Advertisement

ಪ್ರಧಾನಿ ಗಲ್ಲಿ ಗಲ್ಲಿಯಲ್ಲಿ ರೋಡ್‌ ಶೋ ಮಾಡಿದ್ದು ಹಾಸ್ಯಾಸ್ಪದ: ಖರ್ಗೆ

02:23 PM Mar 05, 2017 | |

ಕಲಬುರಗಿ : ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಭಾನುವಾರ ತೀವ್ರ  ವಾಗ್ಧಾಳಿ ನಡೆಸಿದರು. 

Advertisement

ಪ್ರಧಾನಿ ಯೊಬ್ಬರು ವಾರಣಾಸಿಯ ಗಲ್ಲಿಗಲ್ಲಿಗಳಲ್ಲಿ ರೋಡ್‌ ಶೋ ನಡೆಸಿರುವುದು ಹಾಸ್ಯಾಸ್ಪದ. ಅವರಿಗೆ ತಾನು ಹೋದಲೆಲ್ಲಾ ಮತಗಳು ಸಿಗುತ್ತವೆ ಎನ್ನುವ ಭ್ರಮೆ ಇದೆ ಎಂದರು. 

ಅಮೆರಿಕದಲ್ಲಿ ಭಾರತೀಯರನ್ನು ಗುರಿಯಾಗಿರಿಸಿಕೊಂಡು ದಾಳಿಗಳ ಕುರಿತು ತೀವ್ರ ಕಳವಳ ವ್ಯಕ್ತ ಪಡಿಸಿದ ಖರ್ಗೆ , ಪ್ರಧಾನಿ ಮೋದಿ ಅವರು ಕೂಡಲೆ ಅಮೆರಿಕ ಅಧ್ಯಕ್ಷರಿಗೆ ಕರೆ ಮಾಡಿ ಈ ಬಗ್ಗೆ ಮಾತನಾಡಬೇಕು ಎಂದು ಆಗ್ರಹಿಸಿದರು. 

ಜನಾಂಗೀಯ ದಾಳಿ ಗಳು ನಿಲ್ಲದೇ ಹೋದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಯುದ್ಧಕ್ಕೆ ನಾಂದಿಯಾಗುತ್ತದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next