Advertisement

ಏ.7ಕ್ಕೆ ರಾಜ್ಯದಲ್ಲಿ ಪ್ರಧಾನಿ ಮೋದಿ ಸಮಾವೇಶ

06:59 AM Mar 29, 2019 | Vishnu Das |

ಬೆಂಗಳೂರು : ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಏ.7ರಂದು ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದಲ್ಲಿ ಚುನಾವಣಾ ರ್ಯಾಲಿ ನಡೆಸಲಿದ್ದು, ಸ್ಥಳ, ರ್ಯಾಲಿಯ ವಿವರ ಇನ್ನಷ್ಟೇ ನಿಗದಿಯಾಗಬೇಕಿದೆ.

Advertisement

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ಬಿಜೆಪಿ
ಚುನಾವಣಾ ಉಸ್ತುವಾರಿ ಮುರಳೀಧರರಾವ್‌, ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ರಾಜ್ಯದ ಹಲವೆಡೆ ಸಾರ್ವ ಜನಿಕ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಏ.7ಕ್ಕೆ ಮೋದಿಯವರು ರಾಜ್ಯದಲ್ಲಿ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದು, ಸ್ಥಳ
ಇನ್ನೂ ನಿಗದಿಯಾಗಿಲ್ಲ. ಆರು ಹೆಚ್ಚು ರ್ಯಾಲಿಗೆ ಚಿಂತಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಈಗಾಗಲೇ 25 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟವಾಗಿದ್ದು, ಬಾಕಿಯಿರುವ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಸತ್ಯಾಂಶ ಹೊರ ಬರಲಿದೆ

ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ಸಂಸ್ಥೆಯೊಂದರ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ಹೇಳಿ ವ್ಯಕ್ತಿಯೊಬ್ಬರಿಗೆ ಕೋಟ್ಯಂ
ತರ ರೂ. ವಂಚಿಸಲಾಗಿದೆ ಎಂಬ ಆರೋಪದಡಿ ತಮ್ಮ ವಿರುದ್ಧ ಹೈದರಾಬಾದ್‌ನ ಠಾಣೆಯೊಂದರಲ್ಲಿ ಎಫ್ಐಆರ್‌ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಮುರಳೀಧರರಾವ್‌, “ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ನನ್ನ ವಿರುದಟಛಿ ವಿನಾಕಾರಣ ಆರೋಪ ಮಾಡಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವರವಾಗಿ ಪ್ರತಿಕ್ರಿಯಿಸಿದ್ದು, ಸತ್ಯಾಂಶ ಹೊರಗೆ ಬರಲಿದೆ’ ಎಂದು ಹೇಳಿದರು.

Advertisement

ಹಿಂದೆಲ್ಲಾ ಮಹಾಘಟಬಂಧನ್‌ ಮಹಾ ವೈಫ‌ಲ್ಯ ಕಂಡಿದೆ. ಮಹಾಘಟಬಂಧನ್‌ ರಾಜಕೀಯ ಹಾಗೂ ಆಡಳಿತಕ್ಕೆ ಕರ್ನಾಟಕದ ಮೈತ್ರಿ ಆಡಳಿತ ಮಾದರಿ ಎಂದು ಮುರಳೀಧರರಾವ್‌ ಲೇವಡಿ ಮಾಡಿದರು. ರಾಜ್ಯದಲ್ಲಿ ಹಾಲಿ ಬಿಜೆಪಿ ಸಂಸದರಿರುವ
ಕ್ಷೇತ್ರಗಳ ಜತೆಗೆ ಒಟ್ಟು 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನ
ನಡೆದಿದೆ. ರಾಜ್ಯದ ಜನರಲ್ಲಿ ಪ್ರಧಾನಿ ಮೋದಿ, ಬಿಜೆಪಿ ಪರವಾಗಿ ಒಲವಿದೆ. ಪಕ್ಷಗಳು ಮೈತ್ರಿ ಮಾಡಿ ಕೊಂಡರೂ ಮತಗಳು ವರ್ಗಾವಣೆಯಾಗುವುದಿಲ್ಲ. ಕೇಂದ್ರ ಸರ್ಕಾರದ ಸಾಧನೆ ಹಾಗೂ ರಾಜ್ಯದ ಅಭಿವೃದಿಟಛಿಗೆ ಕೇಂದ್ರ ನೀಡಿದ ಕೊಡುಗೆ, ಕೇಂದ್ರ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು, ಮೈತ್ರಿ ಆಡಳಿತದ ವೈಫ‌ಲ್ಯ ವಿಚಾರಗಳು ಚುನಾವಣೆಯ ಪ್ರಮುಖ ವಿಚಾರಗಳಾಗಿವೆ. ಮೈತ್ರಿ ಸರ್ಕಾರದಲ್ಲಿನ ಅಸ್ಥಿರತೆ, ಆಂತರಿಕ ಕಲಹ, ಬ್ಲಾಕ್‌ವೆುàಲ್‌,ಕಮಿಷನ್‌ ವ್ಯವಹಾರವು ಆಡಳಿತ ವೈಖರಿ ತೋರಿಸುತ್ತದೆ ಎಂದು ಹೇಳಿದರು.

ಹಿಂದಿನ ಕಾಂಗ್ರೆಸ್‌ ಸರ್ಕಾರ 10 ಪರ್ಸೆಂಟ್‌ ಕಮಿಷನ್‌ ಸರ್ಕಾರವಾಗಿದ್ದರೆ, ಮೈತ್ರಿ ಸರ್ಕಾರವು 20 ಪರ್ಸೆಂಟ್‌ ಕಮಿಷನ್‌ ಸರ್ಕಾರವಾಗಿದೆ. ಈರೀತಿಯ ಆಡಳಿತ ಕೇಂದ್ರದಲ್ಲೂ ಬರಬಾರದು ಎಂಬ ಭಾವನೆ ಜನರಲ್ಲಿದೆ. ಹಾಗಾಗಿ, ದೇಶದಲ್ಲಿ
ಮಹಾಘಟಬಂಧನವೇ ಇಲ್ಲದಂತಾಗಿದೆ. ನಾನಾ ಪಕ್ಷಗಳು ಯಾವುದೇ ಸಿದಾಟಛಿಂತ, ಸಾಮಾನ್ಯ ಕನಿಷ್ಠ ಕಾರ್ಯಕ್ರಮವೂ ಇಲ್ಲದೇ ಕೇವಲ ಪ್ರಧಾನಿ ಮೋದಿ, ಬಿಜೆಪಿಯನ್ನು ವಿರೋಧಿಸಲು ಹಾಗೂ ಅವರು ಮತ್ತೆ ಪ್ರಧಾನಿಯಾಗುವುದನ್ನು ತಡೆಯುವ ಸಲುವಾಗಿ ಒಂದುಗೂಡುವ ಪ್ರಯತ್ನ ನಡೆಸಿದ್ದು, ಅದು ವಿಫ‌ಲವಾಗಿದೆ ಎಂದರು.

ನಿಖಿಲ್‌  ಕುಮಾರಸ್ವಾಮಿಯವರು ಸಲ್ಲಿರುವ ನಾಮಪತ್ರದಲ್ಲಿನ ನ್ಯೂನತೆಗಳನ್ನು ಆಕ್ಷೇಪಿಸಿ ಬಿಜೆಪಿ ದೂರು ನೀಡಿತ್ತು. ಪ್ರಮಾಣಪತ್ರದಲ್ಲಿ ನಿಖೀಲ್‌ ಅವರು ತಮ್ಮ ಆಸ್ತಿ ವಿವರ ಸರಿಯಾಗಿ ಸಲ್ಲಿಸಿರಲಿಲ್ಲ. ದೂರು ನೀಡಿರುವುದಕ್ಕೆ ಸ್ವೀಕೃತಿ ಪತ್ರವೂ ಇದೆ. ಆದರೆ, ಅಧಿಕಾರಿಗಳು ದೂರು ನೀಡಿಲ್ಲ ಎನ್ನುತ್ತಿದ್ದಾರೆ. ಇದರಿಂದ ಅಧಿಕಾರಿಗಳ
ಮೇಲೆ ಮುಖ್ಯಮಂತ್ರಿಗಳ ಪ್ರಭಾವ ಎಷ್ಟರ ಮಟ್ಟಿಗಿದೆ ಎಂಬುದು ಗೊತ್ತಾಗುತ್ತದೆ.
● ಮುರಳೀಧರರಾವ್‌

Advertisement

Udayavani is now on Telegram. Click here to join our channel and stay updated with the latest news.

Next