Advertisement

ಸೋಂಕುಮುಕ್ತ ಜಿಲ್ಲೆಯನ್ನಾಗಿಸಿ : ಡಿಸಿಗಳಿಗೆ ಪಿಎಂ ಕಿವಿಮಾತು

02:42 AM May 19, 2021 | Team Udayavani |

ಉಡುಪಿ/ಮಂಗಳೂರು/ಮಡಿಕೇರಿ : ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆಗಿನ ಸಂವಾದದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌, ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಮತ್ತು ಕೊಡಗಿನ ಚಾರುಲತಾ ಸೋಮಲ್‌ ಸಹಿತ ರಾಜ್ಯದ ವಿವಿಧ ಜಿಲ್ಲಾಧಿಕಾರಿಗಳು ಪಾಲ್ಗೊಂಡಿದ್ದರು.

Advertisement

ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಸಾರ್ವಜನಿಕರ ಸಹಕಾರ ಮತ್ತು ಮಾರ್ಗದರ್ಶನ ಪಡೆದು ಕೊರೊನಾ ವಿರುದ್ಧ ಹೋರಾಡಲು ಪಣ ತೊಡಬೇಕು. ಪ್ರತೀ ಗ್ರಾಮವನ್ನು ಕೊರೊನಾ ಮುಕ್ತವನ್ನಾಗಿ ಮಾಡಲು ಶ್ರಮಿಸಬೇಕು ಎಂದು ಪ್ರಧಾನಿ ಕರೆ ನೀಡಿದ್ದಾರೆ.

ದೇಶದ ಕೆಲವು ರಾಜ್ಯದ ಆಯ್ದ ಜಿಲ್ಲೆಯ ಜಿಲ್ಲಾಧಿಕಾರಿಗಳ ಜತೆಗೆ ಮಾತ್ರ ಪ್ರಧಾನಿಯವರು ಸಂವಾದ ನಡೆಸಿದರು. ಉಳಿದಂತೆ ಎಲ್ಲ ಜಿಲ್ಲಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

ಮಂಗಳೂರಿನಲ್ಲಿ ಜಿ.ಪಂ. ಸಿಇಒ ಡಾ| ಕುಮಾರ್‌ ಹಾಗೂ ಮಂಗಳೂರು ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಜಿಲ್ಲಾಧಿಕಾರಿಗಳ ಜತೆಗಿದ್ದರು.

ಪಾಸಿಟಿವಿಟಿ ಪ್ರಮಾಣ ಇಳಿಕೆ
ಉಡುಪಿ: ಜಿಲ್ಲೆಯಲ್ಲಿ ಸೋಮವಾರ ಕೊರೊನಾ ಪಾಸಿಟಿವಿಟಿ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಎಪ್ರಿಲ್‌ನಲ್ಲಿದ್ದ ಶೇ. 14 ಪ್ರಮಾಣ ಕಳೆದ ಒಂದು ವಾರದಲ್ಲಿ ಶೇ. 34ಕ್ಕೇರಿತು. ಲಾಕ್‌ಡೌನ್‌ನಿಂದ ಸೋಂಕಿನ ಪ್ರಸರಣ ಕಡಿಮೆಯಾಗಬಹುದು ಎಂದು ಪ್ರಧಾನ ಮಂತ್ರಿಗಳ ಜತೆಗಿನ ಸಭೆಯ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದರು.

Advertisement

ಗಂಟಲ ದ್ರವ ಪರೀಕ್ಷೆಗೆ 67 ತಂಡ
ಉಡುಪಿ ಜಿಲ್ಲೆಯಲ್ಲಿ ಗಂಟಲ ದ್ರವ ಪರೀಕ್ಷೆಗೆ 67 ತಂಡಗಳನ್ನು ರಚಿಸಲಾಗಿದೆ. ದಿನವೂ 2,500-3,000 ಜನರ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಈಗ ಜನರಲ್ಲಿ ಜಾಗೃತಿ ಮೂಡಿದ್ದು ಸ್ವಯಂ ಆಸಕ್ತಿಯಿಂದ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಎಲ್ಲ ಪ್ರಾ. ಆರೋಗ್ಯ ಕೇಂದ್ರ ಗಳಲ್ಲೂ ಪರೀಕ್ಷೆ ನಡೆಸಲಾಗುವುದು ಎಂದರು.

ಬ್ಲ್ಯಾಕ್‌ ಫ‌ಂಗಸ್‌
ಉಡುಪಿ ಜಿಲ್ಲೆಯಲ್ಲಿ ಬ್ಲ್ಯಾಕ್‌ ಫ‌ಂಗಸ್‌ ಸಮಸ್ಯೆ ಇಲ್ಲ. ಇಲ್ಲಿ ಬಹಳ ಜಾಗರೂಕವಾಗಿ ಸ್ಟಿರಾಯ್ಡ ಬಳಸ ಲಾಗಿದೆ ಎಂದು ಜಗದೀಶ್‌ ಹೇಳಿದರು.

ಅನಾವಶ್ಯಕ ರಸ್ತೆಗಿಳಿದರೆ ವಾಹನ ಸೀಜ್‌ ಖಚಿತ
ಜಿಲ್ಲೆಗಳಲ್ಲಿ ಹೆಚ್ಚುವರಿ ನಿರ್ಬಂಧ ಹೇರಲು ಅವಕಾಶ ನೀಡಲಾಗಿದೆ. ಸದ್ಯ ಸರಕಾರದ ನಿರ್ಬಂಧಗಳನ್ನೇ ಪಾಲಿಸಲಾಗುತ್ತಿದೆ. ಇದು ಮೇ 24ರ ವರೆಗೆ ಮುಂದುವರಿಯಲಿದೆ. ಆದರೆ ನಗರದೊಳಗೆ ಯಾರೂ ಅನಗತ್ಯ ಬರುವಂತಿಲ್ಲ.
ಅಗತ್ಯ ವಸ್ತುಗಳನ್ನು ಮನೆ ಸಮೀಪದ ಅಂಗಡಿಯಿಂದಲೇ ಖರೀದಿಸಬೇಕು. ಅನಾವಶ್ಯಕ ವಾಹನ ರಸ್ತೆಗೆ ಬಂದಲ್ಲಿ ಮುಟ್ಟುಗೋಲು ಹಾಕಲಾಗುವುದು ಎಂದು ಜಗದೀಶ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next