ದೊಡ್ಡಬಳ್ಳಾಪುರ: ಕೋವಿಡ್ ಪ್ರಕರಣ ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆ ಆಸ್ಪತ್ರೆಗಳಲ್ಲಿ ಆಮ್ಲಜನಕದ ಅಗತ್ಯ ಹೆಚ್ಚಾಗಿದೆ. ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿ ತಯಾರಾಗುವ ಆಮ್ಲಜನಕ ಸಿಲಿಂಡರ್‌ಗಳನ್ನುಪೂರೈಕೆ ಮಾಡುವಲ್ಲಿ ಲೋಪವಾಗದಂತೆ ತಾಲೂಕಿನ ಆಸ್ಪತ್ರೆಗಳಿಗೆ ಪ್ರಥಮ ಆದ್ಯತೆ ನೀಡಬೇಕಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಆಮ್ಲಜನಕ
ತಯಾರಿಕಾ ಕಂಪನಿಗಳಿಗೆ ಮನವಿ ಮಾಡಿದರು. ನಗರದ ಎಪಿಎಂಸಿ ಸಭಾಂಗಣದಲ್ಲಿ ನಡೆದ ಆಮ್ಲಜನಕ ತಯಾರಿಕಾ ಕಂಪನಿಗಳು ಹಾಗೂ ಸರ್ಕಾರಿ, ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ನಡೆದ ಸಭೆ ನಡೆಸಿದರು. ಆಸ್ಪತ್ರೆಗಳಿಗೆ ಅಗತ್ಯವಿರುವಷ್ಟು ಆಮ್ಲಜನಕ ಸಿಲಿಂಡರ್‌ಗಳನ್ನು ಕಂಪನಿಗಳುನೀಡಬೇಕಿದೆ. ಇದಲ್ಲದೇ ತಾಲೂಕಿನ ಇಸ್ತೂರುಕೊವಿಡ್ ಸೆಂಟರ್‌ನಲ್ಲಿ 60 ಹಾಸಿಗೆಗಳು, ಮಾಡೇಶ್ವರವಸತಿ ಶಾಲೆಯಲ್ಲಿ ಕೊವಿಡ್ ಸೆಂಟರ್ ಆರಂಭಿಸಲಾಗಿದ್ದು, ಇಲ್ಲಿಯೂ ಆಮ್ಲಜನಕ ಸಿಲಿಂಡರ್‌ಗಳ ಅವಶ್ಯಕತೆ ಇದೆ. ಇಲ್ಲಿಯೂಪೂರೈಸಲು ಸಿದ್ಧತೆ ಮಾಡಿಕೊಳ್ಳಿ. ಸ್ಥಳೀಯ ಸಂಪನ್ಮೂಲ ಬಳಸಿಕೊಳ್ಳುವ ಕಂಪನಿಗಳು ಇಲ್ಲಿನವರಿಗೆ ಆದ್ಯತೆನೀಡುವುದು ಹೊಣೆಯಾಗಿದೆ ಎಂದರು.
ಪ್ರಾಕ್ಸಿ ಆರ್ ಕಂಪನಿಯ ವ್ಯವಸ್ಥಾಪಕ ಕಾಮರಾಜ್‌ಮಾತನಾಡಿ, ನಮ್ಮ ಕಂಪನಿಯಿಂದ ಸ್ಥಳೀಯ ಸರ್ಕಾರಿಆಸ್ಪತ್ರೆಗಳಿಗೆ ಸರಬರಾಜು ಮಾಡಿ ಆದ್ಯತೆನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳ ಸಿಲಿಂಡರ್‌ಗಳ ಗುಣಮಟ್ಟದ ಬಗ್ಗೆ 5 ವರ್ಷಗಳಿಗೊಮ್ಮೆ ಮಾಡಿಸುವಪ್ರಮಾಣ ಪತ್ರದ ಅಗತ್ಯವಿದೆ. ನಮ್ಮ ಕಂಪನಿಗೆಪ್ರಮಾಣ ಪತ್ರ ನೀಡುವ ಸಂಸ್ಥೆ ಹೈದರಾಬಾದ್ ನಲ್ಲಿದ್ದು, ಕೆಲವು ವೇಳೆ ವಿಳಂಬವಾಗುತ್ತದೆ.
ವೈದ್ಯರಾದ ಡಾ.ಎಚ್.ಜಿ.ವಿಜಯಕುಮಾರ್, ಡಾ.ಮೂರ್ತಿ ಕುಮಾರ್ ಮಾತನಾಡಿ, ಪ್ರಮಾಣ ಪತ್ರಕ್ಕಾಗಿ ಆಮ್ಲಜನಕ ಸಿಲಿಂಡರ್‌ಗಳನ್ನು ವಿಳಂಬ ಮಾಡುವುದು ಈ ಪರಿಸ್ಥಿತಿಯಲ್ಲಿ ಸೂಕ್ತವಲ್ಲ.ಸಿಲಿಂಡರ್ ಪರೀಕ್ಷೆಗೆ ಕೊವಿಡ್ ಕಾರಣದಿಂದ ವಿಳಂಬವಾಗುತ್ತಿದೆ. ಕಂಪನಿ ನಮ್ಮೊಂದಿಗೆಸಹಕರಿಸಬೇಕು. ಪ್ರಮಾಣ ಪತ್ರ ಪಡೆದ ನಿಮ್ಮದೇಕಂಪನಿಯ ಸಿಲಿಂಡರ್‌ಗಳನ್ನು ನೀಡಿ, ವಾಪಾಸ್‌ಪಡೆಯಿರಿ. ಆಸ್ಪತ್ರೆಗೆ ಕನಿಷ್ಟ 10 ಸಿಲಿಂಡರ್‌ಗಳುಬೇಕಿವೆ. ನಿಮ್ಮಲ್ಲಿ ತಯಾರಾಗುವ ಉತ್ಪನ್ನದ ಶೇ.5ಭಾಗ ನೀಡಿದರೂ ತಾಲೂಕಿನ ಎಲ್ಲಾ ಆಸ್ಪತ್ರೆಗಳಿಗೆಆಮ್ಲಜನಕ ಸಿಲಿಂಡರ್‌ಗಳನ್ನು ಸರಬರಾಜು ಮಾಡಬಹುದಾಗಿದೆ ಎಂದರು.
ತಹಶೀಲ್ದಾರ್ ಟಿ.ಎಸ್.ಶಿವರಾಜ್ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಪರ ಮೇಶ್ವರ, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಡಾ.ರಮೇಶ್, ಸೇರಿದಂತೆ ತಾಲೂಕಿನ ಖಾಸಗಿ ಆಸ್ಪತ್ರೆಯ ವೈದ್ಯರು ಭಾಗವಹಿಸಿದ್ದರು.