Advertisement
ಈಗಿರುವ ಲಾಕ್ ಡೌನ್ ಪರಿಸ್ಥಿತಿಯನ್ನು ಮೇ 3ರವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ. ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನಡೆಸಿದ ಮಾತುಕತೆಯಲ್ಲಿ ಹೆಚ್ಚಿನವರು ಲಾಕ್ ಡೌನ್ ಮುಂದುವರಿಸಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಮತ್ತು ಬಹಳಷ್ಟು ಜನರ ಅಪೇಕ್ಷೆಯೂ ಇದೇ ಆಗಿತ್ತು. ಹಾಗಾಗಿ ಇದೆಲ್ಲವನ್ನೂ ಪರಿಗಣಿಸಿ ಲಾಕ್ ಡೌನ್ ಪರಿಸ್ಥಿತಿಯನ್ನು ಮುಂದುವರಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.
– ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ಈ ವೈರಸ್ ವಿರುದ್ಧ ದೇಶದ ಹೋರಾಟದಲ್ಲಿ ನೀವು ಕೈ ಜೋಡಿಸಿದ್ದೀರಿ.
Related Articles
Advertisement
– ಕೋವಿಡ್ ವೈರಸ್ ಭಾರತಕ್ಕೆ ಕಾಲಿಡುವ ಮುನ್ನವೇ ನಾವು ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದ್ದೆವು.
– ಈ ಮಹಾಮಾರಿಯ ವಿಷಯದಲ್ಲಿ ನಾವು ಬೇರೆ ದೇಶಗಳೊಂದಿಗೆ ಹೋಲಿಸಿಕೊಳ್ಳುವುದ ಸರಿಯಲ್ಲವಾದರೂ ಇಂದು ನಮ್ಮಲ್ಲಿ ಹೋಲಿಸಿದರೆ ಆ ದೇಶಗಳು ಕೋವಿಡ್ ವೈರಸ್ ಕಾಟಕ್ಕೆ ಬಹಳಷ್ಟು ನಲುಗಿ ಹೋಗಿವೆ.
– ನಮ್ಮಲ್ಲಿ ಈ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ನಕಾಲಿ ನಿರ್ಧಾರಗಳನ್ನು ಕೈಗೊಂಡ ಕಾರಣ ದೇಶದಲ್ಲಿ ಈ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ನಿಯಂತ್ರಣದಲ್ಲಿದೆ ಎಂದೇ ಹೇಳಬಹುದು.
– ಸೋಷಿಯಲ್ ಡಿಸ್ಟೆನ್ಸಿಂಗ್ ನಮ್ಮಲ್ಲಿ ಪರಿಣಾಮಕಾರಿ ಫಲಿತಾಂಶವನ್ನು ನೀಡಿದೆ. ಆರ್ಥಿಕ ದೃಷ್ಟಿಯಲ್ಲಿ ನೋಡಿದರೆ ಇದು ನಮಗೆ ಬಹಳ ದುಬಾರಿಯಾದದ್ದು ನಿಜವಾದರೂ, ದೇಶವಾಸಿಗಳ ಪ್ರಾಣದ ಮುಂದೆ ಇದೆಲ್ಲಾ ಲೆಕ್ಕಕ್ಕೇ ಬರುವುದಿಲ್ಲ.
– ಲಾಕ್ ಡೌನ್ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರಕಾರಗಳ ಪಾತ್ರವೂ ದೊಡ್ಡದು.
– ದೇಶದಲ್ಲಿ ಇನ್ನಷ್ಟು ಹೊಸ ವೈರಸ್ ಹಾಟ್ ಸ್ಪಾಟ್ ಗಳು ಕಾಣಿಸಿಕೊಳ್ಳದಂತೆ ನೋಡಿಕೊಳ್ಳುವುದು ನಮ್ಮ ಮುಂದಿರುವ ಸವಾಲು.
– ಈಗಿರುವ ಲಾಕ್ ಡೌನ್ ಪರಿಸ್ಥಿತಿಯನ್ನು ಮೇ 3ರವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ. ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನಡೆಸಿದ ಮಾತುಕತೆಯಲ್ಲಿ ಹೆಚ್ಚಿನವರು ಲಾಕ್ ಡೌನ್ ಮುಂದುವರಿಸಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಮತ್ತು ಬಹಳಷ್ಟು ಜನರ ಅಪೇಕ್ಷೆಯೂ ಇದೇ ಆಗಿತ್ತು. ಹಾಗಾಗಿ ಇದೆಲ್ಲವನ್ನೂ ಪರಿಗಣಿಸಿ ಲಾಕ್ ಡೌನ್ ಪರಿಸ್ಥಿತಿಯನ್ನು ಮುಂದುವರಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.
– ಎಪ್ರಿಲ್ 20ರವರೆಗೆ ಲಾಕ್ ಡೌನ್ ಕಠಿಣ ಅನುಷ್ಠಾನಗೊಳಿಸಲಾಗುತ್ತದೆ. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಆ ಬಳಿಕ ಕೆಲವೊಂದು ಅವಶ್ಯಕ ಸೇವೆಗಳಿಗೆ ಅನುಮತಿ ನೀಡುವ ಕುರಿತಾಗಿ ಯೋಚಿಸಲಾಗುವುದು.
– ಎಪ್ರಿಲ್ 20ರ ಬಳಿಕ ಲಾಕ್ ಡೌನ್ ಭಾಗಶಃ ತೆರವುಗೊಳಿಸುವ ಸ್ಥಳಗಳಲ್ಲಿ ಯಾವುದೇ ರೀತಿಯ ನಿಯಮ ಉಲ್ಲಂಘನೆಯಾಗುವಂತಿಲ್ಲ. ಈ ಕುರಿತಾಗಿ ವಿಸ್ತೃತ ಮಾರ್ಗಸೂಚಿಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು.
– ದೇಶದಲ್ಲಿ ಅವಶ್ಯಕ ಸಾಮಾಗ್ರಿಗಳು ಹಾಗೂ ಔಷಧಿಗಳ ದಾಸ್ತಾನು ಸಾಕಷ್ಟಿದೆ.
– ನಿಮ್ಮ ಕೈಲಾದಷ್ಟು ಬಡ ವರ್ಗದ ಜನರಿಗೆ ಸಹಾಯ ಮಾಡಿ.
– ನಿಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಕುರಿತಾಗಿಯೂ ಗಮನಹರಿಸಿ.
– ಆಯುಷ್ ಇಲಾಖೆ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.
– ನಮ್ಮಲ್ಲಿ ಆರೋಗ್ಯ ಪರಿಕರಗಳ ಕೊರತೆ ಇರಬಹುದು ಆದರೆ ನಮ್ಮ ದೇಶದ ಯುವ ವಿಜ್ಞಾನಿಗಳು, ವೈದ್ಯರು ಈ ಸಂದರ್ಭದಲ್ಲಿ ವೈರಸ್ ವಿರುದ್ಧದ ಯುದ್ದದಲ್ಲಿ ಕೈಜೋಡಿಸುವಂತೆ ಅವರಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ.