Advertisement

ಕಲಬುರಗಿಯಲ್ಲಿ ಪ್ರಧಾನಿ ಭರ್ಜರಿ ರೋಡ್ ಶೋ… ಲಕ್ಷಾಂತರ ಮಂದಿ ಭಾಗಿ

10:11 PM May 02, 2023 | Team Udayavani |

ಕಲಬುರಗಿ: ಕಲ್ಯಾಣದ ಹೆಬ್ಬಾಗಿಲು ಕಲಬುರಗಿ ನಗರದಲ್ಲಿ ಮಂಗಳವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ಮೂಲಕ ಚುನಾವಣೆ ಕಣದಲ್ಲಿ ಭಾರೀ ಸಂಚಲನ ಮೂಡಿಸಿದರು. ಅಲ್ಲದೆ, ಎಐಸಿಸಿ ಅಧ್ಯಕ್ಷ ಡಾ|ಮಲ್ಲಿಕಾರ್ಜುನ ಖರ್ಗೆ ಭದ್ರಕೋಟೆ ಮತ್ತು ತವರು ನೆಲಕ್ಕೆ ಲಗ್ಗೆ ಇಟ್ಟು ದೊಡ್ಡ ಹವಾ ಸೃಷ್ಟಿಸಿದರು.

Advertisement

ನಗರದ ವರ್ತುಲ ರಸ್ತೆಯ ಕೆಎಂಎಫ್ ಡೈರಿಯಿಂದ ಮಹಾನಗರದ ಹೃದಯ ಭಾಗ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದವರೆಗೂ ಮಂಗಳವಾರ ಸಂಜೆ ಬೃಹತ್‌ರೋಡ್‌ ಶೋ ನಡೆಸಿದ ಪ್ರಧಾನಿ ಮೋದಿ, ಮುಕ್ತಾಯದಲ್ಲಿ ಉಕ್ಕಿನ ಮನುಷ್ಯ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಪ್ರತಿಮೆಗೆ ಸುತ್ತು ಹಾಕಿ ಕೊನೆಗೊಳಿಸಿದರು. 6 ಕಿ.ಮೀ. ಉದ್ದದವರೆಗೆ ಸುಮಾರು ಒಂದೂವರೆ ತಾಸು ನಡೆದ ರೋಡ್‌ ಶೋದಲ್ಲಿ ಲಕ್ಷಾಂತರ ಜನ ಪಾಲ್ಗೊಂಡು ಪ್ರಧಾನಿಯತ್ತ ಕೈ ಮಾಡಿ ಅಭಿಮಾನ ಮೆರೆದರು.

ಶಾಸಕ- ಅಭ್ಯರ್ಥಿಗಳಿಗೆ ವ್ಯವಸ್ಥೆ: ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ತೆರೆದ ವ್ಯಾನ್ ದಲ್ಲಿ ಕಲಬುರಗಿ ಸಂಸದ ಡಾ.‌ಉಮೇಶ ಜಾಧವ್, ಕೇಂದ್ರದ ಸಚಿವ ಭಗವಂತ ಖೂಬಾ ಮಾತ್ರ ಪಾಲ್ಗೊಂಡಿದ್ದರು. ಹೀಗಾಗಿ ಕಲಬುರಗಿ ದಕ್ಷಿಣ, ಕಲಬುರಗಿ ಉತ್ತರ, ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರದ ಅಭ್ಯರ್ಥಿಗಳಿಗೆ ಮತ್ತು ಶಾಸಕರಿಗೆ ರಸ್ತೆಯುದ್ದಕ್ಕೂ ಅಲ್ಲಲ್ಲಿ ವಿಶೇಷವಾಗಿ ನಿಲ್ಲುವ ವ್ಯವಸ್ಥೆ ಮಾಡಲಾಗಿತ್ತು.

ದೂರವಾದ ಮಳೆ: ಮಧ್ಯಾಹ್ನ ಸಂಜೆ ಹೊತ್ತಲ್ಲಿ ಮಳೆ ಬರಬಹದು ಎಂಬ ಆತಂಕ ಕಾಡಿತ್ತು.‌ ಆದರೆ ಒಂದು ಹನಿ ಮಳೆ ಬಾರದೇ ನಿರಾಂತಕವಾಗಿ ಪ್ರಧಾನಿ ರೋಡ್ ಶೋ ನಡೆಯಿತು.

ಹಸಿಗೂಸಿನೊಂದಿಗೆ ಆಗಮಿಸಿದ‌ ಮಹಿಳೆಯರು: ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನೋಡಲು ಒಂದು ತಿಂಗಳಿನ ಹಸುಗೂಸಿನೊಂದಿಗೆ ಮಹಿಳೆಯರು ಆಗಮಿಸಿರುವುದು ವಿಶೇಷವಾಗಿ ಕಂಡು ಬಂತು.

Advertisement

ಯುವಕರಲ್ಲದೇ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ರೋಡ್ ಶೋ‌ದಲ್ಲಿ ಪಾಲ್ಗೊಂಡಿದ್ದರು. ಜನಪ್ರನಿಧಿಗಳು ಸಹ ಸಾರ್ವಜನಿಕರ ಸಾಲಿನಲ್ಲಿ ನಿಂತು ನಾಯಕನಿಗೆ ಪುಷ್ಪಾರ್ಚನೆ ಮಾಡಿದರು.

ಅಭ್ಯರ್ಥಿ ಗಳು ವಾಹನದಲ್ಲಿ ಇರಬೇಕಿತ್ತು: ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಪ್ರಧಾನಿ ಅವರ ರೋಡ್ ಶೋ ವಾಹನದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಡಾ. ಉಮೇಶ ಜಾಧವ್ ಜತೆಗೇ ಕಲಬುರಗಿ ದಕ್ಷಿಣ ಕ್ಷೇತ್ರ ಹಾಗೂ ಕಲಬುರಗಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಾದ ದತ್ತಾತ್ರೇಯ ಪಾಟೀಲ್ ರೇವೂರ ಹಾಗೂ ಚಂದು ಪಾಟೀಲ್ ಸಹ ಪಾಲ್ಗೊಳ್ಳಬೇಕಿತ್ತು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿ ಬಂತು.

ಇದನ್ನೂ ಓದಿ: Perinje: ಕಾರು ಆಟೋ ರಿಕ್ಷಾಕ್ಕೆ ಢಿಕ್ಕಿ: ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಬಾಲಕ ಸಾವು

Advertisement

Udayavani is now on Telegram. Click here to join our channel and stay updated with the latest news.

Next