ಅಹಮದಾಬಾದ್ : ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ಗುರುವಾರ ಗುಜರಾತ್ ಗೆ ಆಗಮಿಸಿದ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಪ್ರಸಿದ್ಧ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದರು. ಗುಜರಾತ್ ಸಿಎಂ ಭೂಪೇಶ್ ಪಟೇಲ್ ಅವರ ಜತೆಗಿದ್ದರು.
ಆಶ್ರಮ ಸಂದರ್ಶಕರ ಪುಸ್ತಕದಲ್ಲಿನ ತಮ್ಮ ಸಂದೇಶದಲ್ಲಿ, ಯುಕೆ ಪ್ರಧಾನಿ ಅವರು ಭಾರತವನ್ನು ಸ್ವಾತಂತ್ರ್ಯದ ಕಡೆಗೆ ತಂಡ ಮಹಾತ್ಮ ಗಾಂಧಿಯವರ ಮೌಲ್ಯಗಳನ್ನು ಶ್ಲಾಘಿಸುವ ಸಂದೇಶವನ್ನು ಬರೆದಿದ್ದಾರೆ.
“ಈ ಅಸಾಧಾರಣ ವ್ಯಕ್ತಿಯ ಆಶ್ರಮಕ್ಕೆ ಬರಲು ಮತ್ತು ಜಗತ್ತನ್ನು ಉತ್ತಮವಾಗಿ ಬದಲಾಯಿಸಲು ಅವರು ಸತ್ಯ ಮತ್ತು ಅಹಿಂಸೆಯ ಇಂತಹ ಸರಳ ತತ್ವಗಳನ್ನು ಹೇಗೆ ಸಜ್ಜುಗೊಳಿಸಿದರು ಎಂಬುದನ್ನು ಅರ್ಥಮಾಡಿಕೊಳ್ಳಬಹುದು” ಎಂದು ಬೋರಿಸ್ ಜಾನ್ಸನ್ ಬರೆದಿದ್ದಾರೆ.
ಮೊಟ್ಟಮೊದಲ ಬಾರಿಗೆ ಗುಜರಾತ್ ಗೆ ಆಗಮಿಸಿರುವ ಜಾನ್ಸನ್ ಅವರು ಆಶ್ರಮದಲ್ಲಿ ಚರಕದ ಎದುರು ಕುಳಿತು ನೇಯ್ಗೆಯನ್ನು ಮಾಡಿದರು.
ಬೋರಿಸ್ ಜಾನ್ಸನ್ ಅವರು ಅಹಮದಾಬಾದ್‌ನಲ್ಲಿ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿಯನ್ನು ಭೇಟಿಯಾದರು.