Advertisement
ವಿಟಮಿನ್-ಸಿ, ವಿಟಮನ್-ಡಿ ಮತ್ತು ಸತು(ಜಿಂಕ್) ಮಾತ್ರೆಗಳನ್ನು ನೀಡುವುದರಿಂದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೂರಕಗಳಾಗಿವೆ. ದೈನಂದಿನ ಆವಶ್ಯಕತೆಗೆ ವಿಟಮಿನ್ -ಡಿ ಪೂರಕವು ಉಪಯುಕ್ತವಾಗಿದೆ. ವಿಟಮಿನ್-ಡಿ ಜೀವಸತ್ವವು ಇಮ್ಯೂನೋ ಮೊಡ್ಯುಲೆಟರಿ ಆಗಿದ್ದು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ವಿಟಮಿನ್- ಸಿ ಉತ್ಕರ್ಷಣ ನಿರೋಧಕ (ಆ್ಯಂಟಿ-ಆಕ್ಸಿಡೆಂಟ್) ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಪ್ರತಿಕ್ರಿಯಾತ್ಮಕ ಆಮ್ಲಜನಕ ಪ್ರಭೇದಗಳನ್ನು (ರಿಯಾಕ್ಟಿವ್ ಆಕ್ಸಿಜನ್ ಸ್ಪೈಸಸ್) ಹಿಮ್ಮೆಟ್ಟಿಸಲು ವಿಟಮಿನ್ -ಸಿ ಉಪಯುಕ್ತವಾಗಿದೆ. ಸೋಂಕಿನ ಸಮಯದಲ್ಲಿ ವಿಟಮಿನ್- ಸಿ ಮಟ್ಟವು ಕಡಿಮೆಯಾಗಬಹುದು ಹಾಗೂ ಸೋಂಕಿನ ತೀವ್ರತೆಯೊಂದಿಗೆ ವಿಟಮಿನ್ -ಸಿಯ ಆವಶ್ಯಕತೆಯು ಹೆಚ್ಚಾಗುತ್ತದೆ.ಸತು(ಜಿಂಕ್)ವಿನಲ್ಲಿನ ಇಮ್ಯುನೋಮೊಡ್ಯುಲೇಟರಿ ಮತ್ತು ಆ್ಯಂಟಿವೈರಲ್ ಗುಣಲಕ್ಷಣಗಳು ಮಹತ್ವದ ಪಾತ್ರ ವಹಿಸುತ್ತವೆ. ಸತುವಿನ ಕೊರತೆಯು ವೈರಸ್ ಹಾಗೂ ಬ್ಯಾಕ್ಟಿರೀಯಾಗಳನ್ನು ನಾಶಮಾಡುವ “ಎನ್‌ಕೆ’ ಮತ್ತು ಸೈಟೊಟೊಝಿಕ್ “ಟಿ ‘ ಸೆಲ್‌ಗಳ ಚಟುವಟಿಕೆಗಳನ್ನು ಕಡಿಮೆ ಮಾಡುತ್ತದೆ.
Related Articles
Advertisement
ಮಾರುಕಟ್ಟೆಗಳಲ್ಲಿ ಲಭಿಸುವ ರೋಗನಿರೋಧಕ ಶಕ್ತಿ ಹೆಚ್ಚಿಸುವ ಉತ್ಪನ್ನಗಳು ವಿವಿಧ ಔಷಧಯುಕ್ತ ಗಿಡಮೂಲಿಕೆಗಳ ಮಿಶ್ರಣವಾಗಿವೆ. ಪ್ರಸ್ತುತ ಅಧ್ಯಯನದ ಪ್ರಕಾರ ಮೂರರಿಂದ ಆರು ತಿಂಗಳುಗಳವರೆಗೆ ನಿಯಮಿತವಾಗಿ ಇವುಗಳನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ, ಶಕ್ತಿಯ ಮಟ್ಟ, ದೈಹಿಕ ಸಾಮರ್ಥ್ಯ ಮತ್ತು ಮಕ್ಕಳ ಜೀವನದ ಗುಣಮಟ್ಟ ವೃದ್ಧಿಸುತ್ತದೆ.
ಮಕ್ಕಳಿಗಿರಲಿ ಶ್ರೀರಕ್ಷೆಈ ಕೆಲವೊಂದು ಕ್ರಮಗಳನ್ನು ಅನುಸರಿಸುವ ಮೂಲಕ ಮಕ್ಕಳಲ್ಲಿ ರೋನಿರೋಧಕ ಶಕ್ತಿಯನ್ನು ಸ್ವಾಭಾವಿಕವಾಗಿ ಹೆಚ್ಚಿಸಬಹುದಾಗಿದೆ. 1 ಸಮತೋಲಿತ, ಆರೋಗ್ಯಕರ ಆಹಾರ – ಹಣ್ಣು-ತರಕಾರಿಗಳ ಸೇವನೆ.
2 ಸಂಸ್ಕರಿಸಿದ ಆಹಾರವನ್ನು ಸ್ವೀಕರಿಸದೆ ಇರುವುದು.
3 ಪ್ರತೀ ದಿನ 8 ಲೋಟ ನೀರು ಕುಡಿಯುವುದು.
4 ಯೋಗ ಸೇರಿದಂತೆ ಉತ್ತಮ ದೈಹಿಕ ಚಟುವಟಿಕೆಗಳು.
5 8ರಿಂದ 10 ಗಂಟೆ ಉತ್ತಮ ನಿದ್ರೆ.
6 ಮನೆಯಲ್ಲಿ ಒತ್ತಡರಹಿತ ವಾತಾವರಣ ಕಾಯ್ದುಕೊಳ್ಳುವುದು.
7 ಎಳೆಬಿಸಿಲಿನ ಶಾಖ ಪಡೆಯುವುದು.
8 ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವುದು. – ಡಾ| ಸಂತೋಷ್ ಸೋನ್ಸ್, ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥರು, ಎ.ಜೆ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ