ನೆಲಮಂಗಲ: ಜನರು ಹಣದಿಂದಲೇ ಜೀವನ ಮಾಡಲು ಸಾಧ್ಯ ಎಂಬ ಭ್ರಮೆಯನ್ನು ಬಿಟ್ಟುಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕು,ಆಗ ಮಾತ್ರ ಕೊರೊನಾದಂತಹ ಸೋಂಕಿನಿಂದದೂರವಾಗಬಹುದು ಎಂದು ಸನಾತನ ಚಾರಿಟಬಲ್ ಟ್ರಸ್ಟ್‌ನ ಎ.ವಿ ಶ್ರೀನಿವಾಸನ್ ಸ್ವಾಮೀಜಿ ಹೇಳಿದರು.
ತಾಲೂಕಿನ ಗೊಲ್ಲಹಳ್ಳಿ ಗ್ರಾಮದಲ್ಲಿ ಎನ್‌ಡಿಎ ಅಧ್ಯಕ್ಷ ಮಲ್ಲಯ್ಯ ಆಯೋಜಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಹಾಗೂ ವೈದ್ಯರಿಗೆ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಕೊರೊನಾ ಸೋಂಕುಜಗತ್ತಿನ ಜನರನ್ನು ಸಂಕಷ್ಟಕ್ಕೆ ಗುರಿ ಮಾಡಿದೆ.
ಕೊರೊನಾ ಸೋಂಕು ಕಡಿಮೆಯಾಗಿದೆ ಎಂದು ಮಾಸ್ಕ್, ಅಂತರ ಮರೆತು ಸಂಚಾರ ಮಾಡಿದರೆ ಸಮಸ್ಯೆ ಹೆಚ್ಚಾಗುತ್ತದೆ. ಮೂರನೇ ಅಲೆಗೆ ನಾವೆಲ್ಲರೂ ಜಾಗೃತರಾಗಬೇಕಾಗಿದೆ. ಹಣ ಸಂಪಾದನೆಗಿಂತ ಆರೋಗ್ಯ ಸಂಪಾದನೆಯ ಕಡೆ ಹೆಚ್ಚು ಗಮನವಹಿಸಿ, ಲಸಿಕೆಯನ್ನು ಕಡ್ಡಾಯವಾಗಿಪಡೆದುಕೊಳ್ಳಬೇಕು ಎಂದರು.
ಆದರ್ಶ ಗ್ರಾಮಕ್ಕೆ ಶ್ರಮ: ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್. ಮಲ್ಲಯ್ಯ ಮಾತನಾಡಿ, ಆದರ್ಶ ಗ್ರಾಮ ಮಾಡುವ ಕನಸು ನನಸಾಗಲು ನಮ್ಮ ಪಂಚಾಯಿತಿಯ ಗ್ರಾಮಪಂಚಾಯಿತಿ ಎಲ್ಲಾ ಸದಸ್ಯರು ಹಾಗೂ ಮುಖಂಡರು ಶ್ರಮಿಸುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕ ಆರಂಭವಾಗಿದ್ದು, ಜನರಿಗೆ ನೀರಿನ ಕ್ಯಾನ್‌ಗಳನ್ನು ನೀಡಿದ್ದೇವೆ. ವೈದ್ಯರಾದ ಚೌಡಯ್ಯನವರ ಸೇವೆಗೆ ಬೆಳ್ಳಿ ಕಿರೀಟ ನೀಡುವ ಆಸೆಯಿತ್ತು. ಆದರೆ, ಅವರು ಈ ಸಮಯದಲ್ಲಿ ಬೇಡ ಎಂದ ಕಾರಣಕ್ಕೆ ಆ ಹಣದಲ್ಲಿ ವಿದ್ಯುತ್ ಕಂಬಗಳಿಗೆ ಎಲ್‌ಇಡಿ ಬಲ್ಪ್ಗಳನ್ನು ಅಳವಡಿಸಿದ್ದೇವೆ ಎಂದು ತಿಳಿಸಿದರು.
ವಾರಿಯರ್ಸ್‌ಗೆ ಗೌರವ: ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಮಾಡುತ್ತಿರುವ ಡಾ.ಚೌಡಯ್ಯ ಅವರಿಗೆ ಬೆಳ್ಳಿ ದೀಪದಕಂಬಗಳನ್ನು ನೀಡಿ ಸನ್ಮಾನ ಮಾಡಲಾಯಿತು.ಆಶಾಕಾರ್ಯಕರ್ತೆಯರು, ವೈದ್ಯರು, ಗ್ರಾ.ಪಂ ಸಿಬ್ಬಂದಿ, ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿ ಗೌರವಿಸಲಾಯಿತು.
ತಾಲೂಕು ಆರೋಗ್ಯಾಧಿಕಾರಿಹರೀಶ್, ಇಒಮೋಹನ್ ಕುಮಾರ್, ಸಹಾಯಕ ನಿರ್ದೇಶಕಪದ್ಮನಾಭ್, ಪಿಡಿಒ ಸುನೀತ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ, ಸದಸ್ಯ ಹರ್ಷ,ಸುರೇಶ್, ಅನುಸೂಯ, ನಿವೃತ್ತ ಡಿಹೆಚ್‌ಒಡಾ.ನಾಗರಾಜು, ಬಿಜೆಪಿ ಮುಖಂಡ ಜಗದೀಶ್ ಚೌಧರಿ, ರುದ್ರಸ್ವಾಮಿ, ಬೆಸ್ಕಾಂ ನಾಗರಾಜು ಹಾಜರಿದ್ದರು.