Advertisement

ರಾಹುಲ್‌ಗೆ ಪ್ರಧಾನಿ ಯೋಗ ಕಡಿಮೆ

11:27 PM Apr 07, 2019 | Team Udayavani |

ಗುಳೇದಗುಡ್ಡ (ಬಾಗಲಕೋಟೆ): ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಧಾನಿಯಾಗುವ ಯೋಗ ತುಂಬಾ ಕಡಿಮೆ. ಇಬ್ಬರೂ ಈ ಬಾರಿ ಪ್ರಧಾನಿ ಆಗುವುದು ಅನುಮಾನ…

Advertisement

– ಇದು ಗುಳೇದಗುಡ್ಡದ ಸಾಂಪ್ರದಾಯಿಕ ಫಲ ಭವಿಷ್ಯ ನುಡಿಯುವ “ಇಲಾಳ ಮ್ಯಾಳ’ದವರ ಭವಿಷ್ಯವಾಣಿ… ಪ್ರತಿವರ್ಷದಂತೆ ಇಲಾಳ ಮ್ಯಾಳದವರು ಈ ಬಾರಿಯೂ ಯುಗಾದಿ ಪಾಡ್ಯದ ದಿನ ಬೆಳಗ್ಗೆ ಮಳೆ, ಬೆಳೆ, ವ್ಯಾಪಾರ ವಹಿವಾಟು, ರಾಜಕೀಯ ಕುರಿತು ಭವಿಷ್ಯವಾಣಿ ನುಡಿದಿದ್ದಾರೆ. ಮೋದಿಯವರಿಗೆ ಶೇ.67ರಷ್ಟು
ಪ್ರಧಾನಿಯಾಗುವ ಯೋಗವಿದೆ. ಆದರೆ, ಅವರು ಪ್ರಧಾನಿಯಾಗಲು ಸುಬ್ರಹ್ಮಣ್ಯ ದರ್ಶನ ಮಾಡಬೇಕು. ಇನ್ನು ರಾಹುಲ್‌ ಗಾಂಧಿಗೆ ಶೇ.46ರಷ್ಟು ಪ್ರಧಾನಿಯಾಗುವ ಯೋಗವಿದೆ. ಅವರು ಮಹಾಕಾಳಿ ದರ್ಶನ ಪಡೆಯಬೇಕು ಎಂದು ಭವಿಷ್ಯದಲ್ಲಿ ಹೇಳಿದ್ದಾರೆ.

ಕೆಂಪುಕೋಟೆಯಲ್ಲಿ ಹತ್ತು ಸೂತ್ರ ರಚಿಸಿದ್ದಾರೆ. ಏಳು ಹಂತದ ಮತದಾನ ಇದೆ. ಇದರಲ್ಲಿ ಒಂದರಿಂದ ನಾಲ್ಕು ಹಂತದ ಮತದಾನ ಸುಗಮವಾಗಿ ಸಾಗುತ್ತದೆ. ಐದು ಮತ್ತು ಏಳನೇ ಹಂತದ ಮತದಾನಗಳು ಕೆಟ್ಟ ಘಳಿಗೆಗಳನ್ನು ತರುತ್ತವೆ. ಚುನಾವಣೆ ಬಳಿಕ ಯಾರು, ಯಾರಮಾತನ್ನೂ ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ ಎಂದು “ಇ ಲಾಳ ಮ್ಯಾಳ’ದ ಮಲ್ಲಿಕಾರ್ಜುನ ಗೊಬ್ಬಿ ಭವಿಷ್ಯ ನುಡಿದಿದ್ದಾರೆ. ಇವರು ಭವಿಷ್ಯ
ನುಡಿಯುವ ಕಾಯಕ ಮಾಡಿಕೊಂಡು ಬರುತ್ತಿದ್ದು, ಇವರ ಭವಿಷ್ಯ ನಿಜವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next