Advertisement

ಬ್ರಿಟನ್‌ ರಾಜಮನೆತನದ ಅಸಲಿ ಮುಖ ಬಿಚ್ಚಿಟ್ಟ ಪ್ರಿನ್ಸ್‌ ಹ್ಯಾರಿ ಮತ್ತು ಮೆಘನ್‌ ಮಾರ್ಕೆಲ್‌

08:38 AM Mar 09, 2021 | Team Udayavani |

ನ್ಯೂಯಾರ್ಕ್‌: ಬ್ರಿಟನ್‌ ರಾಜಮನೆತನದಿಂದ ತಾವು ಹೊರನಡೆಯಲು ಅಲ್ಲಿ ಅನುಭವಿಸಿದ ಮಾನಸಿಕ ಯಾತನೆಗಳೇ ಕಾರಣ ಎಂದು ಪ್ರಿನ್ಸ್‌ ಹ್ಯಾರಿ ಮತ್ತು ಪತ್ನಿ ಮೆಘನ್‌ ಮಾರ್ಕೆಲ್‌ ಹೇಳಿದ್ದಾರೆ.

Advertisement

ಅಮೆರಿಕದ ಖ್ಯಾತ ನಿರೂಪಕಿ ಓಪ್ರಾ ವಿನ್‌ಫ್ರಿ ನಡೆಸಿಕೊಡುವ “ದ ಓಪ್ರಾ ವಿನ್‌ಫ್ರಿ ಶೋ’ನ ಸಂಚಿಕೆಯಲ್ಲಿ ಭಾಗವಹಿಸಿದ್ದ ಇವರಿಬ್ಬರೂ ಅರಮನೆಯಲ್ಲಿ ತಾವು ಅನುಭವಿಸಿದ ಮಾನಸಿಕ ಕಿರುಕುಳಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಅರಮನೆಯೆಂಬ ಪಂಜರ: ಸಂದರ್ಶನದಲ್ಲಿ ಅಳಲು ತೋಡಿಕೊಂಡಿರುವ ಮೆಘನ್‌, “ನಾನು ಆಫ್ರಿಕನ್‌-ಅಮೆರಿಕನ್‌ ಆಗಿದ್ದರಿಂದ, ನನಗೆ ಜನಿಸುವ ಮಗುವಿನ ಬಣ್ಣ ಹೇಗಿರುತ್ತದೆ ಎಂಬ ಚರ್ಚೆಗಳನ್ನು ಅರಮನೆಯಲ್ಲಿ ನಡೆಸಲಾಗುತ್ತಿತ್ತು.

ಮಾನಸಿಕ ಕ್ಷೋಭೆಗೆ ಒಳಗಾಗಿದ್ದಾಗ ನನಗೆ ಚಿಕಿತ್ಸೆ ಕೊಡಿಸಲು ನಿರಾಕರಿಸಲಾಯಿತು. ಆಗ ನಾನು ಆತ್ಮಹತ್ಯೆಯ ಯೋಚನೆ ಮಾಡಿದ್ದೆ. ಇನ್ನು ಮದುವೆ ವೇಳೆ, ನನ್ನ ವಾರಗಿತ್ತಿಯಾದ ಕೇಟ್‌ ಮಿಡಲ್‌ಟನ್‌ ಅವರಿಗೆ ಕಣ್ಣೀರು ಹಾಕಿಸಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಸಲಿಗೆ, ಅವರೇ ನನ್ನನ್ನು ಅಳಿಸಿದ್ದರು. ನಂತರ ಕೇಟ್‌, ನನ್ನಲ್ಲಿ ಕ್ಷಮೆ ಕೋರಿದ್ದರು’ ಎಂದಿದ್ದಾರೆ.

ಇದನ್ನೂ ಓದಿ:ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ: ರಕ್ಷಣೆಗೆ ಧಾವಿಸಿದವರೂ ಸೇರಿ 9 ಜನರ ದುರ್ಮರಣ

Advertisement

ಅದಲ್ಲದೆ, ಅರಮನೆಯಲ್ಲಿ ನಡೆದ ನಮ್ಮಿಬ್ಬರ ಮದುವೆಗೆ 3 ದಿನ ಮುಂಚೆ ಕ್ಯಾಂಟರ್‌ ಬರ್ರಿಯ ಆರ್ಚ್‌ಬಿಷಪ್‌ ಸಮ್ಮುಖದಲ್ಲಿ ಗೌಪ್ಯವಾಗಿ ನನ್ನ ಮತ್ತು ಹ್ಯಾರಿ ಮದುವೆಯಾಗಿತ್ತು ಎಂದಿದ್ದಾರೆ.

ಪ್ರಿನ್ಸ್‌ ಹ್ಯಾರಿ ಮಾತನಾಡಿ, “”ರಾಜ ಮನೆತನ ತೊರೆಯಲು ತೀರ್ಮಾನಿಸಿದ ದಿನದಿಂದ ನನ್ನ ತಂದೆ ಪ್ರಿನ್ಸ್‌ ಚಾರ್ಲ್ಸ್ ನನ್ನ ಫೋನ್‌ ಕರೆಗಳನ್ನು ಸ್ವೀಕರಿಸುವುದನ್ನು ಬಿಟ್ಟರು. ನನ್ನ ಆರ್ಥಿಕ ಸವಲತ್ತುಗಳನ್ನು ನಿಲ್ಲಿಸಲಾಯಿತು. ಹಾಗಾಗಿ, ನಾನು ತನ್ನ ತಾಯಿ ದಿ. ಡಯಾನಾ ಹೆಸರಿನ ಆರ್ಥಿಕ ಮೂಲ ಅವಲಂಬಿಸಿದ್ದೇನೆ” ಎಂದಿದ್ದಾರೆ.

ಇದನ್ನೂ ಓದಿ: ನಾರಿಯರು ಸಿದ್ಧಪಡಿಸಿದ ವಸ್ತು ಖರೀದಿಸಿದ ಮೋದಿ

Advertisement

Udayavani is now on Telegram. Click here to join our channel and stay updated with the latest news.

Next