Advertisement

KGF ಚಾಪ್ಟರ್ 2…ಅಮೆಜಾನ್ ಪ್ರೈಮ್ ನಲ್ಲಿ ಹೆಚ್ಚುವರಿ ಶುಲ್ಕವಿಲ್ಲದೇ ವೀಕ್ಷಿಸಿ;ದಿನಾಂಕ ಘೋಷಣೆ

03:42 PM May 31, 2022 | Team Udayavani |

ಬೆಂಗಳೂರು: ಜಗತ್ತಿನಾದ್ಯಂತ ಭರ್ಜರಿ ಯಶಸ್ಸು ಹಾಗೂ ಬಾಕ್ಸಾಫೀಸ್ ನಲ್ಲಿ ದಾಖಲೆ ನಿರ್ಮಿಸಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಜೂನ್ 3ರಿಂದ ಪ್ರೈಮ್ ಬಳಕೆದಾರರಿಗೆ ಲಭ್ಯವಾಗಲಿದೆ.

Advertisement

ಇದನ್ನೂ ಓದಿ:ಬೆಂಗಳೂರು: ತರಕಾರಿ ಕತ್ತರಿಸುವ ಚಾಕುವಿಗಾಗಿ ಶುರುವಾದ ಅಡುಗೆ ಭಟ್ಟರ ಜಗಳ ಕೊಲೆಯಲ್ಲಿ ಅಂತ್ಯ

ಜೂನ್ 3ರಿಂದ ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ವೀಕ್ಷಿಸಬಹುದಾಗಿದೆ ಎಂದು ಅಮೆಜಾನ್ ಪ್ರೈಮ್ ತನ್ನ ಇನ್ ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಮುಖ್ಯಪಾತ್ರದಲ್ಲಿ ನಟಸಿರುವ ಸಿನಿಮಾ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

2018 ರಲ್ಲಿ ತೆರೆಕಂಡ ಕೆಜಿಎಫ್‌: ಚಾಪ್ಟರ್ 1ರ ಮುಂದುವರಿದ ಭಾಗ ಇದಾಗಿದ್ದು, ಕೋಲಾರ್ ಗೋಲ್ಡ್‌ ಫೀಲ್ಡ್ಸ್‌ನಲ್ಲಿ ರಾಕಿ ಬೆಳೆದ ಕಥಾ ಹಂದರ ಹೊಂದಿದೆ. ಆತ ಒಂದು ಕಡೆ ತನ್ನ ಮಿತ್ರರ ಜೊತೆಗೆ ತನ್ನ ಕ್ಷೇತ್ರವನ್ನು ವಿಸ್ತರಿಸುತ್ತಿದ್ದರೆ, ಸರ್ಕಾರ ಇವನನ್ನು ಮುಗಿಸಲು ಹೊಂಚು ಹಾಕುತ್ತಿರುತ್ತದೆ. ರಾಕಿ ಎಲ್ಲ ಕಡೆಯಿಂದಲೂ ಎದುರಾಗುವ ಶತ್ರುಗಳನ್ನು ಹೇಗೆ ಎದುರಿಸುತ್ತಾನೆ ಎಂಬುದು 2ನೇ ಚಾಪ್ಟರ್‌ನಲ್ಲಿನ ಕುತೂಹಲಕರ ಸಂಗತಿಯಾಗಿದೆ. ನರಾಚಿಯಲ್ಲಿನ ಜನರಿಗೆ ಈತ ಹೀರೋ ಆದರೆ, ತನ್ನ ತಾಯಿಯ ಕನಸನ್ನು ಪೂರೈಸುವುದಕ್ಕೆ ಅಧೀರ, ಇನಾಯತ್‌ ಖಲೀಲ್‌ ಮತ್ತು ರಮಿಕಾ ಸೇನ್‌ರಿಂದ ಪ್ರತಿರೋಧವನ್ನು ಹೇಗೆ ಎದುರಿಸುತ್ತಾನೆ ಎಂಬುದು ಕೆಜಿಎಫ್ ಚಾಪ್ಟರ್ 2ರ ಪ್ರಮುಖ ಕಥೆಯಾಗಿದೆ.

Advertisement

ಯಶ್‌ ಜೊತೆಗೆ ಶ್ರೀನಿಧಿ ಶೆಟ್ಟಿ, ಸಂಜಯ್‌ ದತ್‌, ರವೀನಾ ಟಂಡನ್‌, ಪ್ರಕಾಶ್‌ ರಾಜ್‌, ರಾವ್‌ ರಮೇಶ್‌, ಈಶ್ವರಿ ರಾವ್‌, ಅಚ್ಯುತ್ ಕುಮಾರ್ ಮತ್ತು ಅರ್ಚನಾ ಜೋಯಿಸ್‌ ಹಾಗೂ ಇತರರು ಪ್ರಮುಖ ಪಾತ್ರದಲ್ಲಿದ್ದಾರೆ. ಪ್ರಶಾಂತ್‌ ನೀಲ್‌ ನಿರ್ದೇಶನದ ಕೆಜಿಎಫ್‌: ಚಾಪ್ಟರ್ 2 ಅನ್ನು ಹೊಂಬಾಳೆ ಫಿಲಂಸ್‌ನ ವಿಜಯ್‌ ಕಿರಗಂದೂರು ನಿರ್ಮಾಣ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next