Advertisement
ಜಪಾನ್ ರಾಜಧಾನಿ ಟೋಕಿಯೋದಲ್ಲಿ ಸೋಮವಾರ ಅಮೆರಿಕ ನೇತೃತ್ವದ ಇಂಡೋ- ಪೆಸಿಫಿಕ್ ಎಕಾನಮಿಕ್ ಫ್ರೆàಮ್‌ವರ್ಕ್‌ಗೆ (ಐಪಿಇಎಫ್) ಸೇರ್ಪಡೆಯಾದ ಸಂದರ್ಭದಲ್ಲಿ ಪ್ರಧಾನಿ ಈ ಮಾತುಗಳನ್ನಾಡಿದ್ದಾರೆ. ಮಂಗಳ ವಾರ ನಡೆಯಲಿರುವ ಕ್ವಾಡ್ ರಾಷ್ಟ್ರಗಳ ಸಮ್ಮೇಳನದ ಮುನ್ನಾದಿನ 13 ರಾಷ್ಟ್ರಗಳು ಇರುವ ಒಕ್ಕೂಟದ ಸಮ್ಮೇಳನವೂ ನಡೆದಿದೆ. ವಿಶೇಷವಾಗಿ ಇಂಡೋ-ಪೆಸಿಫಿಕ್ ವಲಯದಲ್ಲಿ ಚೀನದ ಪ್ರಾಬಲ್ಯವನ್ನು ತಡೆಯಲು ಮತ್ತೊಂದು ವೇದಿಕೆ ಸೃಷ್ಟಿಯಾದಂತಾಗಿದೆ.
Related Articles
ಜಪಾನ್‌ನ ಉದ್ಯಮಿಗಳ ಜತೆಗೆ ನಡೆದ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಭಾರತದಲ್ಲಿ ಜಪಾನ್‌ನ ಹೂಡಿಕೆ ಪ್ರಧಾನವಾದದ್ದು. ಅದನ್ನು ಪ್ರತಿನಿಧಿಸುವ ನಿಟ್ಟಿನಲ್ಲಿ “ಜಪಾನ್ ವಾರ’ ಆಚರಿಸುವ ಬಗ್ಗೆ ಸಲಹೆ ನೀಡಿದ್ದಾರೆ. ಸಾಫ್ಟ್ ಬ್ಯಾಂಕ್‌ನ ಮಯಸೋಚಿ, ಸುಜುಕಿ ಮೋಟರ್ ಕಾರ್ಪೊರೇಷನ್‌ನ ಒಸುಮು ಸುಜುಕಿ ಸಹಿತ 34 ಮಂದಿ ಪ್ರಮುಖ ಕಂಪೆನಿಗಳ ಸಿಇಒಗಳು ಮತ್ತು ಉದ್ಯಮಪತಿಗಳ ಜತೆಗೆ ಮೋದಿ ಸಭೆ ನಡೆಸಿದ್ದಾರೆ.
Advertisement
ಇಂದು ಏನು?ಬಹುನಿರೀಕ್ಷಿತ ಕ್ವಾಡ್ ರಾಷ್ಟ್ರಗಳ ಸಮ್ಮೇಳನ ಮಂಗಳವಾರ ನಡೆಯಲಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಆಸ್ಟ್ರೇಲಿಯದ ನಿಯೋಜಿತ ಪ್ರಧಾನಿ ಆ್ಯಂಟನಿ ಆಲ್ಬನೀಸ್ ಜತೆಗೆ ದ್ವಿಪಕ್ಷೀಯ ಮಾತುಕತೆಯನ್ನೂ ಪ್ರಧಾನಿ ನಡೆಸಲಿದ್ದಾರೆ.