Advertisement

ಫೆ.1ರ ಆಯವ್ಯಯ ಆತ್ಮನಿರ್ಭರ ಪ್ಯಾಕೇಜ್‌ನ ಭಾಗ: ಪ್ರಧಾನಿ ಮೋದಿ

10:33 AM Jan 30, 2021 | Team Udayavani |

ನವದೆಹಲಿ : 2020ರ ಲಾಕ್‌ಡೌನ್‌ ವೇಳೆ ವಿತ್ತ ಸಚಿವರು ಪ್ಯಾಕೇಜ್‌ ಮಾದರಿಯ 4-5 ಮಿನಿ ಬಜೆಟ್‌ಗಳನ್ನು ನೀಡಿದ್ದಾರೆ.

Advertisement

ಇವುಗಳ ಮುಂದುವರಿದ ಭಾಗವಾಗಿ ಫೆ.1ರ ಬಜೆಟ್‌ ಇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿ­ದ್ದಾರೆ.

ಅಧಿವೇಶನಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ, “ದಶಕದ ಮೊದಲ ಅಧಿವೇಶನ ಇದಾಗಿದೆ. ಭಾರತವನ್ನು ಉಜ್ವಲವಾಗಿಸುವಲ್ಲಿ ಈ ದಶಕದ ಪಾತ್ರ ಅತಿಮುಖ್ಯ. ರಾಷ್ಟ್ರದ ಜನತೆಯ ಹಿತದೃಷ್ಟಿಗಾಗಿ ಸಂಸದರು ಎಲ್ಲ ಸಂಗತಿಗಳು, ಸಮಸ್ಯೆಗಳ ಕುರಿತು ಚರ್ಚಿಸಬೇಕು. ಜನರ ಆಶೋತ್ತರ ಈಡೇರಿಸುವಲ್ಲಿ ಸಂಸದರು ಯಾವುದೇ ಹಿಂಜರಿಕೆ ಇಟ್ಟುಕೊಳ್ಳಬಾರದು’ ಎಂದು ಕಿವಿಮಾತು ಹೇಳಿದರು.

“ಸಂಸತ್ತಿನಲ್ಲಿ ಯಾವತ್ತೂ ಚರ್ಚೆ, ವಿಭಿನ್ನ ನೋಟಗಳ ಪ್ರಸ್ತುತಿ ಇರಬೇಕು. ಈ ಅಧಿವೇಶನವನ್ನು ಹೆಚ್ಚು ಯಶಸ್ವಿಗೊಳಿಸಲು ಎಲ್ಲ ಸಂಸದರೂ ಶ್ರಮಿಸುತ್ತಾರೆಂದು ಸಂಪೂರ್ಣವಾಗಿ ನಂಬಿದ್ದೇನೆ. ನಾನು ಉಭಯ ಸದನಗಳ ಎಲ್ಲ ಸಂಸದರ ಜತೆಗಿದ್ದು, ರಾಷ್ಟ್ರಪತಿ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯಲು ಸ್ಪಂದಿಸುತ್ತೇನೆ’ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next