Advertisement
ಮಧುರೈನಲ್ಲಿ ಶುಕ್ರವಾರ ಚುನಾವಣ ಪ್ರಚಾರ ಕೈಗೊಂಡಿದ್ದ ಪ್ರಧಾನಿ, 2011ರಲ್ಲಿದ್ದ ಯುಪಿಎ ಸರಕಾರದಲ್ಲಿ ಡಿಎಂಕೆಯ ದೊಡ್ಡ ದೊಡ್ಡ ಸಚಿವರೂ ಇದ್ದರು. ಒಬ್ಬ ಯುಪಿಎ ಮುಖಂಡನಂತೂ ಜಲ್ಲಿ ಕಟ್ಟು ಅನಾಗರಿಕ ಕ್ರೀಡೆ ಅಂತಲೇ ಜರಿದಿದ್ದರು. ಈ ಹಿಂದೆ ಚುನಾವಣ ಪ್ರಣಾಳಿಕೆಯಲ್ಲೂ ಕಾಂಗ್ರೆಸ್ ಜಲ್ಲಿಕಟ್ಟನ್ನು ನಿಷೇಧಿಸುವುದಾಗಿ ಹೇಳಿತ್ತು. ಈಗ ಕಾಂಗ್ರೆಸ್- ಡಿಎಂಕೆ ತಾವು ತಮಿಳು ಸಂಸ್ಕೃತಿ ರಕ್ಷಕರು ಅಂತ ಹೇಳಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವ ಬೇರೆ ಕಥೆ ಹೇಳುತ್ತಿವೆ” ಎಂದು ಟೀಕಿಸಿದರು.
Related Articles
41 ದಿನಗಳ ಕಠಿನ ವ್ರತ ಮುಗಿಸಿ ಲಕ್ಷಾಂತರ ಭಕ್ತರು, ಅಯ್ಯಪ್ಪನನ್ನು ನೋಡಲು ಶಬರಿಮಲೆಗೆ ಬರುತ್ತಾರೆ. ಹೂವಿನೊಂದಿಗೆ ಸ್ವಾಗತಿಸಬೇಕಿದ್ದ ಭಕ್ತರಿಗೆ ಕೇರಳ ಸರಕಾರ ಲಾಠಿಯ ಸ್ವಾಗತ ಕೋರುತ್ತಿದೆ. ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ… ಅಯ್ಯಪ್ಪನ ಭಕ್ತರು ಮುಗ್ಧರೇ ಹೊರತು, ಕ್ರಿಮಿನಲ್ ಗಳಲ್ಲ…
– ಶಬರಿಮಲೆ ಅಯ್ಯಪ್ಪನ ಸಾನ್ನಿಧ್ಯವಿರುವ ಪತ್ತನಂತಿಟ್ಟದಲ್ಲಿ ನಿಂತು ಪ್ರಧಾನಿ ಮೋದಿ ಕೇರಳ ಸಿಎಂ ಪಿಣರಾಯಿ ವಿಜಯನ್ ಸರಕಾರದ ವಿರುದ್ಧ ವಾಗøಹಾರ ನಡೆಸಿದರು. ಶುಕ್ರವಾರದ ರ್ಯಾಲಿಯ ಹೈಲೈಟ್ಸ್ ಹೀಗಿದೆ…
Advertisement
– ಎಲ್‌ಡಿಎಫ್ ಸರಕಾರ ಮೊದಲು ಕೇರಳದ ಚಿತ್ರವನ್ನೇ ವಿರೂಪಗೊಳಿಸಲು ಯತ್ನಿಸಿತ್ತು. ಕೇರಳ ಸಂಸ್ಕೃತಿ ಹಿಂದುಳಿದಿದೆ ಅಂತಲೂ ತೋರಿಸಲೆತ್ನಿಸಿತ್ತು. ಈಗ ಪುಣ್ಯ ಕ್ಷೇತ್ರಗಳ ಶಾಂತಿ, ಪಾವಿತ್ರ್ಯಕ್ಕೆ ಭಂಗ ತರುತ್ತಿದೆ.
– ಎಲ್‌ಡಿಎಫ್ ಮತ್ತು ಯುಡಿಎಫ್ ಹಣಕ್ಕಾಗಿ ಎಂಥ ದುರಾಸೆಗಿಳಿಯಲೂ ರೆಡಿ. ಸೋಲಾರ್ ಹಗರಣ, ಡಾಲರ್ ಹಗರಣ, ಭೂಮಾಫಿಯಾ, ಅಕ್ರಮ ಚಿನ್ನ ಕಳ್ಳಸಾಗಣೆ, ಲಂಚ ಹಗರಣ, ಅಬಕಾರಿ ಹಗರಣ… ಹೀಗೆ ಈ ಪಟ್ಟಿಗೆ ಕೊನೆಯಿಲ್ಲ. ಇಬ್ಬರೂ ಸೇರಿ ಎಲ್ಲ ರಂಗಗಳನ್ನೂ ಲೂಟಿ ಮಾಡಿದ್ದಾರೆ.
– ತ್ರಿವಳಿ ತಲಾಕ್ ಬಗ್ಗೆ ಮುಸ್ಲಿಂ ಲೀಗ್‌ನ ನಿಲುವೇನು? ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳು ಸಮಾಜಕ್ಕೆ ಮಾಡಿ¨ªಾದರೂ ಏನು?
– ಎಲ್‌ಡಿಎಫ್- ಯುಡಿಎಫ್ ಕೇರಳದಲ್ಲಿ ಸರಕಾರಿ ವ್ಯವಸ್ಥೆಯನ್ನು ಪಾರ್ಶ್ವವಾಯುವಿಗೆ ತಳ್ಳಿವೆ. ರಾಜಕೀಯವಾಗಿ ಇವುಗಳಿಗೆ ಅಂತ್ಯಹಾಡಿ, ಎನ್‌ಡಿಎ ಪ್ರಗತಿಯನ್ನು ಬೆಂಬಲಿಸಲು ಇದು ಸೂಕ್ತ ಸಮಯ.
– ಸುಶಿಕ್ಷಿತರನ್ನು ರಾಜಕೀಯಕ್ಕೆ ತರುವುದೇ ಬಿಜೆಪಿಯ ಮುಖ್ಯ ಉದ್ದೇಶ. ಅದಕ್ಕಾಗಿ ಇ. ಶ್ರೀಧರನ್‌ರಂಥವರು ಬಿಜೆಪಿ ಸೇರಿದ್ದಾರೆ. ಶ್ರೀಧರನ್ ಕೇರಳ ರಾಜಕಾರಣದ ಗೇಮ್ ಚೇಂಜರ್. ದೇಶಕ್ಕೆ ಭಾರೀ ಕೊಡುಗೆ ನೀಡಿದ ಇವರು, ಸಮಾಜಸೇವೆಗಾಗಿ ಈಗ ಬಿಜೆಪಿಯನ್ನು ಆಯ್ಕೆಮಾಡಿಕೊಂಡಿದ್ದಾರೆ.
ಎಂಜಿಆರ್ ಸ್ಮರಿಸಿದ ಮೋದಿಮಧುರೈ ಅಂದರೆ ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ. ರಾಮಚಂದ್ರನ್ ನೆನಪಾಗುತ್ತಾರೆ. ಎಂಜಿಆರ್ ಸರಕಾರವನ್ನು ಉಚ್ಚಾಟಿಸಿ ಅಂದು ಕಾಂಗ್ರೆಸ್ ರಾಷ್ಟ್ರಪತಿ ಆಳ್ವಿಕೆ ಹೇರಿದ್ದಾಗ, ಮಧುರೈ ಪಶ್ಚಿಮ ಕ್ಷೇತ್ರದ ಜನ ಅವರ ಕೈಹಿಡಿದು ಗೆಲ್ಲಿಸಿ ದ್ದರು. 1977, 1980, 1984ರಲ್ಲಿ ಈ ಭಾಗದಿಂ ದಲೇ ಎಂಜಿಆರ್ ಸ್ಪರ್ಧಿಸಿ ಗೆದ್ದಿದ್ದರು. ಅವರ “ಮಧುರೈ ವೀರನ್’ ಸಿನೆಮಾವನ್ನು ಮರೆಯಲಾ ದೀತೆ ಎಂದು ಮೋದಿ ಗುಣಗಾನ ಮಾಡಿದರು. ಪಿಣರಾಯಿಗೆ ಕಾಂಗ್ರೆಸ್ ಕರೆಂಟ್ ಶಾಕ್
ವಿದ್ಯುತ್ ಖರೀದಿಯಲ್ಲಿ ಕೇರಳ ಸರಕಾರ ಹಗ ರಣ ನಡೆಸಿದೆ ಎಂದು ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಗಂಭೀರ ಆರೋಪ ಮಾಡಿದ್ದಾರೆ. ಕೇರಳ ಸರಕಾರ, ಅದಾನಿ ಕಂಪೆನಿಯಿಂದ 8,785 ಕೋಟಿ ರೂ.ಗೆ 300 ಮೆಗಾವ್ಯಾಟ್ ದೀರ್ಘಾವಧಿಯ ಪವನಶಕ್ತಿಯನ್ನು 25 ವರ್ಷ ಗಳವರೆಗೆ ಖರೀದಿಸಲು ಮುಂದಾಗಿದ್ದೇಕೆ? ಇದರಿಂದ ಅದಾನಿಗೆ 1 ಸಾವಿರ ಕೋಟಿ ರೂ. ಲಾಭವಾಗಲಿದೆ. ಈ ಒಪ್ಪಂದ ಜನರಿಗೆ ದೊಡ್ಡ ಹೊರೆ. ಬಿಜೆಪಿ ಜತೆಗೂಡಿ ಪಿಣರಾಯಿ ಈ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಟೀಕಿಸಿದ್ದಾರೆ. ಐಟಿ ದಾಳಿಗೆ ಡಿಎಂಕೆ ಕೆಂಡಾಮಂಡಲ
ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಪುತ್ರಿ ಸೆಂಥಮರಾಯಿ ಅವರ ಚೆನ್ನೆçಯ ನಿವಾಸದ ಮೇಲೆ ಐಟಿ ಅಧಿಕಾರಿಗಳು ನಡೆಸಿದ ದಾಳಿಗೆ ಡಿಎಂಕೆ ಕೆಂಡಾಮಂಡಲವಾಗಿದೆ. ಇದು ರಾಜಕೀಯ ದುರುದ್ದೇಶದಿಂದ ನಡೆದ ದಾಳಿ. ಇಂಥ ದಾಳಿಗೆ ಪಕ್ಷ ಹೆದರುವುದಿಲ್ಲ ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ದುರೈಮುರುಗನ್ ಹೇಳಿದ್ದಾರೆ.