Advertisement

ಸಂಘಟನೆ ಜತೆಗೆ ಅಭಿವೃದ್ಧಿಗೆ ಆದ್ಯತೆ: ಹರೀಶ್‌ ಪೂಂಜ

10:09 PM Sep 15, 2019 | Sriram |

ಬೆಳ್ತಂಗಡಿ: ಸಂಘಟನಾತ್ಮಕವಾಗಿ ಅತೀ ಹೆಚ್ಚು ಸದಸ್ಯತ್ವ ಹೊಂದಿರುವ ಬಿಜೆಪಿಯು ಕೇಂದ್ರ ಹಾಗೂ ರಾಜ್ಯದಲ್ಲಿ ಅಭಿವೃದ್ಧಿಯ ಆಡಳಿತ ನೀಡುವ ಮೂಲಕ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ. ಸಂಘಟನೆಯ ಸದಸ್ಯತ್ವ ಅಭಿಯಾನದ ಜತೆಗೆ ಬೂತ್‌ ಮಟ್ಟದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಹರೀಶ್‌ ಪೂಂಜ ಹೇಳಿದರು.

Advertisement

ಬಿಜೆಪಿ ವತಿಯಿಂದ ಬೆಳ್ತಂಗಡಿ ಸಂತಕಟ್ಟೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಭಾ ಭವನದಲ್ಲಿ ಹಮ್ಮಿಕೊಂಡ ಸಂಘಟನ ಪರ್ವ-2019 ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಯನ್ನು ಮನೆ ಮನೆಗೆ ತಲುಪಿ ಸುವಲ್ಲಿ ಬೂತ್‌ ಮಟ್ಟದ ಕಾರ್ಯಕರ್ತರು ಶ್ರಮಿಸಬೇಕಿದೆ. ಮಂಗಳೂರು ವಿಭಾಗದಲ್ಲಿ ಅತೀ ಹೆಚ್ಚು 23 ಸಾವಿರ ಸದಸ್ಯತ್ವವನ್ನು ಹೊಂದಿರುವ ಬೆಳ್ತಂಗಡಿ ಮೊದಲ ಸ್ಥಾನ ದಲ್ಲಿದ್ದು, ಮುಂದೆ 50 ಸಾವಿರ ಸದಸ್ಯತ್ವ ಗುರಿ ನಮ್ಮದಾಗಲಿ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್‌ ಕೋಟ್ಯಾನ್‌, ವಿಭಾಗ ಸಹಪ್ರಭಾರಿ ಪ್ರತಾಪ್‌ ಸಿಂಹ ನಾಯಕ್‌, ಮಾಜಿ ಶಾಸಕ ಪ್ರಭಾಕರ ಬಂಗೇರ, ಬಿಜೆಪಿ ಚುನಾವಣಾ ಧಿಕಾರಿ ಬಾಲಕೃಷ್ಣ ವಿ. ಶೆಟ್ಟಿ, ಸಹಾಯಕ ಚುನಾವಣಾಧಿಕಾರಿ ಸದಾನಂದ ಪೂಜಾರಿ ಉಂಗಿಲಬೈಲು ಉಪಸ್ಥಿತರಿದ್ದರು. ಶಕ್ತಿ ಕೇಂದ್ರಗಳ ಪದಾಧಿಕಾರಿಗಳು, ಗ್ರಾಮ ಸಮಿತಿ ಅಧ್ಯಕ್ಷರು, ಬೂತ್‌ ಸಮಿತಿ ಅಧ್ಯಕ್ಷರು, ಸದಸ್ಯರು, ತಾ.ಪಂ., ಜಿ.ಪಂ. ಸದಸ್ಯರು, ಗ್ರಾ.ಪಂ. ಅಧ್ಯಕ್ಷರು, ಉಪಾ ಧ್ಯಕ್ಷರು ಭಾಗವಹಿಸಿದ್ದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಬೆಳಾಲು ಸ್ವಾಗತಿಸಿ, ಬಿಜೆಪಿ ಪ್ರಮುಖ್‌ ರಾಜೇಶ್‌ ಪೆರ್ಮುಡ ನಿರೂಪಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಭಾಕರ್‌ ಉಪ್ಪಡ್ಕ ವಂದಿಸಿದರು.

37 ಲಕ್ಷ ರೂ. ಜಮೆ
ಬೆಳ್ತಂಗಡಿ ತಾಲೂಕಿನಲ್ಲಿ ನೆರೆಯಿಂದ ತತ್ತರಿಸಿದ ಪ್ರದೇಶಗಳಿಗೆ ಸಚಿವ ಸಂಪುಟ ರಚನೆಯಾಗುವ ಮುನ್ನವೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಾಲೂಕು ಮಾತ್ರವಲ್ಲದೆ ರಾಜ್ಯವನ್ನು ಸುತ್ತಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಪ್ರಸಕ್ತ ಎನ್‌ಡಿಆರ್‌ಎಫ್‌ ಗೈಡ್‌ಲೈನ್‌ ಪ್ರಕಾರ ರಾಜ್ಯದ 191 ಮನೆ ಕಳೆದುಕೊಂಡವರ ಪೈಕಿ ಬೆಳ್ತಂಗಡಿಯ 61 ಸಂತ್ರಸ್ತ ಕುಟುಂಬಗಳ ಖಾತೆಗೆ ರಾಜ್ಯ ಸರಕಾರ ನೇರವಾಗಿ 37 ಲಕ್ಷ ರೂ. ಜಮೆ ಮಾಡಿದೆ. ಅಧಿಕಾರಿಗಳ ಸಹಕಾರ, ಕಾರ್ಯಕರ್ತರ ಶ್ರಮದಿಂದ ನೆರೆ ಸಂತ್ರಸ್ತರ ಪರಿಹಾರ ಸಮರ್ಪಕವಾಗಿ ವಿತರಣೆಯಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next