Advertisement

Mann ki Baat ; ದೊಡ್ಡ ಕುಟುಂಬಗಳು ವಿದೇಶದಲ್ಲಿ ಮದುವೆ ಆಯೋಜಿಸದಂತೆ ಪ್ರಧಾನಿ ಮನವಿ

05:42 PM Nov 26, 2023 | Vishnudas Patil |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ 107ನೇ ಆವೃತ್ತಿಯ ‘ಮನ್ ಕಿ ಬಾತ್’ ನಲ್ಲಿ ಮಾತನಾಡುವ ವೇಳೆ ಸಾಗರೋತ್ತರ ವಿವಾಹಗಳ ಪ್ರವೃತ್ತಿಯ ಕುರಿತು ಪ್ರಸ್ತಾವಿಸಿ, ಭಾರತದ ಹಣ ದೇಶದಿಂದ ಹೊರ ಹೋಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅಂತಹ ಆಚರಣೆಗಳನ್ನು ದೇಶದೊಳಗೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

Advertisement

ಕೆಲವು ದೊಡ್ಡ ಕುಟುಂಬಗಳು ವಿದೇಶದಲ್ಲಿ ಮದುವೆಗಳನ್ನು ಆಯೋಜಿಸುವ ಪ್ರವೃತ್ತಿ ಹೊಂದಿವೆ. ಈ ಮದುವೆಯ ಋತುವಿನಲ್ಲಿ, ಕೆಲವು ವ್ಯಾಪಾರ ಸಂಸ್ಥೆಗಳು ಈ ವರ್ಷ ಸುಮಾರು 5 ಲಕ್ಷ ಕೋಟಿ ವ್ಯಾಪಾರ ಆಗಬಹುದೆಂದು ಅಂದಾಜಿಸಿದ್ದಾರೆ. ಮದುವೆಗಳಿಗೆ ಶಾಪಿಂಗ್ ಮಾಡುವಾಗ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವಂತೆ ಅವರು ಜನರನ್ನು ಒತ್ತಾಯಿಸಿದರು.

ವಿದೇಶದಲ್ಲಿ ಮದುವೆಗಳ ಟ್ರೆಂಡ್ ನಿಂತರೆ, ಭಾರತದ ಜನರು ಅಂತಹ ಕಾರ್ಯಕ್ರಮಗಳಲ್ಲಿ ಸೇವೆಗಳನ್ನು ನೀಡಲು ಅವಕಾಶವನ್ನು ಪಡೆಯುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದರು.

”ವೋಕಲ್ ಫಾರ್ ಲೋಕಲ್ ನ ಈ ಮಿಷನ್ ಅನ್ನು ನೀವು ವಿಸ್ತರಿಸಬೇಕು. ಸಾಗರೋತ್ತರ ಮದುವೆಗಳನ್ನು ಇಷ್ಟಪಡುವ ದೊಡ್ಡ ಕುಟುಂಬಗಳಿಗೆ ಸಂಬಂಧಿಸಿದ ವಿಷಯವಾಗಿದ್ದು,ನನ್ನ ಈ ನೋವು ಖಂಡಿತವಾಗಿಯೂ ಆ  ಕುಟುಂಬಗಳನ್ನು ತಲುಪುತ್ತದೆ ಎಂದು ನಾನು ಭಾವಿಸುತ್ತೇನೆ. ಜನರು ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿ ರಾಷ್ಟ್ರ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡರೆ, ವಿಶ್ವದ ಯಾವುದೇ ಶಕ್ತಿಯು  ದೇಶದ ಅಭಿವೃದ್ಧಿಯನ್ನು ತಡೆಯಲು ಸಾಧ್ಯವಿಲ್ಲ” ಎಂದು ಪ್ರಧಾನಿ ಮೋದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next