Advertisement

ಕೋವಿಡ್ ಸೋಂಕು ಬಿಕ್ಕಟ್ಟಿನ ನಡುವೆ ಪ್ರಧಾನಿ ಮೋದಿಯ ಜನಪ್ರಿಯತೆ ಹೆಚ್ಚಳ

02:11 AM May 19, 2020 | Hari Prasad |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕೋವಿಡೋತ್ತರ ಕಾಲದಲ್ಲಿ ಶೇ.90ರಷ್ಟು ಹೆಚ್ಚಳ ಕಂಡಿದೆ ಎಂದು ತಜ್ಞರ ಸಮೀಕ್ಷೆ ಹೇಳಿದೆ.

Advertisement

ಮೋದಿ ಅವರ ಈ ಜನಪ್ರಿಯತೆ ವಿಶ್ವ ದಿಗ್ಗಜರಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ರನ್ನೂ ಮೀರಿಸಿದೆ.

ಕೋವಿಡ್ ಪೂರ್ವದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌, ಭಾರತ ಪ್ರವಾಸ ಕೈಗೊಂಡ ವೇಳೆಯಲ್ಲಿ ಮೋದಿ ಅವರಿಗೆ ದೇಶದ ಹಲವೆಡೆ ವಿರೋಧದ ಅಲೆಯಿತ್ತು.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದರಿಂದಾಗಿ, ಅಸಮಾಧಾನ ಭುಗಿಲೆದ್ದಿತ್ತು. ಇಳಿಜಾರಿನಲ್ಲಿದ್ದ ದೇಶದ ಆರ್ಥಿಕತೆ, ನಿರುದ್ಯೋಗ ಹೆಚ್ಚಳಗಳು ಮೋದಿ ಸರಕಾರಕ್ಕೆ ಸವಾಲಾಗಿ ಪರಿಣಮಿಸಿದ್ದವು.

ಮತ್ತೆ ನಂಬಿಕೆ: ದೇಶಕ್ಕೆ ಕೋವಿಡ್ ಕಾಲಿಟ್ಟ ನಂತರವೂ ಆರ್ಥಿಕ ಬಿಕ್ಕಟ್ಟು ಸೇರಿದಂತೆ, ಹಲವು ಸಮಸ್ಯೆಗಳು ಎದುರಾಗಿದ್ದವು. ಆದರೆ, ಅವನ್ನೆಲ್ಲ ನಿಭಾಯಿಸುವಲ್ಲಿ ಮೋದಿ ಸರಕಾರ ಯಶಸ್ವಿಯಾಗಿದೆ ಎಂದು ರಾಜಕೀಯ ತಜ್ಞರು ಹೇಳುತ್ತಾರೆ. ಮೋದಿ ಅವರ ಸಮರ್ಥ ನಾಯಕತ್ವದ ಮೇಲೆ ಭಾರತ ಮತ್ತೆ ನಂಬಿಕೆ ಇಟ್ಟಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

Advertisement

ಕೈಹಿಡಿದ ಅಭಿವೃದ್ಧಿ ಮಂತ್ರ
ಈ ಹಿಂದೆ ವಿರೋಧ ಅಲೆಗಳು ಎದ್ದಾಗ ಹಿಂದುತ್ವವಾದ, ಪಾಕಿಸ್ತಾನದ ಮೇಲಿನ ದಾಳಿಗಳು ಮೋದಿ ಅವರನ್ನು ಕೈಹಿಡಿಯುತ್ತಿದ್ದವು. ಆದರೆ, ಈ ಬಾರಿ ದೇಶದ ಸಮಗ್ರ ಅಭಿವೃದ್ಧಿ ಮಂತ್ರವೇ ಜನಪ್ರಿಯತೆಯ ಉತ್ತುಂಗ ಸ್ಥಾನದಲ್ಲಿ ನಿಲ್ಲುವಂತೆ ಮಾಡಿದೆ. ಭಾರತಕ್ಕೆ ಎದುರಾದ ಆರ್ಥಿಕ ಬಿಕ್ಕಟ್ಟನ್ನು ಶಮನ ಮಾಡಲು, ಪ್ರಧಾನಿ ಘೋಷಿಸಿದ್ದ 20 ಲಕ್ಷ ಕೋಟಿ ಪ್ಯಾಕೇಜ್‌ನಿಂದಾಗಿ, ದೇಶವಾಸಿಗಳಿಗೆ ಇನ್ನಷ್ಟು ಭರವಸೆ ಹುಟ್ಟಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next