Advertisement

ಡಯಾನಾಳ ಮರುಜನ್ಮವಂತೆ ಈ ನಾಲ್ಕು ವರ್ಷದ ಬಾಲಕ

12:29 AM Jul 19, 2019 | Team Udayavani |

ಲಂಡನ್‌: ಬ್ರಿಟನ್‌ ರಾಣಿ ಡಯಾನಾ ನನ್ನ ಮೂಲಕ ಮರುಜನ್ಮವೆತ್ತಿದ್ದಾರೆ ಎಂದು ಆಸ್ಟ್ರೇಲಿಯಾದ ನಾಲ್ಕು ವರ್ಷದ ಬಾಲಕನೊಬ್ಬ ಹೇಳಿಕೊಂಡಿದ್ದು ಭಾರಿ ಅಚ್ಚರಿಗೆ ಕಾರಣವಾಗಿದೆ. ಈತನ ತಂದೆ ಆಸ್ಟ್ರೇಲಿಯಾದ ಜನಪ್ರಿಯ ಟಿವಿ ನಿರೂಪಕರಾಗಿದ್ದಾರೆ. ಪುತ್ರ ಬಿಲ್ಲಿ ಕ್ಯಾಂಪ್‌ಬೆಲ್ ತಾನು ಡಯಾನಾ ಅವರ ಪುನರ್ಜನ್ಮ ಎಂದು ಭಾವಿಸಿದ್ದಾನೆ ಎಂದು ನಿರೂಪಕ ಡೇವಿಡ್‌ ಕ್ಯಾಂಪ್‌ಬೆಲ್ ಹೇಳಿದ್ದಾರೆ. 1997ರಲ್ಲಿ ರಾಣಿ ಡಯಾನಾ ಸಾವನ್ನಪ್ಪಿದ 18 ವರ್ಷಗಳ ನಂತರ ಬಿಲ್ಲಿ ಜನಿಸಿದ್ದಾನೆ. ಡಯಾನಾಳ ಬಾಲ್ಯ ಕಾಲದ ಸಂಗತಿಗಳನ್ನೂ ಬಿಲ್ಲಿ ಹೇಳುತ್ತಾನೆ. ಅಷ್ಟೇ ಅಲ್ಲ, ರಾಜಕುಮಾರ ವಿಲಿಯಮ್‌ ಮತ್ತು ಹ್ಯಾರಿಯವರನ್ನೂ ಈತ ತನ್ನ ಪುತ್ರರು ಎಂದು ಹೇಳಿಕೊಳ್ಳುತ್ತಾನಂತೆ!

Advertisement
Advertisement

Udayavani is now on Telegram. Click here to join our channel and stay updated with the latest news.

Next