Advertisement

ಪ್ರಧಾನಿ ಮೋದಿ ಮುಸ್ಲಿಂ ವಿರೋಧಿಯಲ್ಲ

09:38 PM Apr 03, 2019 | Team Udayavani |

ಆಲೂರು: ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರೋಧಿಯಲ್ಲ ಅವರು ಉಗ್ರಗಾಮಿಗಳ ವಿರೋಧಿ ಎಂದು ಹಾಸನ ಲೋಕಸಭಾ ಬಿಜೆಪಿ ಅಭ್ಯರ್ಥಿ ಎ.ಮಂಜು ತಿಳಿಸಿದರು. ಆಲೂರು ತಾಲೂಕಿನ ಡಿ. ಕಣಗಾಲು, ಹುಣಸವಳ್ಳಿ,ಕಣತೂರು,ಪಾಳ್ಯ, ಹಾಗೂ ಭೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದರು.

Advertisement

ಗೌಡರ ಮಾತಿಗೆ ಕಿಮ್ಮತ್ತಿಲ್ಲ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಕಳೆದ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾದರೆ ದೇಶ ಬಿಡುತ್ತೇನೆಂದು ಹೇಳಿದ್ದರು. ಈಗ ಸಿದ್ದರಾಮಯ್ಯನವರ ಜೊತೆ ಸೇರಿ ಬಿಜೆಪಿ ಪಕ್ಷವನ್ನು ನಿರ್ನಾಮ ಮಾಡುತ್ತೇನೆಂದು ಹೇಳುತ್ತಿದ್ದಾರೆ. ಅವರ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇರುವುದಿಲ್ಲ ಎಂದರು.

ಕುಟುಂಬ ರಾಜಕಾರಣ ಮಾರಕ: ಭಾರತದ 130 ಕೋಟಿ ಜನತೆಯ ಭದ್ರತೆ ಹಾಗೂ ಸುಭದ್ರತೆಯ ದೃಷ್ಟಿಯಿಂದ ಪ್ರಧಾನಿ ಮೊದೀಜಿಯವರ ನಾಯಕತ್ವ ಅವಶ್ಯಕತೆ ಇದೆ ಆದ್ದರಿಂದ ಹಾಸನ ಲೋಕಸಭಾ ಕ್ಷೇತ್ರದ ಮತದಾರರು ಕುಟುಂಬ ರಾಜಕಾರಣಕ್ಕೆ ಬೇಸತ್ತು ಸಂಪೂರ್ಣವಾಗಿ ನಮ್ಮ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದರು.

ರೇವಣ್ಣಗೆ ಸೋಲಿನ ಭಯ: ರೇವಣ್ಣನವರು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ನಂತರ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ದೌರ್ಜನ್ಯ ದಬ್ಟಾಳಿಕೆ ನಡೆಸಿ ಅವರ ಮೇಲೆಯೇ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಿಸಿ ಈಗ ಇದ್ದಕ್ಕಿದ್ದಂತೆ ಮಗನ ಗೆಲುವಿಗಾಗಿ ಅವರ ಮನೆಗಳಿಗೆ ಎಡತಾಗುತ್ತಿರುವುದನ್ನೂ ನೋಡುತ್ತಿದ್ದರೆ ಅವರಿಗೆ ಸೋಲಿನ ಭಯ ಕಾಡುತ್ತಿದೆ ಎಂದರು.

ಬಿಜೆಪಿ ಮುಖಂಡ ಹಾಗೂ ಶಾಸಕ ಪ್ರೀತಂ.ಜಿ.ಗೌಡ ಮಾತನಾಡಿ ಜಿಲ್ಲೆಯಲ್ಲಿ 40-50 ವರ್ಷಗಳಿಂದಲೂ ಕುಟುಂಬ ರಾಜಕಾರಣ ಮಾಡುತ್ತಾ ಜನ ಸಾಮಾನ್ಯರ ಮೂಗಿಗೆ ತುಪ್ಪ ಸವರುತ್ತಾ ರಾಜಕಾರಣ ಮಾಡಿಕೊಂಡಿ ಬಂದಿರುವ ಅಪ್ಪ ಮಕ್ಕಳಿಗೆ ಇತಿಶ್ರೀ ಹಾಡಲೇ ಬೇಕಾಗಿದೆ ಎಂದರು.

Advertisement

ದಲಿತರಿಗೆ ಅನ್ಯಾಯ: 6 ಬಾರಿ ಚುನಾವಣೆಯಲ್ಲಿ ಗೆದ್ದ ಪರಿಶಿಷ್ಟ ಜಾತಿ ಎಚ್‌.ಕೆ. ಕುಮಾರಸ್ವಾಮಿಯವರಿಗೆ ಮಂತ್ರಿಗಿರಿ ನೀಡದೇ ಪರಿಶಿಷ್ಟ ಜಾತಿಯವರಿಗೆ ಅನ್ಯಾಯ ಮಾಡಿದ್ದಾರೆ ಅದೇ ರೀತಿ ಅವರ ಸಚಿವ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೂ ಸಚಿವ ಸ್ಥಾನ ನೀಡದೆ ದೊಹವೆಸಗಿದ್ದಾರೆ ಆದ್ದರಿಂದ ದೇಶಕ್ಕೆ ಸಮರ್ಥ ನಾಯಕತ್ವದ ಅವಶ್ಯಕತೆ ಇದ್ದು ದೇಶದ ಭದ್ರತೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಪ್ರಧಾನ ಮಂತ್ರಿ ಮೋದೀಜಿಯವರನ್ನು ಮತ್ತೂಮ್ಮೆ ಪ್ರಧಾನಮಂತ್ರಿ ಮಾಡಲು ಜಿಲ್ಲೆಯ ಎಲ್ಲಾ ಜನಾಂಗದ ಮತದಾರರು ಬಿಜೆಪಿಬೆಂಬಲಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಬಿಜೆಪಿಮುಖಂಡ ನಾರ್ವೆ ಸೋಮಶೇಖರ್‌,ಮಾಜಿ ಶಾಸಕ ಬಿ.ಆರ್‌.ಗುರುದೇವ್‌,ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನಾಗೇಶ್‌,ಬಿಜೆಪಿ ನಾಯಕರಾದ ಎಚ್‌.ಬಿ. ಧರ್ಮರಾಜು.ಹೇಮಂತ್‌ ಎ.ಎಸ್‌.ಈಶ್ವರ.ಅಜಿತ್‌ ಚಿಕ್ಕಣಗಾಲು,ಕಣಗಾಲು ಲೋಕೇಶ್‌.ಮಂಜೇಶ್‌ ಮಲ್ಲೇಶ್‌.ವಿಜಯ್‌ ಕುಮಾರ್‌, ಹಾಗೂ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next