Advertisement

ಪ್ರಧಾನಿ ಓಕೆ, ಶಾಗೆ ಜೋಕೆ ಎಂದ ದೀದಿ

07:30 AM Aug 20, 2017 | Team Udayavani |

ಕೋಲ್ಕತಾ: ಬಿಜೆಪಿ ಹಾಗೂ ಪ್ರಧಾನಿ ಮೋದಿಯವರ ಕಟ್ಟರ್‌ ವಿರೋಧಿ ಎಂದೇ ಗುರುತಿಸಿ ಕೊಂಡಿರುವ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮೋದಿ ಪರ ಧೋರಣೆ ತಳೆದಿದ್ದಾರಾ? ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನ ನೋಡಿದರೆ ಇಂತಹುದೊಂದು ಪ್ರಶ್ನೆ ಮೂಡದೇ ಇರದು.

Advertisement

“ಪ್ರಧಾನಿ ಮೋದಿ ಅವರ ಬಗ್ಗೆ ನನಗೇನೂ ಆಕ್ಷೇಪವಿಲ್ಲ.’ ಎಂದು “ಸಿಎನ್‌ಎನ್‌ ನ್ಯೂಸ್‌ 18’ಗೆ ನೀಡಿದ ಸಂದರ್ಶನದಲ್ಲಿ ಹೇಳುವ ಮೂಲಕ ದೀದಿ ಅಚ್ಚರಿ ಮೂಡಿಸಿದ್ದಾರೆ. ಇದೇ ವೇಳೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ವಿರುದ್ಧ ಹರಿಹಾಯ್ದಿರುವ ಪ.ಬಂಗಾಲ ಸಿಎಂ, “ಶಾ ಒಬ್ಬ ಸರ್ವಾಧಿಕಾರಿ’ ಎಂದಿದ್ದಾರೆ. “ಅಮಿತ್‌ ಶಾ, ಪ್ರಧಾನಿ ಮೋದಿ ಅವರನ್ನು ಓವರ್‌ ಟೇಕ್‌ ಮಾಡುತ್ತಿದ್ದಾರೆ. ಆಡಳಿತ ಪಕ್ಷದ ಅಧ್ಯಕ್ಷರೊಬ್ಬರು ಸಚಿವರ ಸಭೆ ಕರೆಯು ತ್ತಾರೆ ಎಂದರೆ, ದೇಶದ ಪ್ರಧಾನಿ ಯಾರು ಎಂಬ ಬಗ್ಗೆ ಅನುಮಾನ ಮೂಡುತ್ತದೆ’ ಎಂದು ವಿಷಾದಿಸಿರುವ ಮಮತಾ, “ಈ ವಿಷ ಯ ದಲ್ಲಿ ನಾನು ಪ್ರಧಾನಿಯನ್ನು ದೂಷಿಸುವು ದಿಲ್ಲ. ಬದಲಿಗೆ ಈ ಬೆಳವಣಿಗೆಗಳಿಗೆ ಬಿಜೆಪಿಯೇ ಹೊಣೆ’ ಎನ್ನುವ ಮೂಲಕ ಮೋದಿ ಪರ ವಕಾಲತ್ತು ವಹಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿ ರುವ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ, “ಮೋದಿ ಅವರ ಬಡವರ ಪರ ಯೋಜ ನೆಗಳಿಗೆ ಸಿಎಂ ಮಮತಾ ಮನಸೋತಿದ್ದಾರೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next