Advertisement

ಶ್ರವಣಬೆಳಗೊಳಕ್ಕೆ ಶೀಘ್ರವೇ ನಮೋ ಭೇಟಿ : ಪ್ರಧಾನಿ ಮೋದಿ ಆಗಮನದಿಂದ ಹೊಸ ಸಂಚಲನ

03:20 PM Mar 27, 2022 | Team Udayavani |

ಚನ್ನರಾಯಪಟ್ಟಣ: ಇತಿಹಾಸ ಪ್ರಸಿದ್ಧ ಶ್ರವಣಬೆಳಗೊಳಕ್ಕೆ ಶೀಘ್ರವೇ ದೇಶದ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿಲಿದ್ದಾರೆ ಎಂದು ಜಿಲ್ಲಾ ಮಂತ್ರಿ ಕೆ.ಗೋಪಾಲಯ್ಯ ತಿಳಿಸಿದರು. ತಾಲೂಕಿನ ಶ್ರವಣಬೆಳಗೊಳ ಹೋಬಳಿ ಹೊಸಹಳ್ಳಿ ಸಮೀಪದಲ್ಲಿ ರಾಜ್ಯ ಸರ್ಕಾರ ನಿರ್ಮಾಣ ಮಾಡುತ್ತಿರುವ ಪ್ರಾಕೃತ ವಿಶ್ವ ವಿದ್ಯಾಲಯದ ನೂತನ ಕಟ್ಟಡಗಳನ್ನು ಜೈನಮಠದ ಬಾಹುಬಲಿ ಪ್ರಾಕೃತ ವಿದ್ಯಾಪೀಠ ಹಸ್ತಾಂತರ ಮಾಡಿ ಅವರು ಮಾತನಾಡಿದರು.

Advertisement

ಶ್ರವಣಬೆಳಗೊಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಿರುವುದಲ್ಲದೆ ಕೇಂದ್ರ ಸರ್ಕಾರವೂ ಸಾಕಷ್ಟು ಅನುದಾನ ನೀಡಲು ಮುಂದಾಗುತ್ತಿದೆ. ಹಾಗಾಗಿ ಪ್ರಧಾನಿ ಮೋದಿ ಅವರನ್ನು ಶ್ರೀಕ್ಷೇತ್ರಕ್ಕೆ ಕರೆಸಲು ಪತ್ರ
ವ್ಯವಹಾರ ಮಾಡಲಾಗಿದೆ ಎಂದರು.

ಪ್ರಾಕೃತ ವಿವಿ ಕಟ್ಟಡ ಶೀಘ್ರವೇ ಪೂರ್ಣ: ಹಾಸನ ಜಿಲ್ಲಾ ಮಂತ್ರಿಯನ್ನಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ. ನನಗೆ ಜಿಲ್ಲಾ ಅಭಿವೃದ್ಧಿ ಜೊತೆಯಲ್ಲಿ ಶ್ರೀಕ್ಷೇತ್ರ ಶ್ರವಣಬೆಳಗೊಳದ ಅಭಿವೃದ್ಧಿಯೂ ಮುಖ್ಯವಾಗಿದೆ. ಶೀಘ್ರದಲ್ಲೇ ಪ್ರಾಕೃತ ವಿವಿ ಕಟ್ಟಡ ಪೂರ್ಣಗೊಳಿಸಿ ಬೊಮ್ಮಾಯಿ ಮೂಲಕ ಉದ್ಘಾಟನೆ ಮಾಡಿಸಲಾಗುವುದು. ಶ್ರೀಗಳ ಬಹುದಿನದ ಕನಸು ನನಸು ಮಾಡುವುದು ನನ್ನ ಉದ್ದೇಶವಾಗಿದೆ ಎಂದರು.

ಕೊರೊನಾ ವೇಳೆ ಸೇವಾ ಕಾರ್ಯ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಾಲಕೃಷ್ಣ ಮಾತನಾಡಿ, ಶ್ರವಣಬೆಳಗೊಳ ದೇಶ-ವಿದೇಶಗಳಲ್ಲಿ ಪ್ರಜ್ವಲಿಸುತ್ತಿರುವುದು ಶ್ರೀಗಳಿಂದ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಶ್ರೀಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಇನ್ನು ಸರ್ಕಾರಗಳು 440ಅತಿಥಿ ಗೃಹ ನಿರ್ಮಾಣ ಮಾಡಿದೆ. ಶ್ರೀಮಠ ಉತ್ತಮವಾಗಿ ನಿರ್ವಹಣೆ ಮಾಡುತ್ತಿದೆ. ಕೊರೊನಾ ವೇಳೆ ಮಠದ
ಸಹಕಾರದಿಂದ ಸಾಕಷ್ಟು ಲಾಭವಾಗಿದೆ ಎಂದರು.

ಜೈನ ಮಠದ ಸೇವೆ ಸ್ಮರಣೆ: ಕೋವಿಡ್‌ ಕೇರ್‌ ಸೆಂಟರ್‌ ತೆರೆಯಲು ಜೈನ ಮಠದಿಂದ ಸಾಕಷ್ಟು ಸಹಕಾರ ನೀಡಿದ್ದರ ಫ‌ಲವಾಗಿ, ಸಾಕಷ್ಟು ಸಾವುಗಳು ಆಗದಂತೆ ತಡೆಯಲಾಗಿದೆ. ಒಂದು ವೇಳೆ ಚನ್ನರಾಯಟಪ್ಟಣ ತಾಲೂಕಿನಲ್ಲಿ ಜೈನ ಮಠ ಇಲ್ಲದೆ ಇದ್ದರೆ ಕೊರೊನಾಗೆ ಸಾಕಷ್ಟು ಮಂದಿ ಬಲಿಯಾಗುತ್ತಿದ್ದರು. ಶ್ರೀಗಳ ಸಹಕಾರದಿಂದ ಕ್ಷೇತ್ರದಲ್ಲಿ ಕೊರೊನಾ ವೇಳೆ ಕೆಲಸ ಮಾಡಲು ಅಧಿಕಾರಿ ಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಉತ್ಸಾಹ ಬಂದಿದೆ ಎಂದರು.

Advertisement

ಶಾಸಕರ ಕಾರ್ಯಕ್ಕೆ ಶ್ಲಾಘನೆ : ಜಿಲ್ಲಾ ಮಂತ್ರಿ ಕೆ. ಗೋಪಾಲಯ್ಯ ಅವರು ಸೌಮ್ಯ ಸ್ವಭಾವದವರಾಗಿರುವುದರಿಂದ ಹಾಸನ ಹಾಗೂ ಮಂಡ್ಯ ಎರಡು ಜಿಲ್ಲೆಯ ಜವಾಬ್ದಾರಿಯನ್ನು ಸಿಎಂ ಬೊಮ್ಮಾಯಿ ಅವರೇ
ವಹಿಸಿದ್ದಾರೆ. ಇವರ ಸಹಕಾರದಿಂದ ಜಿಲ್ಲಾ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಹಕಾರವಾಗುತ್ತಿದೆ ಶಾಸಕ ಬಾಲಕೃಷ್ಣ ಶ್ಲಾ ಸಿದರು.

ರಿಂಗ್‌ ರಸ್ತೆಗೆ ಬೇಡಿಕೆ: ಶ್ರವಣಬೆಳಗೊಳಕ್ಕೆ ರಿಂಗ್‌ ರಸ್ತೆ ಅಗತ್ಯವಿದೆ. ಸರ್ಕಾರದ ಗಮನಕ್ಕೆ ತಂದು ರಸ್ತೆ ನಿರ್ಮಾಣ ಮಾಡಿದರೆ, ಶ್ರವಣಬೆಳಗೊಳ ವೇಗವಾಗಿ ಅಭಿವೃದ್ಧಿ ಹೊಂದಲಿದೆ. ಯುಜಿಡಿಗೆ ಅಗತ್ಯ
ಇರುವುದರಿಂದ ದಯಮಾಡಿ ಕೊಳಚೆ ಮಂಡಳಿ ಮೂಲಕ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಶ್ರವಣಬೆಳಗೊಳ ಗ್ರಾಪಂ ಅಧ್ಯಕ್ಷೆ ಅನುರಾದ, ಸದಸ್ಯೆ ಸಂಜಿತಾ, ಜುಟ್ಟನಹಳ್ಳಿ ಗ್ರಾಪಂ ಅಧ್ಯಕ್ಷ ನಿಖೀಲ್‌, ಜಿಪಂ ಸಿಇಒ ಕಾಂತರಾಜು, ಎಸಿ ಜಗದೀಶ್‌ ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಮಂಜುನಾಥ್‌, ಬಾಹುಬಲಿ ವಿದ್ಯಾಪೀಠದ ಕಾರ್ಯಾಧ್ಯಕ್ಷ ವಿದ್ಯಾಧರ್‌, ಸದಸ್ಯ ಅಶೋಕ್‌ ಕುಮಾರ್‌, ದಿಗಂಬರ ಜೈನ ಸಮಾಜದ ಅಧ್ಯಕ್ಷ ಪದ್ಮಕುಮಾರ್‌, ಎಸ್‌ಡಿಜೆಎಂಐಎಂಸಿ ಟ್ರಸ್ಟ್‌ನ ಸದಸ್ಯ ದೇವೇಂದ್ರ ಕುಮಾರ್‌, ವಿನೋದ್‌  ದೊಡ್ಡಣ್ಣನವರ್‌, ವಿನೋದ್‌ ಬಾಕ್ಲಿವಾಲ್‌ ಮೊದಲಾದವರಿದ್ದರು.

ಇದನ್ನೂ ಓದಿ : ಶಾಂತಿ ಕದಡಿದವರಿಗೆ ನೋಟಿಸ್‌ ನೀಡಿಲ್ಲ : ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಆಕ್ರೋಶ

 

Advertisement

Udayavani is now on Telegram. Click here to join our channel and stay updated with the latest news.

Next