Advertisement

ಮಕ್ಕಳ ಶಿಕ್ಕಣಕ್ಷೆ ಆದ್ಯತೆ ನೀಡಿ: ನವಲಿಹಿರೇಮಠ

01:21 PM Jan 24, 2021 | Team Udayavani |

ಹುನಗುಂದ: ತಾಲೂಕಿನ ಬೀದಿ ಬದಿ ವ್ಯಾಪಾರಿಗಳು ನಿಮ್ಮ ವ್ಯಾಪಾರದ ಜತೆಗೆ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಎಸ್‌ಆರ್‌ಎನ್‌ಇ ಫೌಂಡೇಶನ್‌ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್‌.ನವಲಿಹಿರೇಠ ಹೇಳಿದರು.

Advertisement

ಪಟ್ಟಣದ ವಿ.ಮ. ವೃತ್ತದಲ್ಲಿ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘಟನೆಯ ಒಕ್ಕೂಟದ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ರಾಷ್ಟೀಯ ಬೀದಿ ಬದಿ ವ್ಯಾಪಾರಸ್ಥರ ದಿನಾಚರಣೆ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವತ್ತ ಗಮನ ಹರಿಸಿ. ಉನ್ನತ ಅ ಧಿಕಾರಿಯನ್ನಾಗಿ ಮಾಡುವ ಕೆಲಸವಾಗಬೇಕು. ಬೀದಿ ಬದಿ ವ್ಯಾಪಾರಸ್ಥ ಸಂಘದಿಂದ ಹತ್ತು ಹಲವು ಕಾರ್ಯಕ್ರಮ ಮಾಡುವ ಮೂಲಕ ಸಂಘಟನೆಯನ್ನು ಉನ್ನತ ಮಟ್ಟದಲ್ಲಿ ಬೆಳೆಯಲಿ. ಅದಕ್ಕಾಗಿ ನಮ್ಮ ಫೌಂಡೇಶನ್‌ದಿಂದ 5 ಲಕ್ಷ ರೂ. ನೀಡುವುದಾಗಿ ಹೇಳಿದರು.

ಬಡತನದಲ್ಲಿರುವ ವ್ಯಾಪಾರಿಗಳಿಗೆ ಸಾಲದ ರೂಪದಲ್ಲಿ ನೀಡಿ ಸಕಾಲಕ್ಕೆ ಮರಳಿ ಪಡೆಯುವ ಕಾರ್ಯವಾಗಲಿ. ಇನ್ನು ಬೀದಿ ವ್ಯಾಪಾರಿಗಳ ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 90 ಅಂಕ ಪಡೆದ ವಿದ್ಯಾರ್ಥಿಗಳಿಗೆ ಎಸ್‌ಆರ್‌ಎನ್‌ಇ ಫೌಂಡೇಶನ್‌ ಮೂಲಕ ಅವರನ್ನು ದತ್ತು ಪಡೆದು ಓದಿಸಲಾಗುವುದು ಎಂದರು.

ಇದನ್ನೂ ಓದಿ:ಜಮೀನಿಗೆ ಒಂಟಿ ಸಲಗ ಲಗ್ಗೆ: ರಾಗಿ ಬೆಳೆ ಸಂಪೂರ್ಣ ನಾಶ

ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್‌ ಬಸವರಾಜ ನಾಗರಾಳ ಮಾತನಾಡಿ, ಪ್ರಧಾನಮಂತ್ರಿ ಆತ್ಮ ನಿರ್ಭರ ಭಾರತ ಯೋಜನೆಯಡಿಯಲ್ಲಿ ಪಟ್ಟಣದ 247 ಜನ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಅದರಲ್ಲಿ ಕೆಲ ಜನರಿಗೆ ಸಾಲ ಮಂಜೂರಾಗಿದೆ. ಉಳಿದ ಫಲಾಭವಿಗಳಿಗೂ ಸಾಲ ಮಂಜೂರಾಗಲಿದೆ. ಶೀಘ್ರ ಸಾಲ ಮೇಳ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

Advertisement

ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಅಧಿ ಕಾರಿ ಎಸ್‌.ಎಸ್‌. ಯರಗುಡಿ ಮಾತನಾಡಿದರು. ಸಂಘದ ತಾಲೂಕು ಅಧ್ಯಕ್ಷ ಮಹಾಂತೇಶ ಹೂಗಾರ, ನಗರ ಘಟಕದ ಅಧ್ಯಕ್ಷ ದುರಗಪ್ಪ ಬೆಳಗಲ್ಲ, ಪ್ರಧಾನ ಕಾರ್ಯದರ್ಶಿ ಸಂಗಪ್ಪ ಭಜಂತ್ರಿ, ನಗರ ಘಟಕದ ಪ್ರಧಾನ ಕಾರ್ಯದರ್ಶಿ ಸಯ್ಯದ್‌ ಖಾಜಾ ಅಮೀನ್‌ ಫೀರಜಾದೆ, ಮುಖಂಡರಾದ ಮಲ್ಲಿಕಾರ್ಜುನ ಹೂಗಾರ, ಕರವೇ ನಗರ ಘಟಕದ ಅಧ್ಯಕ್ಷ ಶರಣು ಗಾಣಗೇರ, ಹರ್ಷದ ನಾಯಕ, ರಾಮಣ್ಣ ಭಜಂತ್ರಿ, ಖಾಜೇಸಾಬ ಬಾಗವಾನ್‌, ಮುನ್ನಾ ಬಾಗವಾನ್‌, ಎಸ್‌.ಎಚ್‌.ಪೀರಜಾದೆ, ವೀರೇಶ ಗಸನಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next