Advertisement

ಪುಣೆ ಮೆಟ್ರೋ ರೈಲು ನಿಲ್ದಾಣ ಲೋಕಾರ್ಪಣೆ : ಟಿಕೆಟ್‌ ಖರೀದಿಸಿ ಪ್ರಧಾನಿ ಪ್ರಯಾಣ

09:31 PM Mar 06, 2022 | Team Udayavani |

ಪುಣೆ: ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪುಣೆ ಮೆಟ್ರೋ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ, ಭಾನುವಾರ ಲೋಕಾರ್ಪಣೆ ಮಾಡಿದರು. ಪುಣೆಯ ಗಾರ್ವಾರೆ ಮೆಟ್ರೋ ರೈಲು ನಿಲ್ದಾಣದಲ್ಲಿ ನಡೆದ ಉದ್ಘಾಟನಾ ಸಮಾರಂಭದ ನಂತರ, ನಿಲ್ದಾಣದಲ್ಲಿರುವ ಕಿಯೋಸ್ಕ್ನಿಂದ ಖುದ್ದು ಟಿಕೆಟ್‌ ಖರೀದಿಸಿದ ಮೋದಿ, ಅಲ್ಲಿಂದ ಐದು ಕಿ.ಮೀ. ದೂರದಲ್ಲಿರುವ ಆನಂದನಗರ್‌ ನಿಲ್ದಾಣದವರೆಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದರು. ಪ್ರಧಾನಿಯಿದ್ದ ಬೋಗಿಯಲ್ಲಿದ್ದ ದಿವ್ಯಾಂಗರ ಜೊತೆಯಲ್ಲಿ ಮೋದಿ ಉಭಯಕುಶಲೋಪರಿ ನಡೆಸಿದರು.

Advertisement

ಒಟ್ಟು 32 ಕಿ.ಮೀ. ಉದ್ದದ ಈ ಯೋಜನೆಗೆ 2016ರಲ್ಲಿ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ಮೊದಲ ಹಂತದಲ್ಲಿ 12 ಕಿ.ಮೀ. ದೂರದವರೆಗಿನ ಯೋಜನೆ ಸಿದ್ಧವಾಗಿದ್ದು, ಉಳಿದ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ.

ಶಿವಾಜಿ ಪುತ್ಥಳಿ ಅನಾವರಣ
ಪುಣೆ ಮಹಾನಗರ ಪಾಲಿಕೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶಿವಾಜಿ ಪುತ್ಥಳಿಯನ್ನು ಪ್ರಧಾನಿ ಲೋಕಾರ್ಪಣೆ ಮಾಡಿದರು. 9.5 ಅಡಿ ಎತ್ತರದ 1,850 ಕೆಜಿ ತೂಕದ ಕಂಚು ಲೋಹದ ಮತ್ತೂಂದು ಸ್ವರೂಪವಾದ ಗನ್‌ ಮೆಟಲ್‌ನಿಂದ ನಿರ್ಮಿಸಲಾಗಿದೆ. ಇದೇ ವೇಳೆ, ಮೋದಿಯವರು ಪಾಲಿಕೆ ಆವರಣದಲ್ಲಿರುವ ಜ್ಯೋತಿಭಾಯಿ ಫ‌ುಲೆಯವರ ಪುತ್ಥಳಿಗೂ ಮಾಲಾರ್ಪಣೆ ಮಾಡಿದರು.

ಮ್ಯೂಸಿಯಂ ಉದ್ಧಾಟನೆ
ಖ್ಯಾತ ವ್ಯಂಗ್ಯಚಿತ್ರಕಾರ ದಿ. ಆರ್‌.ಕೆ. ಲಕ್ಷ್ಣಣ್‌ರವರ ಜೀವನವನ್ನು ಕಟ್ಟಿಕೊಡುವ ಹೊಸ ವಸ್ತುಸಂಗ್ರಹಾಲಯವನ್ನು ಮೋದಿ ಉದ್ಘಾಟಿಸಿದರು. ಇದರಲ್ಲಿ ಲಕ್ಷ್ಮಣ್‌ ಅವರು ಕಾಮನ್‌ ಮ್ಯಾನ್‌ ಪರಿಕಲ್ಪನೆಯಡಿ ರಚಿಸಿದ 30,000 ವ್ಯಂಗ್ಯಚಿತ್ರಗಳನ್ನು ಕಾಣಬಹುದಾಗಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next