Advertisement
– ಟೋಕಿಯೊದಲ್ಲಿ ನಡೆದ ಎರಡು ಒಲಿಂಪಿಕ್ಸ್ ಕೂಟಗಳಲ್ಲಿ ಬಳಕೆಯಾದ ಕ್ರೀಡೋಪಕರಣಗಳು ಈಗ ಕೋಟಿ ಕೋಟಿ ರೂಪಾಯಿ ಬೆಲೆಬಾಳುವ ವಸ್ತುಗಳು! ಪ್ರಧಾನಿ ಮೋದಿ ಅವರ 71ನೇ ಜನ್ಮದಿನ ಪ್ರಯುಕ್ತ ಸಂಸ್ಕೃತಿ ಸಚಿವಾಲಯವು ಮೋದಿ ಅವರಿಗೆ ವಿವಿಧ ಸಂದರ್ಭಗಳಲ್ಲಿ ಲಭಿಸಿದ ಉಡುಗೊರೆಗಳನ್ನು ಹರಾಜಿಗೆ ಇರಿಸಿದೆ. ಇವುಗಳಲ್ಲಿ ಕ್ರೀಡೋಪಕರಣಗಳು, ಚಿತ್ರಕಲಾಕೃತಿಗಳು, ಅಂಗವಸ್ತ್ರ ಇತ್ಯಾದಿಗಳು ಸೇರಿವೆ. ಪ್ರತೀ ವಸ್ತುಗಳ ಮೇಲೆ ಉಡುಗೊರೆ ನೀಡಿದವರ ಸಹಿ ಇದೆ.
ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡು ದಾಖಲೆ ನಿರ್ಮಿಸಿದ್ದ ಭಾರತದ ಮೊದಲ ಫೆನ್ಸಿಂಗ್ ಪಟು ಸಿ.ಎ. ಭವಾನಿ ದೇವಿ ನೀಡಿದ ಕತ್ತಿವರಸೆ ಖಡ್ಗ 10 ಕೋಟಿ ರೂ.ಗಳಿಗೆ ಬಿಕರಿಯಾಗಿದೆ.
Related Articles
ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ತಂದುಕೊಟ್ಟ ಬ್ಯಾಡ್ಮಿಂಟನ್ ತಾರೆ ಕೃಷ್ಣ ನಗರ್ ಬಳಸಿದ್ದ ರ್ಯಾಕೆಟ್ ಕೂಡ 10 ಕೋಟಿ ರೂ.ಗಳಿಗೆ ಹರಾಜಾಗಿದೆ.
Advertisement
ಜಾವೆಲಿನ್- 1.5 ಕೋಟಿ ರೂ.ಟೋಕಿಯೊ ಒಲಿಂಪಿಕ್ಸ್ ನಲ್ಲಿ ದೇಶಕ್ಕೆ ಚಿನ್ನ ತಂದುಕೊಟ್ಟ ನೀರಜ್ ಚೋಪ್ರಾ ಬಳಸಿದ್ದ ಜಾವೆಲಿನ್ 1.5 ಕೋಟಿ ರೂ. ಮೊತ್ತದಲ್ಲಿದ್ದು, ಇದು ತನ್ನ ಹರಾಜು ದರವನ್ನು ಏರಿಸಿಕೊಳ್ಳುತ್ತಲೇ ಇದೆ. ಬ್ಯಾಡ್ಮಿಂಟನ್ ರ್ಯಾಕೆ ಟ್- 90 ಲಕ್ಷ ರೂ.
ಒಲಿಂಪಿಕ್ಸ್‌ನಲ್ಲಿ ಇತ್ತೀಚೆಗೆ ಕಂಚು ಗೆದ್ದ ಪಿ.ವಿ. ಸಿಂಧು ಸಹಿ ಮಾಡಿರುವ ರ್ಯಾಕೆಟ್‌ನ ಹರಾಜು ಬೆಲೆ 90 ಲಕ್ಷ ರೂ. ಮೀರಿ ಕೋಟಿ ರೂ. ಗಡಿ ಸಮೀಪಿಸಿದೆ. ಕೇದಾರನಾಥ ಚಿತ್ರ 5 ಲಕ್ಷ ರೂ.
ಕೇದಾರನಾಥದಲ್ಲಿ ಮೋದಿ ನಿಂತಿರುವ ವರ್ಣಚಿತ್ರ ಹರಾಜಿಗಿದೆ. ಇದು ಐಎಎಸ್ ಅಧಿಕಾರಿಯೊಬ್ಬರ ಕೊಡುಗೆ. ವಿದೇಶಗಳಲ್ಲಿ ಮೋದಿ 8 ಲಕ್ಷ ರೂ.
ವಿದೇಶಗಳ ನಾಯಕರೊಂದಿಗೆ ನರೇಂದ್ರ ಮೋದಿ ಇರುವ ವರ್ಣಚಿತ್ರ ಆಕರ್ಷಣೆ ಹುಟ್ಟಿಸಿದೆ. ಮನೋಜ್ ಗುಪ್ತಾ ಎಂಬವರ ಕಾಣಿಕೆ ಇದು. ತಾರಾಪಥದಲ್ಲಿ ಮೋದಿ 5 ಲಕ್ಷ ರೂ.
ಇದು ಮೊಹ್ಸಿನ್ ಶೇಖ್ ಎಂಬವರ ಚಿತ್ರಕಲಾಕೃತಿ. ಗ್ರಹ-ತಾರೆಗಳ ನಡುವೆ ಮೋದಿ ಅವರು ಕೈಬೀಸುತ್ತಿರುವಂತಿದೆ.