Advertisement
ಸಾಹಿತ್ಯ ಕ್ಷೇತ್ರಕ್ಕೆ ಮೊದಲಿನಿಂದಲೂ ಸಹಕಾರ ನೀಡುತ್ತಾ ಬಂದಿದ್ದು, ತಮ್ಮ ಎರಡೂವರೆ ವರ್ಷದ ಅಧಿಕಾರದಲ್ಲಿ ಎರಡು ತಾಲೂಕು ಸಮ್ಮೇಳನಗಳನ್ನು ಮಾಡಿ, ಈ ಭಾಗದ ಸಾಧಕರನ್ನು, ಸಾಹಿತಿಗಳನ್ನು ಗೌರವಿಸುವ ಕೆಲಸ ಮಾಡಲಾಗಿದೆ. ಕನ್ನಡ ಭವನ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ಘೋಷಣೆ ಮಾಡಿದರು. ನಂತರ ತಾಲೂಕಿನ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಸಮ್ಮೇಳನಾಧ್ಯಕ್ಷ ಅಲ್ಲಮಪ್ರಭುಪಾಟೀಲ್, ಪುರಸಭೆ ಸದಸ್ಯ ರಾಜಾಮಹೇಂದ್ರ ನಾಯಕ, ಕಸಾಪ ಅಧ್ಯಕ್ಷ ಮಹ್ಮದ್ ಮುಜೀಬ್, ಗೌರವ ಕಾರ್ಯದರ್ಶಿ
ಬಸವರಾಜ ಭೋಗಾವತಿ, ಪಿ.ಪರಮೇಶ, ಮೂಕಪ್ಪ ಕಟ್ಟಿಮನಿ, ಎ.ಬಿ. ಉಪ್ಪಂಠ, ಡಾ| ರೋಹಿಣಿ ಮಾನ್ವೀಕರ್, ಡಿ.ಬಸನಗೌಡ, ಶಿಕ್ಷಕರಾದ ಸಂಗಮೇಶ
ಮುಧೋಳ, ಮಹಾದೇವಪ್ಪ, ಶ್ರೀಶೈಲಗೌಡ, ಡಿ.ಸಿ. ಪಾಟೀಲ್, ನಾಗರಾಜ ಕೊಳ್ಳಿ ಇದ್ದರು.