Advertisement
ಪೋಸ್ಟಲ್ಲಿ ಇರುವುದೇನು?ಒಂದು ಯುವ ಪ್ರಭುತ್ವವಾಗಿರುವ ಭಾರತ ನವೋತ್ಸಾಹಕ್ಕೆ ಹೆಸರಾಗಿದೆ. ಈ ಉತ್ಸಾಹ ಹೊಸದೊಂದು ಕೆಲಸದ ಸಂಸ್ಕೃತಿಯನ್ನೇ ಪರಿಚಯಿಸಿದೆ. ವ್ಯವಹಾರ ಮತ್ತು ಕೆಲಸದ ಹೊಸ ಸಂಸ್ಕೃತಿಯನ್ನು ಮರುವ್ಯಾಖ್ಯಾನಿಸುವ ಈ ಕೆಳಗಿನ ಅಂಶಗಳನ್ನು ನಾನು ಹೊಚ್ಚ ಹೊಸ ಸ್ವರಗಳೆಂದು ಕರೆಯಲು ಇಚ್ಛಿಸುತ್ತೇನೆ ಎಂದು ಮೋದಿ ತಿಳಿಸಿದ್ದಾರೆ.
ಹೋರಾಟದ ಸಂದರ್ಭ ಧರ್ಮ ನೋಡಬಾರದು
ಕೋವಿಡ್ 19 ವೈರಸ್ ಹೋರಾಟದಲ್ಲಿ ಜನಾಂಗ, ಧರ್ಮ, ಬಣ್ಣ, ಮತ, ಭಾಷೆ, ಗಡಿಗಳನ್ನು ನೋಡಬಾರದು. ನಮ್ಮ ಪ್ರತಿಕ್ರಿಯೆ, ನಡವಳಿಕೆಯಲ್ಲಿ ಏಕತೆ ಮತ್ತು ಸಹೋದರತ್ವಕ್ಕೆ ಪ್ರಾಮುಖ್ಯತೆ ನೀಡಬೇಕು. ನಾವೆಲ್ಲರೂ ಒಂದೇ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆಕೊಟ್ಟಿದ್ದಾರೆ. ದಿಲ್ಲಿಯ ತಬ್ಲೀಘಿ ಜಮಾತ್ ಸಭೆಯ ಅನಂತರ, ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದವು. ಮುಸ್ಲಿಮರು ಉದ್ದೇಶಪೂರ್ವಕವಾಗಿ ವೈರಸ್ ಹಬ್ಬಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದವು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಮೊಫೋಬಿಕ್ ಹ್ಯಾಶ್‌ಟ್ಯಾಗ್‌ಗಳು ಸೃಷ್ಟಿಯಾಗಿ, ಇಡೀ ಸಮುದಾಯ ನಾನಾ ಟೀಕೆಗಳನ್ನು ಎದುರಿಸಬೇಕಾಯಿತು.
Related Articles
ವಿರುದ್ಧದ ನಮ್ಮ ಹೋರಾಟ ದುರ್ಬಲಗೊಳ್ಳುತ್ತದೆ. ಭಾವೈಕ್ಯದ ಒಗ್ಗಟ್ಟಿನ ಹೋರಾಟವೇ ಈ ಹೊತ್ತಿನ ಅನಿವಾರ್ಯ. ನಾವು ಒಗ್ಗಟ್ಟಿಗೆ ಆದ್ಯತೆ ನೀಡೋಣ’ ಎಂದು ಪ್ರಧಾನಮಂತ್ರಿ ಕಚೇರಿಯ ಟ್ವೀಟ್ ಹೇಳಿದೆ.
Advertisement