Advertisement
ಝಾರ್ಖಂಡ್‌ನ ರಾಂಚಿಯಲ್ಲಿ ನಡೆದ ಸಮಾರಂಭದಲ್ಲಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ ಅವರು ‘ಇದು ಕಡುಬಡವರಿಗೂ ಉಪಯೋಗವಾಗುವ ಯೋಜನೆ’ ಎಂದಿದ್ದಾರೆ.
Related Articles
Advertisement
ಈ ಯೋಜನೆ ಮೂಲಕ ದೇಶದ 50 ಕೋಟಿ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಗುರಿ ಇದೆ. ಅಲ್ಲದೆ ಪ್ರತೀ ಕುಟುಂಬಕ್ಕೂ ವಾರ್ಷಿಕ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಸಿಗಲಿದೆ. ಯೋಜನೆಗಾಗಿ ಪ್ರತಿ ಕುಟುಂಬಕ್ಕೆ ವಾರ್ಷಿಕ 2 ಸಾವಿರ ರೂ. ಕಂತು ಇರಲಿದ್ದು, ಇದರಲ್ಲಿ ಕೇಂದ್ರ ಸರಕಾರ ಶೇ. 60 ಮತ್ತು ರಾಜ್ಯ ಸರಕಾರ ಶೇ. 40 ಭರಿಸಲಿವೆ.
ಕರ್ನಾಟಕ ಸಹಿತ ಸದ್ಯ 26 ರಾಜ್ಯಗಳು ಇದಕ್ಕೆ ಒಪ್ಪಿಗೆ ನೀಡಿದ್ದು, ಉಳಿದವು ತಮ್ಮದೇ ಆರೋಗ್ಯ ಯೋಜನೆಗಳನ್ನು ಜಾರಿ ಮಾಡಿಕೊಂಡಿವೆ. ಯೋಜನೆಗೆ ಸೇರುವಂತೆ ಒಡಿಶಾ ಸರಕಾರಕ್ಕೂ ಕೇಂದ್ರ ಮನವಿ ಮಾಡಿದೆ.