ಮಂಗಳೂರು: ಪ್ರಧಾನಿ ಮೋದಿ ಅವರು ಮೀನುಗಾರಿಕೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರಕಾರದಲ್ಲಿ ಮೊದಲ ಬಾರಿಗೆ ಪ್ರತ್ಯೇಕ ಸಚಿವಾಲಯ ಘೋಷಿಸಿ, 500 ಕೋ.ರೂ.ಗಳ ಅನುದಾನವನ್ನು ನೀಡಿದ್ದಾರೆ. ಈ ಮೂಲಕ ಮುಂದಿನ ದಿನದಲ್ಲಿ ಮೀನುಗಾರಿಕೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಆಗಲಿವೆ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದ್ದಾರೆ.
ಬಿಜೆಪಿ ದ.ಕ. ಜಿಲ್ಲಾ ಮೀನುಗಾರರ ಪ್ರಕೋಷ್ಠ ವತಿಯಿಂದ ನಗರದ
ಸು ಧೀಂದ್ರ ಸಭಾಂಗಣದಲ್ಲಿ ಗುರು ವಾರ ನಡೆದ “ಮೀನುಗಾರ ಪ್ರತಿನಿಧಿ ಗಳ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿ, ಮುಂದಿನ ಸರಕಾರದಲ್ಲಿ ಮೀನುಗಾರಿಕಾ ಸಚಿವರು ಇರಲಿದ್ದು, ಮೀನುಗಾರಿಕೆ ಮತ್ತು ಮೀನುಗಾರಿಕೆ ಸಮುದಾಯದ ಅಭಿವೃದ್ಧಿಗೆ ಇನ್ನಷ್ಟು ನೆರವು ದೊರೆಯಲಿದೆ ಎಂದರು.
ಮಂಗಳೂರಿನ ಕುಳಾç ಬಂದರು ಸಹಿತ ದೇಶಾದ್ಯಂತ 40ಕ್ಕೂ ಹೆಚ್ಚು ಸರ್ವಋತು ಬಂದರು ಕಾಮಗಾರಿ ಯನ್ನು 3 ವರ್ಷದೊಳಗೆ ಪೂರ್ಣ ಗೊಳಿಸಲು ಮೋದಿ ಸರಕಾರ ಸಂಕಲ್ಪಿ ಸಿದೆ. ಮತ್ಸÂ ಸಂಪದ ಯೋಜನೆಯಡಿ ಮೀನುಗಾರಿಕೆಗೆ 20,000 ಕೋಟಿ ರೂ. ಒದಗಿಸ ಲಾಗುತ್ತಿದೆ. “ಓಶಿಯನ್ ಸ್ಮಾರ್ಟ್’ ಯೋಜನೆಯಡಿ ಮತ್ಸ್ಯ ಸಂಪತ್ತು ಇರುವ ಪ್ರದೇಶದ ಬಗ್ಗೆ ಮೀನುಗಾರರ ಮೊಬೈಲ್‌ಗೆ ಸಂದೇಶ ಕಳುಹಿಸಲಾಗುತ್ತಿದೆ. 5 ಲಕ್ಷ ಮೀನು ಗಾರರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಐದು ವರ್ಷದಲ್ಲಿ ಮೋದಿ ಸರಕಾರ ದೇಶದ ಎಲ್ಲ ವರ್ಗಗಳ ಜನತೆಗೆ ವಿವಿಧ ಯೋಜನೆಗಳನ್ನು ನೀಡಿದೆ. ಭಾರತ ಸುರಕ್ಷಿತ ವ್ಯಕ್ತಿಯ ಕೈಯಲ್ಲಿದೆ ಎಂಬ ಭಾವನೆ ಜನತೆಗೆ ಮೂಡುವಂತಾಗಿದೆ. ಹೀಗಾಗಿ ಪ್ರಧಾನಿ ಮೋದಿ ಅವರ ಕೈ ಬಲಪಡಿಸಬೇಕಾಗಿದೆ. ಹಾಗಾಗಿ, ಸಮಾಜದ ಯಾವುದೇ ವರ್ಗದ ಮುಂದೆ ಹೋಗಿ ನಿಂತು ಮತ ಕೇಳಲು ಬಿಜೆಪಿಗೆ ಯಾವುದೇ ಸಂಕೋಚವಿಲ್ಲ ಎಂದರು.
ಕಾಪು ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ಮೀನುಗಾರ ಸಮುದಾಯ ಬಿಜೆಪಿಯನ್ನು ಬೆಂಬಲಿಸುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯ ಆಡಳಿತದಲ್ಲಿ ಮೀನುಗಾರಿಕೆ ಸಮುದಾಯಕ್ಕೆ ಸಾಕಷ್ಟು ಕೊಡುಗೆ ದೊರೆತಿದೆ. ಯಡಿ ಯೂರಪ್ಪ ಸರಕಾರ ಇದ್ದಾಗ ನಮ್ಮ ಬೇಡಿಕೆಗಳನ್ನು ಈಡೇರಿಸಿದ್ದಾರೆ.
ಕೇಂದ್ರದಲ್ಲೂ ಮೀನುಗಾರ ಸಮು ದಾಯದ ಹಲವಾರು ಮಂದಿ ಬಿಜೆಪಿ ಸಂಸದರಿದ್ದು, ಮುಂದಿನ ದಿನಗಳಲ್ಲಿ ಮೀನುಗಾರರ ಸಮಸ್ಯೆ ಪರಿಹಾರಗೊಳ್ಳಲಿದೆ ಎಂದರು.
ಬಿಜೆಪಿ ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಪ್ರತಾಪಸಿಂಹ ನಾಯಕ್, ಗೋಪಾಲಕೃಷ್ಣ ಹೇರಳೆ, ನಿತಿನ್ ಕುಮಾರ್, ರಾಮಚಂದ್ರ ಬೈಕಂಪಾಡಿ, ಬಾಬು ಬಂಗೇರ, ಶೋಭೇಂದ್ರ ಸಸಿಹಿತ್ಲು ಉಪಸ್ಥಿತರಿದ್ದರು.
453 ಯೋಜನೆ- 6.7ಲಕ್ಷ ಕೋ.ರೂ
ಬಿ.ಎಲ್. ಸಂತೋಷ್ ಮಾತನಾಡಿ, ಐದು ವರ್ಷಗಳಲ್ಲಿ ಮೋದಿ ಸರಕಾರ 7 ಕೋಟಿ ಮನೆಗೆ ಗ್ಯಾಸ್ ಸಂಪರ್ಕ ಒದಗಿಸಿದೆ. 9.70 ಶೌಚಗೃಹ ನಿರ್ಮಾಣಗೊಂಡಿದೆ. 18600 ಗ್ರಾಮಗಳಿಗೆ ವಿದ್ಯುತ್ ಪೂರೈಸಲಾಗಿದೆ. 453 ಯೋಜನೆಗಳ ಮೂಲಕ 6.7 ಲಕ್ಷ ಕೋಟಿ ರೂ.ಹಣ ಫಲಾನುಭವಿಗಳ ಖಾತೆಗೆ ನೇರವಾಗಿ ಬಂದಿದೆ. ಮುಂದಿನ ಐದು ವರ್ಷದಲ್ಲಿ ಎಲ್ಲ ಸಬ್ಸಿಡಿ ಹಣ ಫಲಾನುಭವಿಗಳ ಖಾತೆಗೆ ನೇರವಾಗಿ ಬರಲಿದೆ ಎಂದರು.