Advertisement

ನಾಳೆ ರಾಜ್ಯಕ್ಕೆ  ಪ್ರಧಾನಿ ನರೇಂದ್ರ ಮೋದಿ ಭೇಟಿ

09:28 AM Oct 28, 2017 | |

ಬೆಂಗಳೂರು/ಬೀದರ/ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ರಾಜ್ಯಕ್ಕೆ ಆಗಮಿಸಲಿದ್ದು, ವಿವಿಧ
ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 10.30ಕ್ಕೆ ದಿಲ್ಲಿಯಿಂದ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಆಗಮಿಸುವ ಮೋದಿ, ಅಲ್ಲಿಂದ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಮಂಜುನಾಥನ ದರ್ಶನ ಪಡೆದು, ವಿಶೇಷ ಪೂಜೆ ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅ.28ರ ಮಧ್ಯಾಹ್ನ 2 ಗಂಟೆಯಿಂದ ಅ. 29ರ ಮಧ್ಯಾಹ್ನ 2 ಗಂಟೆಯ ತನಕ ಕ್ಷೇತ್ರದಲ್ಲಿ ಇತರ ಭಕ್ತ ರಿಗೆ ಸ್ವಾಮಿಯ ದರ್ಶನಕ್ಕೆ  ಅವಕಾಶ ಇರುವುದಿಲ್ಲ. ಬಳಿಕ, ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಸಮಾವೇಶ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

Advertisement

ಬಳಿಕ, ಬೆಂಗಳೂರಿಗೆ ಆಗಮಿಸುವ ಮೋದಿ, ಮಧ್ಯಾಹ್ನ 3 ಗಂಟೆಗೆ ಅರಮನೆ ಮೈದಾನದಲ್ಲಿ ವೇದಾಂತ ಭಾರತಿ ವತಿಯಿಂದ ನಡೆಯಲಿರುವ ದಶಮ ಸೌಂದರ್ಯ ಲಹರಿ ಪಾರಾಯಣೋತ್ಸವ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವೇದಾಂತ ಭಾರತಿ ಸಂರಕ್ಷಕರಾದ ಶಂಕರ ಭಾರತೀ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಸೌಂದರ್ಯ ಲಹರಿ ಮಹಾ ಸಮರ್ಪಣೆ ನಡೆಯುತ್ತಿದೆ.

ರೈಲು ಮಾರ್ಗಕ್ಕೆ ಚಾಲನೆ: ಸಂಜೆ 5ಕ್ಕೆ ಬೀದರಗೆ ಆಗಮಿಸುವ ಪ್ರಧಾನಿ, ಹೈದ್ರಾಬಾದ್‌ ಕರ್ನಾಟಕದ ಮಹತ್ವದ ಯೋಜನೆಯಾಗಿರುವ ಬೀದರ-ಕಲಬುರಗಿ ಮಧ್ಯದ 110 ಕಿ.ಮೀ.ದೂರದ ರೈಲು ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ. ಈ ರೈಲು ಮಾರ್ಗ ಯೋಜನೆ ಜಾರಿಯಲ್ಲಿ ಶ್ರೇಯಸ್ಸು ಪಡೆಯಲು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಜಟಾಪಟಿ ನಡೆದಿದೆ. 

Advertisement

Udayavani is now on Telegram. Click here to join our channel and stay updated with the latest news.

Next