Advertisement
ಮೋದಿ ಹೇಳಿದ್ದುನಿಮ್ಮನ್ನೆಲ್ಲ ಮುಖತಃ ಭೇಟಿಯಾಗುವ ಇಚ್ಛೆಯಿದೆ. ಟೋಕಿಯೊ ದಿಂದ ವಾಪಸ್ ಬಂದ ಮೇಲೆ ಖಂಡಿತ ನಿಮ್ಮೊಂದಿಗೆ ಸಮಯ ಕಳೆಯುತ್ತೇನೆ. ದೇಶ ನಿಮ್ಮ ಯಶಸ್ಸಿಗಾಗಿ ತುಡಿಯುತ್ತಿರುವುದನ್ನು ಕಂಡು ಸಂತಸವಾಗಿದೆ. ದೇಶದ ಭಾವನೆಗಳು ನಿಮ್ಮೊಂದಿಗಿವೆ.
ದೀಪಿಕಾ ಕುಮಾರಿ, ವಿಶ್ವ ನಂ.1 ಬಿಲ್ಗಾರ್ತಿ
ನನ್ನ ಕ್ರೀಡಾಜೀವನ ಆರಂಭ ದಿಂದಲೂ ಉತ್ತಮವಾಗಿತ್ತು. ಮೊದಲು ಬಿದಿರಿನ ಬಿಲ್ಲು ಬಳಸುತ್ತಿದ್ದೆ. ನಮ್ಮಿಂದ ಇತರರು ಬಹಳಷ್ಟನ್ನು ನಿರೀಕ್ಷಿಸುತ್ತಾರೆ. ಆದ್ದರಿಂದ ಅಭ್ಯಾಸದ ಮೇಲೆ ಬಹಳ ಗಮನ ಹರಿಸಿದ್ದೇನೆ. ಅತ್ಯುತ್ತಮ ಪ್ರದರ್ಶನ ನೀಡುವ ಭರವಸೆಯಿದೆ.
**
ಪಿ.ವಿ. ಸಿಂಧು, ಪ್ರಖ್ಯಾತ ಬ್ಯಾಡ್ಮಿಂಟನ್ ಪಟು
ಅಭ್ಯಾಸ ಚೆನ್ನಾಗಿ ಸಾಗಿದೆ. ಒಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಅಂಕಣ ಗಳಿವೆ. ಅದಕ್ಕಾಗಿ ದೊಡ್ಡ ಅಂಕಣಗಳಲ್ಲಿ ಅಭ್ಯಾಸ ನಡೆಸುತ್ತಿದ್ದೇನೆ. ಆ್ಯತ್ಲೀಟ್‌ಗಳು ಕಠಿನ ಆಹಾರ ಪದ್ಧತಿ ಪಾಲಿಸ ಬೇಕಾಗುತ್ತದೆ. ಐಸ್‌ಕ್ರೀಮ್ ತಿನ್ನುವು ದನ್ನು ನಿಗ್ರಹಿಸಿದ್ದೇನೆ.
**
ಸಾಜನ್ ಪ್ರಕಾಶ್, ಖ್ಯಾತ ಈಜುಪಟು
ನನ್ನ ತಾಯಿ ಶಾಂತಿಮೋಳ್ ನನಗೆ ಎಲ್ಲ ಒತ್ತಡಗಳನ್ನು ಮೀರಿ ಬದುಕಲು ಕಲಿಸಿದರು. ಕೊರೊನಾದಿಂದ 18 ತಿಂಗಳು ಈಜುಕೊಳ ತೆರೆದಿರಲಿಲ್ಲ. ಇದು ಬಹಳ ಹತಾಶೆಗೊಳಪಡಿಸಿತ್ತು. ಆದರೆ ಎಲ್ಲರ ಬೆಂಬಲದಿಂದ ಸಂಕಟ ಗಳನ್ನು ಮೀರಿ ನಿಲ್ಲಲು ಸಾಧ್ಯವಾಗಿದೆ.
**
ಮೇರಿ ಕೋಮ್, ವಿಶ್ವಶ್ರೇಷ್ಠ ಮಹಿಳಾ ಬಾಕ್ಸರ್
ನನಗೆ ಬಾಕ್ಸರ್‌ಗಳಲ್ಲಿ ಅಮೆರಿಕದ ದಂತಕಥೆ ಮೊಹಮ್ಮದ್ ಅಲಿ ಬಹಳ ಇಷ್ಟ. ಅವರಿಂದ ನಾನು ಬಹಳ ಪ್ರೇರಣೆ ಪಡೆದಿದ್ದೇನೆ. ನಾನು ಸ್ಪರ್ಧಿಸುವಾಗ ಹುಕ್ ಶಾಟ್‌ಗಳನ್ನು ಉತ್ತಮವಾಗಿ ಪ್ರಯೋಗಿಸುತ್ತೇನೆ. ಅದು ನನಗೆ ಇಷ್ಟದ ಹೊಡೆತ.
**
ಸಾನಿಯಾ ಮಿರ್ಜಾ, ದೇಶದ ಶ್ರೇಷ್ಠ ಟೆನಿಸ್ ಆಟಗಾರ್ತಿ
ನಾನು 25 ವರ್ಷಗಳ ಹಿಂದೆ ಟೆನಿಸ್ ಆಟ ಆರಂಭಿಸಿದಾಗ ದೇಶದಲ್ಲಿ ಅನೇಕರು ಟೆನಿಸನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ಒಲಿಂಪಿಕ್ಸ್ ನಲ್ಲಿ ಅಂಕಿತಾ ರೈನಾ ನನ್ನ ಜತೆಗಾರ್ತಿ. ಉತ್ತಮ ಫಲಿತಾಂಶ ತರುವ ಭರವಸೆಯಿದೆ.