Advertisement

ಇಂದು ಕರಾವಳಿಗೆ ಮೋದಿ… ಹೆಚ್ಚಲಿದೆ ಹುರುಪು

01:05 AM May 03, 2023 | Team Udayavani |

ಮಂಗಳೂರು/ಮೂಲ್ಕಿ: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಚಾರವನ್ನು ನಿರೀಕ್ಷಿಸುತ್ತಿದ್ದು, ಮೇ 3ರ ಮೋದಿ ಸಮಾವೇಶಕ್ಕೆ ಮೂಲ್ಕಿ ಪೂರ್ಣ ಸಜ್ಜುಗೊಂಡಿದೆ.

Advertisement

ಕಾರ್ನಾಡಿನ ಗುಂಡಾಲು ಪ್ರದೇಶದಲ್ಲಿ ಬೆಳಗ್ಗೆ 10.30ಕ್ಕೆ ಸಮಾವೇಶ ನಡೆಯಲಿದ್ದು, ದಿಲ್ಲಿಯಿಂದ ವಿಶೇಷ ವಿಮಾನದಲ್ಲಿ ಬಜಪೆಗೆ ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಸಮಾವೇಶ ಸ್ಥಳಕ್ಕೆ ಆಗಮಿಸುವರು.

ಕರಾವಳಿಯಲ್ಲಿಯೂ ದಾಖಲೆ ಸಂಖ್ಯೆಯ ಸ್ಥಾನಗಳಲ್ಲಿ ಜಯಗಳಿಸಬೇಕೆಂಬ ಬಿಜೆಪಿ ಹೋರಾಟಕ್ಕೆ ಮೋದಿ ಆಗಮನ ಹೊಸ ಶಕ್ತಿ ನೀಡುವ ಸಾಧ್ಯತೆಯಿದೆ. ಕರಾವಳಿಗೆ ಪ್ರತೀ ಬಾರಿ ಮೋದಿ ಆಗಮಿಸಿದಾಗಲೂ ದಾಖಲೆ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸುತ್ತಿದ್ದಾರೆ. ಈ ಬಾರಿಯೂ 2.5ರಿಂದ 3 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಭಾಗವಹಿಸುವವರಿಗೆ ನೀರು, ಮಜ್ಜಿಗೆಯ ವ್ಯವಸ್ಥೆ ಮಾಡ ಲಾಗಿದೆ ಎಂದು ಬಿಜೆಪಿ ಪ್ರಮುಖರು ತಿಳಿಸಿದ್ದಾರೆ.

ಎಸ್‌ಪಿಜಿಯಿಂದ ನಿಗಾ
ಸಮಾವೇಶ ನಡೆಯುವ ಮೈದಾನ, ಹೆಲಿಪ್ಯಾಡ್‌ ಎಲ್ಲವನ್ನೂ ಎಸ್‌ಪಿಜಿ ಯವರು ತಮ್ಮ ಅಧೀನಕ್ಕೆ ಪಡೆದಿದ್ದು ಪ್ರಧಾನಿ ಆಗಮನ ಸೇರಿದಂತೆ ಭದ್ರತಾ ಲೋಪವಾಗ ದಂತೆ ಕಟ್ಟುನಿಟ್ಟಿನ ನಿಗಾ ವಹಿಸಿದೆ. ಪೊಲೀಸರ ತಂಡ ಮೂಲ್ಕಿಯ ಉದ್ದಕ್ಕೂ ಬೀಡುಬಿಟ್ಟಿದೆ. ಹೆಲಿಪ್ಯಾಡ್‌ನಿಂದ ಮೋದಿಯವರು ಕಾರಿನಲ್ಲಿ ಬರಲಿದ್ದು, ಹೆದ್ದಾರಿಯ ಉದ್ದಕ್ಕೂ ತಡೆಬೇಲಿ ನಿರ್ಮಿಸಲಾಗಿದೆ.

ನಳಿನ್‌, ಶೋಭಾ ಉಪಸ್ಥಿತಿ
ಮೋದಿಯವರು ಅವಿಭಜಿತ ಜಿಲ್ಲೆಯ ಬಿಜೆಪಿಯ ಎಲ್ಲ 13 ಅಭ್ಯರ್ಥಿ ಗಳ ಪರವಾಗಿ ಮತಯಾಚನೆ ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿಗಳ ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉಭಯ ಜಿಲ್ಲೆಯ ಬಿಜೆಪಿ ಅಧ್ಯಕ್ಷರು ಉಪಸ್ಥಿತರಿರುವರು.

Advertisement

ಯಶಸ್ಸಿಗೆ ಗಣಪತಿ ಹೋಮ
ಮೋದಿಯವರ ಪ್ರಚಾರ ರ್ಯಾಲಿ ನಿರ್ವಿಘ್ನವಾಗಿ, ಯಶಸ್ವಿಯಾಗಿ ಸಂಪನ್ನಗೊಳ್ಳುವಂತೆ ಪ್ರಾರ್ಥಿಸಿ ಸಮಾವೇಶ ಸ್ಥಳದಲ್ಲಿ ಮಂಗಳವಾರ ಬೆಳಗ್ಗೆ ಗಣಪತಿ ಹೋಮ ನಡೆಸ ಲಾಯಿತು. ಮೋದಿ ಅವರು ಭಾಷಣ ಮಾಡುವ ವೇದಿಕೆಯನ್ನು ಪಶ್ಚಿಮಕ್ಕೆ ಮುಖ ಮಾಡಿ ನಿರ್ಮಿಸಲಾಗಿದೆ.

ಹೆಚ್ಚಲಿದೆ ಹುರುಪು
ಪ್ರಧಾನಿ ನರೇಂದ್ರ ಮೋದಿ ಅವರ ಕರಾವಳಿ ಭೇಟಿ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಸಂಚಲನ ಮೂಡಿಸಿದೆ. ಬಿಜೆಪಿಯಿಂದ ಇಲ್ಲಿಯವರೆಗೆ ನಡೆದ ಪ್ರಚಾರಕ್ಕಿಂತಲೂ ಇನ್ನು ಮುಂದೆ ನಡೆಯುವ ಪ್ರಚಾರದ ಹುರುಪಿಗೂ ಮಹತ್ವದ ಬದಲಾವಣೆ ನಿರೀಕ್ಷಿಸಲಾಗಿದೆ ಎಂದು ಬಿಜೆಪಿ ಪ್ರಮುಖರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next