Advertisement
ಸ್ವತಂತ್ರ ಭಾರತದ ಇತಿಹಾಸದಲ್ಲೇ ಜವಾಹರ ಲಾಲ್ ನೆಹರೂ ಅನಂತರದಲ್ಲಿ ಮಂಗಳೂರು ನಗರದಲ್ಲಿ ವಾಸ್ತವ್ಯ ಹೂಡಿದ ಏಕೈಕ ಪ್ರಧಾನಿ ಎಂಬ ಹೆಗ್ಗಳಿಕೆ ಹಾಗೂ ಘಟನಾವಳಿಗೆ ಪ್ರಧಾನಿ ನರೇಂದ್ರ ಮೋದಿ ಪಾತ್ರರಾದರು. ಜತೆಗೆ, ಸರಕಾರಿ ಅಧಿಕಾರಿಗಳು ಹಾಗೂ ಅತಿಥಿಗಳು ತಂಗುವ ಸಾಮಾನ್ಯ ಐಬಿ ಬಂಗಲೆಯಲ್ಲಿ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ವಾಸ್ತವ್ಯ ಹೂಡುವ ಮೂಲಕ ಸರಳತೆ ಮೆರೆದಿರುವುದಕ್ಕೂ ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.
Related Articles
Advertisement
ವಿಮಾನ ನಿಲ್ದಾಣದ ಹೊರಗಡೆ ವಾಹನಗಳ ಪಾರ್ಕಿಂಗ್ ಜಾಗದಲ್ಲಿ ಪ್ರಧಾನಿ ಮೋದಿಗೆ ಚೆಂಡೆ-ವಾದ್ಯ, ಗೊಂಬೆ ಕುಣಿತ ಮುಂತಾದ ಜಾನಪದ ಕುಣಿತದೊಂದಿಗೆ ಅಭೂತಪೂರ್ವ ಸ್ವಾಗತ ಕೋರಲಾಯಿತು. ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಿಂದ ಸುಮಾರು 500 ಮೀಟರ್ ದೂರದಲ್ಲಿರುವ ವಾಹನಗಳ ಪಾರ್ಕಿಂಗ್ ಜಾಗದಲ್ಲಿ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಪಕ್ಷದ ಮುಖಂಡರು ಹಾಗೂ ಅಭಿಮಾನಿಗಳು ನೆರೆದಿದ್ದರು.
ಮೋದಿ ಅವರು ವಿಮಾನ ನಿಲ್ದಾಣದಿಂದ ಕಾರಿನಲ್ಲಿ ವಿಐಪಿ ಗೇಟ್ ಮೂಲಕ ಹೊರಬರುತ್ತಿದ್ದಂತೆ ನೆರೆದಿದ್ದವರೆಲ್ಲ ಜೈಕಾರ ಹಾಕಿ ಹರ್ಷ ವ್ಯಕ್ತಪಡಿಸಿದರು. ಅತ್ತ ಮೋದಿ ಅವರು ಕೂಡ ಬಿಜೆಪಿ ಕಾರ್ಯಕರ್ತರನ್ನು ನೋಡಿದ ತತ್‌ಕ್ಷಣ ಕಾರಿನಿಂದ ಇಳಿದು ಬಂದು ಅವರತ್ತ ಕೈಬೀಸಿ, ನಮಸ್ಕರಿಸಿದರು. ಅನಂತರ ಕಾರು ಹತ್ತಿಕೊಂಡು ನೇರವಾಗಿ ಸಕೀìಟ್ ಹೌಸ್‌ನತ್ತ ತೆರಳಿದರು.
ಪ್ರಧಾನಿ ಆಗಮನ ಮಧ್ಯರಾತ್ರಿ ಆಗಿದ್ದರೂ ವಿಮಾನ ನಿಲ್ದಾಣದಿಂದ ಸಕೀìಟ್ ಹೌಸ್ ವರೆಗೆ ರಸ್ತೆಯಲ್ಲಿ ಝೀರೊ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಸಕೀìಟ್ ಹೌಸ್‌ನ ಹೊಸ ಕಟ್ಟಡದಲ್ಲಿ ವಿಶೇಷವಾಗಿ ವ್ಯವಸ್ಥೆಗೊಳಿಸಲಾಗಿದ್ದ ಕೊಠಡಿಯಲ್ಲಿ ವಾಸ್ತವ್ಯ ಹೂಡಿದರು. ನರೇಂದ್ರ ಮೋದಿಯವರ ಸಾಗುವ ಮಾರ್ಗದುದ್ದಕ್ಕೂ ಡಿಸಿಪಿ ಹಾಗೂ ಎಸಿಪಿ ದರ್ಜೆ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಏರ್‌ಪೋರ್ಟ್ ರಸ್ತೆ ಇಕ್ಕೆಲಗಳಲ್ಲಿಯೂ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಮಧ್ಯರಾತ್ರಿ ಸಕೀìಟ್ ಹೌಸ್ಗೆಪ್ರಧಾನಿ ಮೋದಿ ಅವರು ನಗರದ ಕದ್ರಿಹಿಲ್ಸ್‌ನಲ್ಲಿರುವ ಸಕೀìಟ್ ಹೌಸ್‌ಗೆ ಆಗಮಿಸುವ ವೇಳೆಗೆ ಮಧ್ಯರಾತ್ರಿ 12.30 ಕಳೆದಿತ್ತು. ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗಿನಿಂದಲೇ ಖುದ್ದು ಪ್ರಧಾನಿ ಮೋದಿ ಅವರು ಕೂಡ ಏನಾಗಬಹುದು ಎಂಬ ಕುತೂಹಲ ಹಾಗೂ ಒತ್ತಡಕ್ಕೆ ಒಳಗಾಗಿದ್ದರು. ಈ ನಡುವೆ ಸಂಸತ್‌ನ ಅಧಿವೇಶನದಲ್ಲಿಯೂ ಭಾಗವಹಿಸಿದ್ದ ಅವರು ಎರಡೂ ರಾಜ್ಯಗಳ ಫಲಿತಾಂಶ ಹೊರಬಿದ್ದ ಅನಂತರ ದಿಲ್ಲಿಯಲ್ಲೇ ವಿಜಯೋತ್ಸವವನ್ನೂ ಆಚರಿಸಿದ್ದರು. ಆ ಬಳಿಕ ಎರಡೂವರೆಗೆ ಗಂಟೆಗಳ ಪ್ರಯಾಣವನ್ನು ಕೈಗೊಂಡ ಹಿನ್ನೆಲೆಯಲ್ಲಿ ಸಕೀìಟ್ ಹೌಸ್‌ಗೆ ಆಗಮಿಸುವ ವೇಳೆಗೆ ಆಯಾಸಗೊಂಡಿದ್ದು, ನೇರವಾಗಿ ತಮ್ಮ ಕೊಠಡಿಗೆ ತೆರಳಿ, ವಿಶ್ರಾಂತಿ ಪಡೆದುಕೊಂಡರು ಎಂದು ಮೂಲಗಳು ತಿಳಿಸಿವೆ. ಒಖೀ ಚಂಡಮಾರುತದಿಂದ ಸಂಭವಿಸಿದ ಹಾನಿಯನ್ನು ವೀಕ್ಷಿಸಲು ಲಕ್ಷದ್ವೀಪಕ್ಕೆ ಮಂಗಳವಾರ ಪ್ರಧಾನಿ ತೆರಳುತ್ತಾರೆ. ಮಂಗಳವಾರ ಬೆಳಗ್ಗೆ ಸಕೀìಟ್ ಹೌಸ್‌ನಲ್ಲಿ ಬೆಳಗ್ಗಿನ ಉಪಾಹಾರ ಸೇವಿಸಿ 7.30ರ ಸುಮಾರಿಗೆ ರಸ್ತೆ ಮಾರ್ಗವಾಗಿ ವಾಪಸ್ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ವಿಶೇಷ ವಿಮಾನದ ಮೂಲಕ ಲಕ್ಷದ್ವೀಪಕ್ಕೆ ತೆರಳುತ್ತಿದ್ದಾರೆ. ಅಲ್ಲಿ ಒಖೀ ಚಂಡಮಾರುತ ಹಾನಿಯನ್ನು ವೀಕ್ಷಣೆ ಮಾಡಿ ಬಳಿಕ ತಿರುವನಂತಪುರ ಹಾಗೂ ತಮಿಳುನಾಡಿಗೂ ತೆರಳುವ ಕಾರ್ಯಕ್ರಮವಿದೆ. -ಚುನಾವಣಾ ಲೆಕ್ಕಾಚಾರ
ಪ್ರಧಾನಿ ನರೇಂದ್ರ ಮೋದಿಯವರು ಕೇರಳದ ಕೊಚ್ಚಿ ವಿಮಾನ ನಿಲ್ದಾಣದ ಮೂಲಕ ಲಕ್ಷದ್ವೀಪಕ್ಕೆ ತೆರಳಲು ಅವಕಾಶವಿದ್ದು, ಮೂರು ದಿನಗಳ ಹಿಂದೆಯಷ್ಟೇ ಮೋದಿ ಅವರು ಕೊಚ್ಚಿ ಅಥವಾ ತಿರುವನಂತಪುರಕ್ಕೆ ಬಂದು ಅಲ್ಲಿಂದ ಲಕ್ಷದ್ವೀಪಕ್ಕೆ ತೆರಳುತ್ತಾರೆ ಎಂದು ಹೇಳಲಾಗಿತ್ತು. ಆದರೆ ಲಕ್ಷದ್ವೀಪಕ್ಕೆ ಭೇಟಿಗೆ ಕೇವಲ ಮೂರು ದಿನ ಇರಬೇಕಾದರೆ ದಿಢೀರನೇ ಕೊಚ್ಚಿ ಬದಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ರಾತ್ರಿ ನಗರದಲ್ಲೇ ವಾಸ್ತವ್ಯ ಹೂಡಿ ಅಲ್ಲಿಂದ ಲಕ್ಷದ್ವೀಪಕ್ಕೆ ತೆರಳುವುದೆಂದು ತೀರ್ಮಾನಿಸಲಾಗಿತ್ತು. ಹೀಗಾಗಿ ಮೋದಿ ಅವರು ಮಂಗಳೂರಿಗೆ ಆಗಮಿಸುವುದಕ್ಕೆ ಬಹಳ ತರಾತುರಿಯಲ್ಲೇ ಭದ್ರತೆ ಸೇರಿದಂತೆ ಎಲ್ಲ ರೀತಿಯ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಯಿತು. ಮೋದಿ ಅವರು ದಿಢೀರನೇ ಮಂಗಳೂರಿನಲ್ಲಿ ವಾಸ್ತವ್ಯ ಹೂಡುತ್ತಾರೆ ಎಂದಾಗ ಬಹಳಷ್ಟು ಮಂದಿಗೆ ಆಶ್ಚರ್ಯ ಕೂಡ ಆಗಿತ್ತು. ಲಕ್ಷದ್ವೀಪದಿಂದ ಮುಂದಕ್ಕೆ ಅವರ ಭೇಟಿ ಇರುವುದು ಕೇರಳದ ತಿರುನಂತಪುರದಲ್ಲಿ. ಆದರೆ ನರೇಂದ್ರ ಮೋದಿ ರಾತ್ರಿ ವಾಸ್ತವ್ಯಕ್ಕೆ ಮಂಗಳೂರನ್ನೇ ಆಯ್ಕೆ ಮಾಡಿರುವುದರ ಹಿಂದೆ ರಾಜಕೀಯ ತಂತ್ರವೂ ಅಡಗಿದೆ. ಕೆಲವೇ ತಿಂಗಳಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಧಾನಿಯವರ ಈ ಭೇಟಿ ಕರಾವಳಿ ಭಾಗದ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸುತ್ತದೆ. ಮಾತ್ರವಲ್ಲದೆ ನರೇಂದ್ರ ಮೋದಿ ಹವಾ ಸೃಷ್ಟಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಟ್ರಾನ್ಸಿಟ್ ವಿಸಿಟ್
ಪ್ರಧಾನಿ ನರೇಂದ್ರ ಮೋದಿಯವರ ಯಾವುದೇ ಕಾರ್ಯಕ್ರಮ ನಗರದಲ್ಲಿ ನಿಗದಿಯಾಗಿಲ್ಲ. ಅವರು ಲಕ್ಷದ್ವೀಪಕ್ಕೆ ತೆರಳುವ ಹಾದಿಯಲ್ಲಿ ಮಂಗಳೂರಿನಲ್ಲಿ ತಂಗಿ ಪ್ರವಾಸ ಮುಂದುವರಿಸುತ್ತಾರೆ. ಅತಿಗಣ್ಯರ ಈ ರೀತಿಯ ಪ್ರವಾಸಕ್ಕೆ “ಟ್ರಾನ್ಸಿಟ್ ವಿಸಿಟ್’ ಎಂದು ಹೇಳಲಾಗುತ್ತದೆ.