Advertisement
ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (ಸಿಐಐ) ಸಂಸ್ಥೆಯ 125ನೇ ವಾರ್ಷಿಕೋತ್ಸವ ಸಮ್ಮೇಳನವನ್ನು ಮಂಗಳವಾರ ಆನ್‌ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು,inclusion (ಉದ್ದೇಶ), inclusion (ಒಳಗೊಳ್ಳುವಿಕೆ), investment (ಹೂಡಿಕೆ), infrastructure (ಮೂಲ ಸೌಕರ್ಯ), innovation (ಆವಿಷ್ಕಾರ) ಎಂಬ ಐದು ಅಂಶಗಳ ಸೂತ್ರ ಅಳವಡಿಸಿಕೊಂಡಲ್ಲಿ ಆರ್ಥಿಕ ಬೆಳವಣಿಗೆಯ ವೇಗವನ್ನು ಮತ್ತೆ ಹೆಚ್ಚಿಸಬಹುದು ಎಂದು ತಿಳಿಸಿದರು.
ಮೊದಲಿಗೆ ಕೋವಿಡ್-19 ನಮ್ಮ ಆರ್ಥಿಕ ವೇಗವನ್ನು ತಡೆಯಿತು. ಆದರೆ ಈಗ ನಾವು ಅದರ ಹರಡುವಿಕೆ ವೇಗವನ್ನು ತಡೆದಿದ್ದೇವೆ ಎಂದ ಪ್ರಧಾನಿ, ಸ್ಥಳೀಯ ಮಟ್ಟದ ಸ್ಫೂರ್ತಿಯ ಚಿಲುಮೆಯಾಗಿ ಎಂದು ಕೈಗಾರಿಕೆಗಳಿಗೆ ಕರೆ ನೀಡಿದರು. ವಿಶ್ವದ ಕೈಗಾರಿಕಾ ರಂಗ ತನಗೊಂದು ಅತ್ಯುತ್ತಮ ಜತೆಗಾರ ಸಿಗಬೇಕೆಂದು ಹಂಬಲಿಸುತ್ತಿದೆ. ಆ ಸ್ಥಾನವನ್ನು ತುಂಬುವ ಶಕ್ತಿ, ಸಂಪನ್ಮೂಲ ಮತ್ತು ಅರ್ಹತೆ ಭಾರತಕ್ಕಿದೆ. ಇದನ್ನು ಸರಿಯಾಗಿ ಬಳಸಿ ವಿಶ್ವಮಟ್ಟಕ್ಕೆ ಭಾರತೀಯ ಉದ್ಯಮಗಳು ಬೆಳೆಯಲಿ ಎಂದು ಹಾರೈಸಿದರು.
Related Articles
ಗ್ಲೋಬಲ್ ಸಪ್ಲೈ ಚೈನ್‌ನಲ್ಲಿ ಚೀನ ಹೊಂದಿರುವ ಆಧಿಪತ್ಯವನ್ನು ಕೊನೆಗಾಣಿಸುವಂತೆ ಪ್ರಧಾನಿ ಮೋದಿಯವರು ಭಾರತೀಯ ಕೈಗಾರಿಕೋದ್ಯಮಿಗಳಿಗೆ ಪರೋಕ್ಷವಾಗಿ ಕರೆ ನೀಡಿದ್ದಾರೆ. ಅದಕ್ಕಾಗಿ “ಮೇಡ್ ಇನ್ ಇಂಡಿಯಾ, ಮೇಡ್ ಫಾರ್ ದ ವರ್ಲ್ಡ್’ ಎಂಬ ಮೂಲಮಂತ್ರವನ್ನು ಎಲ್ಲ ಕೈಗಾರಿಕೆಗಳೂ ಮೈಗೂಡಿಸಿಕೊಳ್ಳಬೇಕು. ಜಾಗತಿಕ ರಂಗದಲ್ಲಿ ಗುರುತಿಸಿಕೊಳ್ಳುವ ಮುನ್ನ ನಾವು ದೇಶೀಯ ಸಪ್ಲೆ„ ಚೈನ್ ಅನ್ನು ಸಂಪೂರ್ಣ ಸ್ವಾವಲಂಬಿಯಾಗಿಸಬೇಕಿದೆ. ದೇಶದೊಳಗೆ ನಾವು ಇದನ್ನು ಸಾಧಿಸಿದರೆ ವಿಶ್ವಮಟ್ಟದಲ್ಲೂ ಸಾಧಿಸಬಹುದು ಎಂದು ಕಿವಿಮಾತು ಹೇಳಿದ್ದಾರೆ.
Advertisement