ಲಂಡನ್: ಇಲ್ಲಿನ ಪ್ರಿನ್ಸೆಸ್ ಡಯಾನಾ ಅವರು 1980 ರ ದಶಕದಲ್ಲಿ ಚಲಾಯಿಸುತ್ತಿದ್ದ ಕಾರು ಅವರು ಸಾವನ್ನಪ್ಪಿದ 25 ವರ್ಷಗಳ ಬಳಿಕ ಹರಾಜು ಪ್ರಕ್ರಿಯೆಯಲ್ಲಿ 650,000 ಪೌಂಡ್ಗಳಿಗೆ (61,07,558.21 ರೂ.) ಮಾರಾಟವಾಗಿದೆ.
ಪ್ರಿನ್ಸೆಸ್ ಡಯಾನಾ ಅವರು 1997 ರ ಆಗಸ್ಟ್ 31 ರಂದು ಪ್ಯಾರಿಸ್ನಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ತೀರಿಕೊಂಡ 25 ವರ್ಷಗಳ ಬಳಿಕ ಅವರ ಕಾರು ಹರಾಜಾಗಿದೆ. ವಿಶ್ವದಾದ್ಯಂತ ಬ್ರಿಟನ್ ಮತ್ತು ಡಯಾನಾ ಅವರ ಅಭಿಮಾನಿಗಳು ಅವರ ಪುಣ್ಯಸ್ಮರಣೆ ಆಚರಿಸಲು ತಯಾರಿ ನಡೆಸುತ್ತಿದ್ದಾರೆ.
ಸಿಲ್ವರ್ಸ್ಟೋನ್ ಆಕ್ಷನ್ಸ್ ಪ್ರಕಾರ, ಹರಾಜು ಪ್ರಕ್ರಿಯೆ ವೇಳೆ ಕಾರು ಖರೀದಿಸಲು ಭಾರಿ ಪೈಪೋಟಿಯಿತ್ತು. ಯುಕೆ ಕಾರು ಖರೀದಿಸಿದವರ ಹೆಸರನ್ನು ಇನ್ನೂ ಬಹಿರಂಗ ಪಡಿಸಿಲ್ಲ. ಆದರೆ ಖರೀದಿಗಾರರು 12. 5% ಹಣವನ್ನು ಪಾವತಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಬೃಹತ್ ಅವಳಿ ಕಟ್ಟಡಗಳು ಕೇವಲ 10 ಸೆಕೆಂಡ್ ಗಳಲ್ಲಿ ಕಲ್ಲು ಮಣ್ಣಿನ ರಾಶಿ
ಡಯಾನ ಅವರು ಹರಾಜಾದ ಕಾರು ಕೇವಲ 25,000 ಮೈಲುಗಳಷ್ಟು ದೂರ ಚಲಾಯಿಸಲಾಗಿತ್ತು. ಕಳೆದ ವರ್ಷ, ಅವರು ಬಳಸಿದ ಮತ್ತೊಂದು ಫೋರ್ಡ್ ಎಸ್ಕಾರ್ಟ್ ಹರಾಜಿನಲ್ಲಿ 52,000 ಪೌಂಡ್ಗಳಿಗೆ (48,86,046.57 ರೂ.) ಮಾರಾಟವಾಗಿತ್ತು.