Advertisement

ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ

05:20 PM Aug 09, 2019 | Team Udayavani |

ಕೊಳ್ಳೇಗಾಲ: ಪಟ್ಟಣದ ಮಹದೇಶ್ವರ ಸ್ವತಂತ್ರ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ನೂತನವಾಗಿ ಒಳ ಕ್ರೀಡಾಂಗಣ ನಿರ್ಮಾಣಕ್ಕೆ ಶಾಸಕ ಎನ್‌.ಮಹೇಶ್‌ ಬುಧವಾರ ಭೂಮಿಪೂಜೆ ಸಲ್ಲಿಸಿದರು. ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಸುಮಾರು 3.40 ಕೋಟಿ ರೂ. ಅಂದಾಜಿನಲ್ಲಿ ಮೂರು ಅಂತಸ್ತಿನ ಒಳಕ್ರೀಡಾಂಗಣ ಒಂದು ವರ್ಷದ ಒಳಗಾಗಿ ಪೂರ್ಣಗೊಳ್ಳಲಿದೆ ಎಂದರು.

Advertisement

ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್‌, ಖೋಖೋ, ಕಬಡ್ಡಿ, ಈಜುಕೊಳ, ಕ್ರೀಡಾಪಟುಗಳು ಕ್ರೀಡಾ ಸಮವಸ್ತ್ರ ಧರಿಸುವ ಕೋಣೆ ಸೇರಿದಂತೆ ವಿವಿಧ ಆಟಗಳನ್ನು ನಡೆಸಲು ಕಟ್ಟಡ ನಿರ್ಮಾಣ ವಾಗಲಿದೆ ಎಂದು ಮಾಹಿತಿ ನೀಡಿದರು.

ಕಟ್ಟಡವನ್ನು ಮೈಸೂರಿನ ಚಾನಸ್ಯ ಕಾರ್ಲೆ ಇನಾøಟೆಕ್‌ ಕಂಪನಿಯ ಟಿ.ದಿನೇಶ್‌ ಕಾರ್ಲೆ ಅವರು ಪಡೆದುಕೊಂಡಿದ್ದು, ಗುಣಮಟ್ಟದ ಕಟ್ಟಡವನ್ನು ನಿರ್ಮಾಣ ಮಾಡಿ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದರು.

ಕಳೆದ 2015-16ರಲ್ಲಿ ಒಳ ಕ್ರೀಡಾಂಗಣ ನಿರ್ಮಾಣಕ್ಕೆ ಸರ್ಕಾರ ಹಣ ಮಂಜೂರು ಮಾಡಿತ್ತು. ಗುತ್ತಿಗೆದಾರರು ಬರದೆ ಕುಂಠಿತ ವಾಗಿತ್ತು. ಈಗ ಮೈಸೂರಿನ ಕಂಪನಿಯೊಂದು ಗುತ್ತಿಗೆ ಪಡೆದು ಕೊಂಡಿದೆ. ಜಿ.ತ್ರಿ ಮಾದರಿಯ ಕೇಟಗರಿಯಲ್ಲಿ ನಿರ್ಮಾಣ ಮಾಡಿ ಕ್ರೀಡಾಪಟುಗಳ ಸೌಲಭ್ಯಕ್ಕೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಕ್ರೀಡಾಂಗಣದಲ್ಲಿ ಎಲ್ಲಾ ತರಹದ ಆಟಗಳು ಇದ್ದು, ಕ್ರೀಡಾಪಟುಗಳು ಹೆಚ್ಚು ಹೆಚ್ಚು ಕ್ರೀಡೆಯನ್ನು ಕಲಿತು ಉನ್ನತ ಕ್ರೀಡೆಗಳಲ್ಲಿ ಭಾಗವಹಿಸಿ ಹೆಚ್ಚು ಪ್ರಶಸ್ತಿ ಗಳಿಸಿ ತಾಲೂಕಿಗೆ ಕೀರ್ತಿ ತರಬೇಕೆಂದು ಮನವಿ ಮಾಡಿದರು. ನಗರಸಭಾ ಸದಸ್ಯರಾದ ಶಂಕರನಾರಾಯಣ ಗುಪ್ತ, ಶಿರಿಶ, ಜಿ.ಪಿ.ಶಿವಕುಮಾರ, ರಾಮಕೃಷ್ಣ, ಜಿಲ್ಲಾ ಇಇ ರವಿ, ನಗರಸಭಾ ಪೌರಾಯುಕ್ತ ನಾಗಶೆಟ್ಟಿ, ವ್ಯವಸ್ಥಾಪಕ ಲಿಂಗರಾಜು, ಇಇ ನಾಗೇಂದ್ರ, ಮಹದೇಶ್ವರ ಕಾಲೇಜಿನ ಪ್ರಾಂಶುಪಾಲ ಸೀಗನಾಯಕ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next