Advertisement

ಪಟ್ನಾ ವಿವಿ ಶತಮಾನೋತ್ಸವ: ವೇದಿಕೆ ಹಂಚಿಕೊಂಡ ಮೋದಿ-ನಿತೀಶ್‌

12:18 PM Oct 14, 2017 | Team Udayavani |

ಪಟ್ನಾ : ಪ್ರಧಾನಿ ನರೇಂದ್ರ ಮೋದಿ ಅವರಿಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರೊಂದಿಗೆ ವೇದಿಕೆ ಹಂಚಿಕೊಂಡರು. ಜೆಡಿಯು ಈಚೆಗೆ ಎನ್‌ಡಿಎ ಸೇರಿಕೊಂಡ ಬಳಿಕದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಪ್ರಧಾನಿ ಮೋದಿ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿರುವುದು ಇದೇ ಮೊದಲ ಸಲವಾಗಿದೆ. 

Advertisement

ಉಭಯ ನಾಯಕರಿಗೆ ಈ ಅವಕಾಶ ಒದಗಿ ಬಂದದ್ದು ಪಟ್ನಾ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭದಲ್ಲಿ. 

“ಪಟ್ನಾ ವಿಶ್ವವಿದ್ಯಾಲಯದ ಶತಮಾನೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉಪಸ್ಥಿತರಿರುವುದು ರಾಜ್ಯಕ್ಕೆ ಅತ್ಯಂತ ಗೌರವ ಮತ್ತು ಘನತೆಯ ವಿಷಯವಾಗಿದೆ’ ಎಂದು ನಿತೀಶ್‌ ಕುಮಾರ್‌ ಅವರು ಕಾರ್ಯಕ್ರಮದಲ್ಲಿ ನೆರೆದ ಜನರನ್ನು ಉದ್ದೇಶಿಸಿ ಮಾತನಾಡುತ್ತಾ ತಮ್ಮ ಸಂಭ್ರಮವನ್ನು ಹಂಚಿಕೊಂಡರು. 

ಇದಕ್ಕೆ ಮೊದಲು ಬಿಹಾರ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌, ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತು ಇತರ ಪ್ರಮುಖರು ಪಟ್ನಾ ವಿಮಾನ ನಿಲ್ದಾಣದಲ್ಲಿ ಸೇರಿಕೊಂಡು ಪ್ರಧಾನಿ ಮೋದಿಯನ್ನು ಸ್ವಾಗತಿಸಿದರು. ಅಲ್ಲಿಂದ ಪ್ರಧಾನಿಯನ್ನು ನೇರವಾಗಿ ಪಟ್ನಾ ಸೈನ್ಸ್‌ ಕಾಲೇಜ್‌ ಕ್ಯಾಂಪಸ್‌ಗೆ ಕರೆತರಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next