Advertisement

ಅಧಿಕಾರದಲ್ಲಿ ಇರುವ ಪಕ್ಷಗಳ ನಿರ್ಧಾರ ಪ್ರಶ್ನಿಸಿ: ಪ್ರಧಾನಿ Narendra Modi

10:56 PM Apr 21, 2023 | Team Udayavani |

ನವದೆಹಲಿ: “ಆಡಳಿತ ನಡೆಸುತ್ತಿರುವ ರಾಜಕೀಯ ಪಕ್ಷದ ನೀತಿಗಳನ್ನು ಪ್ರಶ್ನಿಸುವ ಛಾತಿಯನ್ನು ಬೆಳೆಸಿಕೊಳ್ಳಬೇಕು. ತೆರಿಗೆದಾರರ ಹಣವನ್ನು ಪಕ್ಷದ ಹಿತಾಸಕ್ತಿಗಾಗಿಯೇ ಅಥವಾ ದೇಶದ ಹಿತಾಸಕ್ತಿಗಾಗಿ ಬಳಸಲಾಗುತ್ತಿದೆಯೇ ಎಂದು ಪ್ರಶ್ನಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ನವದೆಹಲಿಯಲ್ಲಿ ಶುಕ್ರವಾರ ನಡೆದ 16ನೇ “ನಾಗರಿಕ ಸೇವಾ ದಿನ’ದಲ್ಲಿ ಐಎಎಸ್‌, ಐಪಿಎಸ್‌ ಸೇರಿದಂತೆ ನಾಗರಿಕ ಸೇವಾ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಮಾತನಾಡಿದರು.

“ನಿಮ್ಮ ಪ್ರತಿ ನಿರ್ಣಯವು ದೇಶದ ಹಿತದೃಷ್ಟಿಯಿಂದ ಕೂಡಿರಬೇಕು. ಜಾಗತಿಕ ಸಂಸ್ಥೆಗಳು ಮತ್ತು ತಜ್ಞರು “ಈಗ ಭಾರತದ ಸಮಯ ಬಂದಿದೆ’ ಎಂದು ಹೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಅಧಿಕಾರಿಗಳು ಒಂದು ನಿಮಿಷವನ್ನೂ ವ್ಯರ್ಥ ಮಾಡಬಾರದು. ಒಬ್ಬ ವ್ಯಕ್ತಿ ಅಥವಾ ಸಂಸ್ಥೆಗಾಗಿ ನೀವು ನಿರ್ಧಾರ ತಾಳಬೇಕಾಗಬಹುದು. ಆದರೆ ನನ್ನ ನಿರ್ಣಯದಿಂದ ದೇಶಕ್ಕೆ ಏನು ಪ್ರಯೋಜನ ಆಗುತ್ತದೆ ಎಂದು ನಿಮ್ಮನ್ನು ನೀವು ಕೇಳಿಕೊಳ್ಳಬೇಕು,’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next