Advertisement

ಗುಣಮಟ್ಟದ ಬೋಧನೆಗೆ ಆದ್ಯತೆ ನೀಡಿ

05:14 PM Mar 19, 2022 | Team Udayavani |

ನಾರಾಯಣಪುರ: ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ಹಾಗೂ ಅಗತ್ಯ ಮಾರ್ಗದರ್ಶನ ನೀಡುವ ಶಿಕ್ಷಕರನ್ನು ಸಮಾಜ ಶ್ರೇಷ್ಠ ಭಾವನೆಯಿಂದ ನೋಡುತ್ತದೆ ಎಂದು ಸುರಪುರ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ರೆಡ್ಡಿ ಹೇಳಿದರು.

Advertisement

ಸಮೀಪದ ಗೆದ್ದಲಮರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಭಾರತ ಸೇವಾ ದಳದ ಶಾಖೆ ಉದ್ಘಾಟನೆ, ಶಾಲಾ ವಾರ್ಷಿಕೋತ್ಸವ ಹಾಗೂ 10ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತ ಸೇವಾದಳ ನಿವೃತ್ತ ಉಪ-ದಳಪತಿ ಹ.ಸಂ. ಕಾಶಿನಕುಂಟಿ ಮಾತನಾಡಿ, ಸೇವೆಗಾಗಿ ಬಾಳು ಎಂಬುದು ನಾ.ಸು. ಹಡೇìಕರ್‌ ಅವರ ಕನಸಾಗಿತ್ತು. ಗುರು-ಹಿರಿಯರನ್ನು ಗೌರವಿಸುವಿಕೆ, ದೇಶ ಪ್ರೇಮ ಸೇವಾದಳದ ಮುಖ್ಯ ಧ್ಯೇಯ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಹಣಮಂತ್ರಾಯ ಜಾಲಹಳ್ಳಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಮಲ್ಲಣ್ಣ ದೊಡಮನಿ, ಸಿದ್ಧರಾಮರೆಡ್ಡಿ ಸಾಹು, ಬಸಯ್ಯ ದ್ಯಾಪುರಮುತ್ಯಾ, ಬಸನಗೌಡ ವಠಾರ, ಶಂಕರ ಲಮಾಣಿ, ನೀಲಮ್ಮ ನಾಗರಬೆಟ್ಟ, ವೆಂಕಟೇಶ ರಾಠೊಡ ಸಾಹುಕಾರ, ಸಂಗಯ್ಯ ಬಾಚಿಹಾಳ, ಅಮರೇಶ ದೇವರಗಡ್ಡಿ, ನಿಂಗಣ್ಣ ಬಿರಾದಾರ, ದೇವಣ್ಣ ಬಳಿ, ಸೋಮನಗೌಡ, ಬಸಪ್ಪ ಕಟ್ಟಿಮನಿ, ಸೈಯದ್‌ ಕಮರುದ್ದಿನ್‌, ಬಸನಗೌಡ ಬಿರಾದಾರ, ಸಿಆರ್‌ಪಿ ಅಮರೇಶ ಅಂಗಡಿ, ಶಿವರೆಡ್ಡಿ, ಯಲ್ಲಪ್ಪ, ಶಿವಪುತ್ರ, ಭೀಮಣ್ಣ, ದುರಗೇಶ, ಹಣಮಂತ್ರಾಯ, ಮುಖ್ಯ ಶಿಕ್ಷಕ ವಿ.ಎಂ. ಬೆಳ್ಳುಬ್ಬಿ, ಅಮರೇಶ, ತೀರ್ಥಪ್ಪ, ಲಾಲಪ್ಪ ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆದವು.

Advertisement

Udayavani is now on Telegram. Click here to join our channel and stay updated with the latest news.

Next