Advertisement

ಜಲಸಂರಕ್ಷಣೆ ಆಂದೋಲನಕ್ಕೆ ಆದ್ಯತೆ ನೀಡಿ

01:14 PM Sep 13, 2019 | Team Udayavani |

ತುಮಕೂರು: ಜಿಲ್ಲೆಯಲ್ಲಿ ಮಳೆ ಬಾರದೆ ನೀರಿನ ಕೊರತೆ ಇರುವುದರಿಂದ ಜಲ ಸಂರಕ್ಷಣೆ ಆಂದೋಲನ ಪರಿಣಾಮಕಾರಿ ಯಾಗಿ ಕೈಗೊಳ್ಳಬೇಕು ಎಂದು ಜಲಶಕ್ತಿ ಅಭಿಯಾನ ಕೇಂದ್ರ ತಂಡದ ನೋಡಲ್ ಅಧಿಕಾರಿ ಆರ್‌.ಕೆ. ಚಂದೋಳಿಯ ಅಧಿ ಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾ ಪಂಚಾಯಿತಿ ಸಭಾಂಗ ಣದಲ್ಲಿ ಗುರುವಾರ ಏರ್ಪಡಿಸಿದ್ದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನೀರಿನ ಸಂರಕ್ಷಣೆಗೆ ಚೆಕ್‌ಡ್ಯಾಂ ನಿರ್ಮಾಣ, ಮಳೆ ನೀರು ಕೊಯ್ಲು ಅಳವಡಿಕೆ ಸೇರಿ ಜಲಮೂಲ ಸಂರಕ್ಷಣೆಗೆ ಮುಂದಾಗ ಬೇಕು. ಅಲ್ಲದೇ ಜಲಮೂಲ ರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದು ಇಒಗಳಿಗೆ ಸೂಚಿಸಿದರು.

ಕೆರೆ-ಕುಂಟೆಗಳಲ್ಲಿ ನೀರು ಶೇಖರಣೆ ಕ್ರಮ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಬವಣೆ ನೀಗಿಸಲು ಕೆರೆ-ಕುಂಟೆಗಳಲ್ಲಿ ನೀರು ಶೇಖರಣೆ ಕ್ರಮ ಅನುಸರಿಸುತ್ತಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ನೀರಿನ ಕೊರತೆ ಸ್ವಲ್ಪಮಟ್ಟಿಗೆ ನಿವಾರಣೆ ಯಾಗುತ್ತಿದೆ. ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ಬೆಳೆ ಬೆಳೆಯಲು ಸಾಲ ಸೌಲಭ್ಯ ನೀಡಲಾಗುತ್ತಿದೆ.

ಅಲ್ಲದೆ ಋತುಕಾಲಿಕ ಬೆಳೆ ಬೆಳೆಯುವ ಬಗ್ಗೆ ರೈತರಿಗೆ ಅರಿವು ಮೂಡಿಸಲಾಗುತ್ತಿದೆ. ರೈತರಿಗೆ ಉಪಯೋಗವಾಗು ವಂತೆ ಕೃಷಿ ಹೊಂಡ ನಿರ್ಮಿಸಿ ನೀರು ಶೇಖರಿಸಲಾಗು ತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ ಮಾಹಿತಿ ನೀಡಿದಾಗ ಪ್ರತಿ ಕ್ರಿಯಿಸಿದ ಕೇಂದ್ರ ತಂಡ ಜಿಲ್ಲೆಯಲ್ಲಿ ಅಪೂರ್ಣಗೊಂಡಿರುವ ಚೆಕ್‌ಡ್ಯಾಂ, ಗೋಕಟ್ಟೆ ನಿರ್ಮಾಣ ಕೂಡಲೇ ಪೂರ್ಣ ಗೊಳಿಸುವಂತೆ ಸೂಚಿಸಿದರು.

ಮಳೆ ನೀರು ಕೊಯ್ಲು ಪದ್ಧತಿಗೆ ಆದ್ಯತೆ: ಜಿಪಂ ಮುಖ್ಯ ಕಾರ್ಯನಿವಾಹಣಾಧಿಕಾರಿ ಶುಭಾ ಕಲ್ಯಾಣ್‌ ಮಾತನಾಡಿ, ಜಲಶಕ್ತಿ ಅಭಿಯಾನ ಜನಾಂದೋಲನವಾಗಿ ರೂಪಿಸಬೇಕಿದೆ ಎಂದು ಹೇಳಿದರು.

Advertisement

ನೀರಿನ ಕೊರತೆ ನೀಗಿಸಲು ಜಿಲ್ಲೆ ಯಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರಲ್ಲದೇ ಕಳೆದ ಬಾರಿ ಜಿಲ್ಲೆಗೆ ಕೇಂದ್ರ ತಂಡ ಭೇಟಿ ನೀಡಿದಾಗ ಚೆಕ್‌ಡ್ಯಾಂ ನಿರ್ಮಾಣ ಮಾಡುವಂತೆ ನಿರ್ದೇಶನ ನೀಡಿತ್ತು. ಈ ಬಾರಿ ತಂಡ ಸ್ಥಳ ಪರಿಶೀಲನೆ ನಡೆಸುವಾಗ ಸೂಕ್ತ ಮಾಹಿತಿಯೊಂದಿಗೆ ಸಂಬಂಧಪಟ್ಟ ಅಧಿಕಾರಿಗಳು ಹಾಜರಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಜಿಲ್ಲೆಗೆ ಮೂರನೇ ಬಾರಿ ಕೇಂದ್ರ ತಂಡ ಭೇಟಿ ನೀಡಿ ನಡೆಸಿದ ಸಭೆಯಲ್ಲಿ ಜಲಶಕ್ತಿ ಅಭಿಯಾನ ಕೇಂದ್ರ ತಂಡದ ಸಂಜಯ್‌ ಶ್ರೀವತ್ಸ, ಬಲರಾಮ್‌ ಪ್ರಸಾದ್‌ ಭೀಮಲ್, ಕೆ.ಎ. ನಾಯ್ಡು, ಶ್ರೀಕಾಂತ್‌ ಕಂಬ್ಲೆ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಮೇಶ್‌, ತೋಟಗಾರಿಕೆ ಉಪನಿರ್ದೇಶಕ ಬಿ. ರಘು, ಯೋಜನಾ ಇಂಜಿನಿಯರ್‌ ಶ್ರೀನಿವಾಸ್‌, ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಕಾರ್ಯಪಾಲಕ ಅಭಿಯಂತರರು, ಇತರರಿದ್ದರು.

ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣಾ ಹಾಗೂ ರಾಷ್ಟ್ರೀಯ ಕೃತಕ ಗರ್ಭಧಾರಣೆ ಹಮ್ಮಿಕೊಳ್ಳಲಾಗಿತ್ತು.

ಹೊನ್ನವಳ್ಳಿಯ ಪಶುಪಾಲನಾ ಇಲಾಖೆ ಡಾ. ಮೃತ್ಯುಂಜಯ ಕಾರ್ಯಕ್ರಮ ಉದ್ಘಾಟಿಸಿದರು. ಕೆವಿಕೆ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ವಿ. ಗೋವಿಂದಗೌಡ ಕಾರ್ಯಕ್ರಮ ಮಾಹಿತಿ ನೀಡಿದರು.

ಕಾಲು ಮತ್ತು ಬಾಯಿ ಜ್ವರ, ಕಂದು ರೋಗದ ಸಂಪೂರ್ಣ ನಿಯಂತ್ರಣ ಹಾಗೂ ನಿರ್ಮೂಲನೆ ಬಗ್ಗೆ ಕೊನೇ ಹಳ್ಳಿಯ ಪಶು ಸಂಗೋಪನೆ ಪಾಲಿಟೆಕ್ನಿಕ್‌ ಕಾಲೇಜು ಪ್ರಾಧ್ಯಾಪಕ ಡಾ. ನಾಗರಾಜ್‌, ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಕುರಿತು ಹೊನ್ನವಳ್ಳಿ ಕೃಷಿ ಅಧಿಕಾರಿ ಕಿರಣ್‌ ಮತ್ತು ಭಾರತ ಸರ್ಕಾರದ ವಿವಿಧ ಕಾರ್ಯಕ್ರಮಗಳ ಕುರಿತು ಜ್ಞಾನಜ್ಯೋತಿ ಅರ್ಥಿಕ ಸಾಕ್ಷರತಾ ಕೇಂದ್ರದ ಹಿರಿಯ ಸಮಾಲೋಚಕಿ ರೇಖಾ ಮಾಹಿತಿ ನೀಡಿದರು.

ತಾಲೂಕಿನ ಪಶು ವೈದ್ಯಕೀಯ ಸೇವಾ ಇಲಾಖೆಯ ಎಲ್ಲಾ ವೈದ್ಯರು ಸೇರಿ 100ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು. 32 ಹಸುಗಳಿಗೆ ಕಾಲು ಮತ್ತು ಬಾಯಿ ಜ್ವರದ ಲಸಿಕೆ ಹಾಕಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next