Advertisement

70 ವರ್ಷ ಆಡಳಿತ ನಡೆಸಿದವರು ಕಾಶ್ಮೀರದ ಸಮಸ್ಯೆ ಬಗೆಹರಿಸಲಿಲ್ಲ: ಪ್ರಧಾನಿ ಮೋದಿ ಟೀಕೆ

10:31 AM Oct 21, 2019 | Team Udayavani |

ಸಿರ್ಸಾ: ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಮೇಲೆ ಮತ್ತೆ ಕಿಡಿಕಾರಿದ್ದು, ನಿಮ್ಮ ತಪ್ಪು ನೀತಿಗಳಿಂದ ರಾಷ್ಟ್ರವನ್ನು ನಾಶಪಡಿಸಿದವರೊಂದಿಗೆ, ಜಮ್ಮು ಮತ್ತು ಕಾಶ್ಮೀರವನ್ನು ಟೀಕೆಯ ಗಾಳವನ್ನಾಗಿ ಮಾಡಿಕೊಂಡಿದ್ದೀರಾ ಎಂದು ಆರೋಪಿಸಿದ್ದಾರೆ.

Advertisement

ಹರ್ಯಾಣಾದ ಸಿರ್ಸಾದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಿದೆ. ಆದರೆ 70 ವರ್ಷಗಳ ಕಾಲ ಭಾರತವನ್ನಳಿದ್ದ ಕಾಂಗ್ರೆಸ್‌ ಜಮ್ಮು-ಕಾಶ್ಮೀರದ ಸಮಸ್ಯೆ ಕುರಿತು ಧೃಡ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫ‌ಲವಾಗಿದ್ದು, ಈ ಸಮಸ್ಯೆಯನ್ನಿಟ್ಟುಕೊಂಡು ಅಂದಿನಿಂದ ಟೀಕೆಯನ್ನು ಮಾಡಿಕೊಂಡು ಬಂದಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕರ್ತಾರ್‌ ಪುರ್‌ ಕಾರಿಡಾರ್‌ ರಸ್ತೆ ವಿಷಯದ ಬಗ್ಗೆಯೂ ಮೋದಿ ಮಾತನಾಡಿದ್ದು, ವಿಭಜನೆಯ ಸಮಯದಲ್ಲಿ ಕರ್ತಾಪುರ್‌ ಸಾಹಿಬ್‌ ಗುರುದ್ವಾರವನ್ನು ಭಾರತೀಯ ಭೂಪ್ರದೇಶಕ್ಕೆ ತರಲು ಕಾಂಗ್ರೆಸ್‌ ಪಕ್ಷ ವಿಫ‌ಲವಾಗಿದ್ದು, ಭಕ್ತರು ಕರ್ತಾರ್‌ಪುರ್‌ ಸಾಹಿಬ್‌ ಗುರುದ್ವಾರವನ್ನು ದುರ್ಬಿನ್‌ ಬಳಸಿ ‘ದರ್ಶನ’ ಪಡೆಯಬೇಕಾಗಿದೆ ಎಂದು ಕಾಂಗ್ರೆಸ್‌ನ ಧೋರಣೆಯನ್ನು ಕಟು ಮಾತುಗಳಲ್ಲಿ ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next