Advertisement

ಕೋವಿಡ್ 19 ವೈರಸ್ ಪರಿಸ್ಥಿತಿ ಅವಲೋಕನ : ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಸಭೆ

01:14 PM Mar 21, 2020 | Hari Prasad |

ದೇಶದಲ್ಲಿ ಸೋಂಕಿನ ಸ್ಥಿತಿ ಪರಾಮರ್ಶೆ ನಡೆಸಲು ಪ್ರಧಾನಿ ಮೋದಿ ಶುಕ್ರವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ| ಹರ್ಷವರ್ಧನ್‌, ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿದ್ದರು. ಸೋಂಕು ಹರಡುವುದನ್ನು ತಡೆಯಲು ಬೇಕಾದ ಕ್ರಮಗಳ ಜತೆಗೆ ರಾಜ್ಯಗಳು ಹೊಂದಿರುವ ವ್ಯವಸ್ಥೆ, ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ಸೇರಿ ಹಲವಾರು ವಿಚಾರಗಳು ಚರ್ಚೆಯಾಗಿವೆ.

Advertisement

ಕರ್ನಾಟಕ ಸಿಎಂ ಯಡಿಯೂರಪ್ಪ, ಪಂಜಾಬ್‌ ಸಿಎಂ ಅಮರೀಂದರ್‌ ಸಿಂಗ್‌, ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ, ದಿಲ್ಲಿ ಸಿಎಂ ಕೇಜ್ರಿವಾಲ್‌, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ಕೇರಳ ಸಿಎಂ ಪಿಣರಾಯಿ ವಿಜಯನ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕೊರೊನಾ ಪರೀಕ್ಷೆಯ ಪ್ರಯೋಗಾಲಯಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಉದ್ಧವ್‌ ಮನವಿ ಮಾಡಿದ್ದಾರೆ.

ವೈರಲ್‌ ಬೈಟ್ಸ್‌
– ಶೇ.35ರಷ್ಟು ಸೇನಾ ಅಧಿಕಾರಿಗಳಿಗೆ ಮಾ. 23ರ ವರೆಗೆ ಮನೆಯಿಂದಲೇ ಕೆಲಸ ಮಾಡಲು ಸೇನೆ ಸೂಚನೆ.
ಸೋಂಕಿನ ಬಗ್ಗೆ ಸ್ವ ಕ್ಷೇತ್ರಗಳಲ್ಲಿ ಅರಿವು ಮೂಡಿಸಿ ಎಂದು 38 ವೈದ್ಯ ಸಂಸದರಿಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸೂಚನೆ

– ಮಹಾರಾಷ್ಟ್ರ ಮತ್ತು ಕರ್ನಾಟಕದಿಂದ ಆಗಮಿಸುವವರನ್ನೂ ತಪಾಸಣೆಗೊಳಪಡಿಸಿ ರಾಜ್ಯದೊಳಗೆ ಬಿಡಲು ಗೋವಾ ಸಿಎಂ ಸೂಚನೆ

– ಮಾ. 31ರ ವರೆಗೆ ಮಧ್ಯಪ್ರದೇಶದ ಜೈಲುಗಳಿಗೆ ಸಂದರ್ಶಕರ ಭೇಟಿ ರದ್ದು.

Advertisement

– ಕೇರಳದಲ್ಲಿ ತಪಾಸಣೆಯಲ್ಲಿದ್ದ ಐವರು ವಿದೇಶಿಯರಿಗೆ ಕೊರೊನಾ ಸೋಂಕು ದೃಢ.

– ರಾಮನವಮಿಯಂದು ನಡೆಯಬೇಕಿದ್ದ ರಾಮ್‌ ಕೋಟ್‌ ಪರಿಕ್ರಮ ರದ್ದು- ಅಯೋಧ್ಯೆಯ ಪುರೋಹಿತರ ನಿರ್ಧಾರ.
ಮಹಾರಾಷ್ಟ್ರದ ಜಲಾ°ದಲ್ಲಿ 7 ಲಕ್ಷ ರೂ. ಮೌಲ್ಯದ ಕಳಪೆ ಗುಣಮಟ್ಟದ ಮಾಸ್ಕ್ ಮತ್ತು ಕಲಬೆರಕೆ ಸ್ಯಾನಿಟೈಸರ್‌ ಪೊಲೀಸರಿಂದ ವಶ.

– 29ರಿಂದ ಆರಂಭವಾಗುವ ವಾರ್ಷಿಕ ಉತ್ಸವಕ್ಕೆ ಶಬರಿಮಲೆಗೆ ಭಕ್ತರ ಪ್ರವೇಶ ನಿರ್ಬಂಧಿಸಿದ ಕೇರಳ ಸರಕಾರ
ಸೋಂಕು ಶಂಕೆಯಿಂದ ಪ್ರತ್ಯೇಕ ನಿಗಾದಲ್ಲಿ ಇದ್ದ ಗಾಯಕ ಅನೂಪ್‌ ಜಲೋಟಗೆ ಸೋಂಕು ಇಲ್ಲ ಎಂದು ದೃಢ.

– ಮಾ. 31ರವರೆಗೆ ಮುಂಬಯಿನ ಚರ್ಚ್‌ಗಳಲ್ಲಿ ಸಭೆ, ಪ್ರಾರ್ಥನೆ, ಕೂಟಗಳು ರದ್ದು

– ಶುಕ್ರವಾರದಿಂದ ಸೋಮವಾರದವರೆಗೆ ರಾಷ್ಟ್ರವ್ಯಾಪಿ ಕರ್ಫ್ಯೂ ಹೇರಿದ ಶ್ರೀಲಂಕಾ ಸರಕಾರ.

– 15 ದಿನಗಳ ಕಾಲ ಸಂಚಾರ ರದ್ದು ಮಾಡಲು ಯೋಧರಿಗೆ ಬಿಎಸ್‌ಎಫ್ ಆದೇಶ

– ಆಸ್ಪತ್ರೆಗಳಲ್ಲಿ ಮಾಸ್ಕ್, ವೆಂಟಿಲೇಟರ್‌ಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳುವಂತೆ ಎಲ್ಲ ಆಸ್ಪತ್ರೆಗಳಿಗೂ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next