಕ್ಷ ರೂ. ವೆಚ್ಚದ ಅಂಬಾ ಭವಾನಿ ದೇವಸ್ಥಾನದ ನಿರ್ಮಾಣ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಗ್ರಾಮದಲ್ಲಿ ಗ್ರಾಮ ಪಂಚಾಯಿತ ನೂತನ ಕಟ್ಟಡ, ಕುಡಿಯುವ ನೀರಿನ ವ್ಯವಸ್ಥೆ, ಶಾಲಾ ಕಟ್ಟಡಗಳ ದುರಸ್ತಿ, ಶೌಚಾಲಯ ನಿರ್ಮಾಣ, ಸಮುದಾಯ ಭವನ, ಕ್ಷೇಮಪಾಲನಾ ಕೇಂದ್ರ ನಿರ್ಮಾಣ, ಪ್ರೌಢಶಾಲೆಗೆ ಆವರಣ ಗೋಡೆ, ಸಿಸಿ ರಸ್ತೆ, ಅಂಬಾ ಭವಾನಿ ದೇವಸ್ಥಾನ ಜೀರ್ಣೋದ್ಧಾರ ಸೇರಿದಂತೆ ಅನೇಕ ಕಾಮಗಾರಿ ಪೂರ್ಣಗೊಳಿಸಲು ಅನುದಾನ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.

ಪಂಚಾಯತರಾಜ್‌ ಎಂಜಿನಿಯ ರಿಂಗ್‌ ಇಲಾಖೆ ಕಿರಿಯ ಅಭಿಯಂತರ ಸಂದೀಪ, ಮುಖಂಡರಾದ ರಾಜಶೇಖರ ಮಲಶೆಟ್ಟಿ, ಗಿರೀಶ ಕುಲಕರ್ಣಿ, ಶರಣಬಸಪ್ಪ ಸರಸಂಬಿ, ಅಮೃತ ಬಿಬ್ರಾಣಿ, ಶರಣಪ್ಪ ನಾಟಿಕಾರ, ನಿಂಗಣ್ಣ ಮಾಸ್ಟರ್‌ ದೆನಕ, ಪ್ರಭು ಸರಸಂಬಿ, ರಾಜು ಧಂಗಾಪೂರ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next