Advertisement

ಮಣಿಪಾಲ್‌ ಟೆಕ್ನಾಲಜೀಸ್‌:4ನೇ ಬಾರಿ ಪ್ರಿಂಟ್‌ವೀಕ್‌ ಇಂಡಿಯಾ ಪ್ರಶಸ್ತಿ

10:37 AM Dec 13, 2018 | Team Udayavani |

ಮಣಿಪಾಲ: ಮಣಿಪಾಲ್‌ ಟೆಕ್ನಾಲಜೀಸ್‌ ಸಂಸ್ಥೆ  ಪ್ರಿಂಟ್‌ ವೀಕ್‌ ಇಂಡಿಯಾದ 2018ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ನಾಲ್ಕನೇ ಬಾರಿ ಪ್ರಶಸ್ತಿ ಗಳಿಸಿದೆ.

Advertisement

ಮುಂಬಯಿಯ ಸೈಂಟ್‌ ರೇಗಿಸ್‌ನಲ್ಲಿ ನಡೆದ ಸಮಾರಂಭದಲ್ಲಿ ಗುಣಮಟ್ಟ ಹಾಗೂ ನಿರ್ವಹಣೆ ಎಂಬ ಎರಡು ವಿಭಾಗಗಳಲ್ಲಿ 20ಕ್ಕೂ ಅಧಿಕ ಮುದ್ರಣ ಸಂಸ್ಥೆಗಳಿಗೆ ಒಟ್ಟು 24 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಮಣಿಪಾಲ ಟೆಕ್ನಾಲಜೀಸ್‌ ಸಂಸ್ಥೆ ಈ ಹಿಂದೆ ಮೂರು ಬಾರಿ ಈ ಪ್ರಶಸ್ತಿ ಗಳಿಸಿತ್ತು. ಮಣಿಪಾಲ ಟೆಕ್ನಾಲಜೀಸ್‌, ಪ್ರಗತಿ ಆಫ್ಸೆಟ್‌, ಐಟಿಸಿ ಪಿಪಿಡಿ ಮತ್ತು ಸಿಲ್ವರ್‌ಪ್ಲ್ಯಾಂಟ್ ಪ್ರಸ್‌ನಂಥ ಉನ್ನತ ಸಂಸ್ಥೆಗಳು ಹಲವಾರು ಪ್ರಶಸ್ತಿಗಳನ್ನು ಗೆದ್ದರೆ ಹತ್ತು ಸಂಸ್ಥೆಗಳು ಇದೇ ಮೊದಲ ಬಾರಿ ಪ್ರಶಸ್ತಿಗಳಿಂದ ಪುರಸ್ಕೃತಗೊಂಡವು.

ಹೈದರಾಬಾದ್‌ ಮೂಲದ ಪ್ರಗತಿ ಮುದ್ರಣ ಸಂಸ್ಥೆ ತ್ರಿವಳಿ ಪ್ರಶಸ್ತಿಗಳಿಂದ ಪುರಸ್ಕೃತವಾಯಿತು. ವರ್ಷದ ಬುಕ್‌ ಪ್ರಿಂಟರ್‌(ಸ್ಪೆಶಾಲಿಟಿ), ವರ್ಷದ ಇನ್ನೊವೇಟಿವ್‌ ಪ್ರಿಂಟರ್‌ ಮತ್ತು ವರ್ಷದ ಸೋಶಿಯಲ್‌ ಸ್ಟೇಶನರಿ ಪ್ರಿಂಟರ್‌ ಎಂಬ ಪ್ರಶಸ್ತಿಗಳು ಸಂಸ್ಥೆಗೆ ಸಂದವು. ಮುಖ್ಯ ಅತಿಥಿಯಾಗಿದ್ದ ಗಲ್ಫ್ ಆಯಿಲ್‌ನ ಆಡಳಿತ ನಿರ್ದೇಶಕ ರವಿ ಚಾವ್ಲಾ ಅವರು ಉತ್ಪನ್ನವೊಂದರ ಮಾರಾಟದಲ್ಲಿ ಪ್ಯಾಕೇಜಿಂಗ್‌ನ ಮಹತ್ವವನ್ನು ವಿವರಿಸಿದರು. 

240 ಪ್ರವೇಶ ಪತ್ರ
ಈ ಬಾರಿ ನಡೆದ 10ನೇ ಪ್ರಿಂಟ್‌ ವೀಕ್‌ ಇಂಡಿಯಾ ಪ್ರಶಸ್ತಿಗಳಿಗೆ 105 ಕಂಪೆನಿಗಳಿಂದ 240 ಪ್ರವೇಶ ಪತ್ರ ಗಳು ಬಂದಿದ್ದವು. ಮುದ್ರಣ ಗ್ರಾಹಕರು, ಸೃಷ್ಟಿಶೀಲ ವಿನ್ಯಾಸಕಾರರು ಮತ್ತು ತಜ್ಞರ ನ್ನೊಳಗೊಂಡಿದ್ದ 21 ಮಂದಿಯ ತೀರ್ಪುಗಾರರ ಸಮಿತಿ 900ಕ್ಕೂ ಅಧಿಕ ಮಾದರಿಗಳನ್ನು ಮೌಲ್ಯಮಾಪನ ನಡೆಸಿ ವಿಜೇತರನ್ನು ನಿರ್ಧರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next