Advertisement
ಟೀವಿ ನೋಡಲ್ಲ: ಮನ್ ಕೀ ಬಾತ್ ವೇಳೆ ಪ್ರಧಾನಿ ಜೊತೆ ನಾಲ್ಕು ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು. ಅವರೊಂದಿಗೆ ನಡೆಸಿದ ಸಂವಾದದಲ್ಲಿ ಕೆಲವು ಪ್ರಮುಖ ಚರ್ಚೆಗಳು ನಡೆದವು. ಈ ವೇಳೆ ಪ್ರಧಾನಿ, ತಾನು ಟೀವಿ, ಸಿನಿಮಾ ನೋಡುವುದಿಲ್ಲ. ಅದಕ್ಕೆ ಸಮಯವೂ ಸಿಗುವುದಿಲ್ಲ ಎಂದರು. ನನಗೆ ಓದುವುದೆಂದರೆ ಬಹಳ ಇಷ್ಟ. ಪುಸ್ತಕವನ್ನು ಎಲ್ಲಿಗೆ ಬೇಕಾದರೂ ಒಯ್ಯಬಹುದು. ಆದರೆ ಈಗೀಗ ಅಡ್ಡದಾರಿಗಳು ಬಂದಿವೆ. ಏನೇ ಬೇಕಾದರೂ ಗೂಗಲ್‌ನಲ್ಲಿ ಹುಡುಕುವ ಅಭ್ಯಾಸವಾಗಿರುವುದರಿಂದ ನನ್ನ ಓದುವ ಅಭ್ಯಾಸ ಕುಗ್ಗಿದೆ.
ಏಕಭಾರತ, ಶ್ರೇಷ್ಠಭಾರತ ಎನ್ನುವುದು ನಮ್ಮ ಕಲ್ಪನೆ. ಭಾರತ ಒಂದು ವಿಶಾಲ, ವೈವಿಧ್ಯಮಯವಾದ ಸಂಸ್ಕೃತಿಯಿರುವ ದೇಶ. ನಮ್ಮ ದೇಶದ ಪ್ರಾಚೀನರು ದೇಶವನ್ನು ಹಲವುಮಾರ್ಗದ ಮೂಲಕ ಬೆಸೆದಿದ್ದರು. ನಿಮಗೆ ಗೊತ್ತಿರಲಿ ದೇಶದ 12 ನದಿಗಳ ಪೈಕಿ ಒಂದು ನದಿಯಲ್ಲಿ ಪ್ರತೀವರ್ಷ ಪುಷ್ಕರ ಎಂಬ ಉತ್ಸವ ನಡೆಯುತ್ತದೆ. ಅದಕ್ಕೆ ದೇಶದ ಮೂಲೆಮೂಲೆಗಳಿಂದ ಜನರು ಬರುತ್ತಾರೆ. ಈ ವರ್ಷ ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ ಹಾಗೆ ನಡೆದಿತ್ತು. ಕಳೆದವರ್ಷ ತಮಿಳುನಾಡಿನ ತಾಮ್ರಪರ್ಣ ನದಿಯಲ್ಲಿ ನಡೆದಿತ್ತು. ಮುಂದಿನವರ್ಷ ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ ರಾಜ್ಯಗಳಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಪುಷ್ಕರ ನಡೆಯಲಿದೆ. ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಪಣ:
ಇತ್ತೀಚೆಗೆ ವಿಶಾಖಪಟ್ಟಣದ ಸಮುದ್ರದಾಳದಿಂದ ಸ್ಕೂಬಾ ಡೈವರ್‌ಗಳು 4000 ಕೆಜಿ ಪ್ಲಾಸ್ಟಿಕ್ಕನ್ನು ಹೊರತೆಗೆದಿದ್ದಾರೆ. ಈಗ ಅದೊಂದು ಅಭಿಯಾನವಾಗಿದೆ. ಬರೀ 13 ದಿನದಲ್ಲಿ ಕ್ರಾಂತಿ ಮಾಡಿದ್ದಾರೆ. ನಾವು ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಪಣತೊಡಬೇಕು.
Related Articles
ಭಾರತ ಸಂವಿಧಾನ ಅಳವಡಿಸಿಕೊಂಡು ನ.26ಕ್ಕೆ 70 ವರ್ಷ ಮುಗಿಯುತ್ತದೆ. 71ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಇದು ಬಹಳ ಮಹತ್ವದ ದಿನ. ಇದಕ್ಕಾಗಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದಿದ್ದಾರೆ ಮೋದಿ.
Advertisement
ಸಂವಾದದಲ್ಲಿ ಬೆಂಗಳೂರಿನ ಎನ್‌ಸಿಸಿ ಕೆಡೆಟ್ ಜಿ.ವಿ.ಹರಿಎನ್ಸಿಸಿ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಆಯ್ದ ನಾಲ್ಕು ಎನ್‌ಸಿಸಿ ಕೆಡೆಟ್‌ಗಳೊಂದಿಗೆ ಮನ್ ಕೀ ಬಾತ್ ವೇಳೆ ಸಂವಾದ ನಡೆಸಿದರು. ಇದರಲ್ಲಿ ಕರ್ನಾಟಕದ ಜಿ.ವಿ.ಹರಿ ಕೂಡ ಸೇರಿದ್ದರು. ಹರಿ ಬೆಂಗಳೂರಿನ ಕ್ರಿಸ್ತುಜಯಂತಿ ಕಾಲೇಜಿನಲ್ಲಿ ಓದುತ್ತಿದ್ದಾರೆ. ಶನಿವಾರವಷ್ಟೇ ಸಿಂಗಾಪುರದಲ್ಲಿ ಮುಗಿದ 6 ದೇಶಗಳ ಯುವ ವಿನಿಮಯ ಕಾರ್ಯಕ್ರಮವನ್ನು ಮುಗಿಸಿ ದೇಶಕ್ಕೆ ಹಿಂತಿರುಗಿದ್ದರು. ಭಾನುವಾರ ಪ್ರಧಾನಿಯೊಂದಿಗೆ ನೇರವಾಗಿ ಸಂವಾದ ನಡೆಸುವ ಅವಕಾಶ ಅವರಿಗೆ ಲಭಿಸಿತ್ತು. ಈ ವೇಳೆ ಅವರು ಕೇಳಿದ ಪ್ರಶ್ನೆ ಬಹಳ ಪ್ರಮುಖವಾಗಿತ್ತು. ಒಂದು ವೇಳೆ ನೀವು ರಾಜಕೀಯ ಪ್ರವೇಶಿಸಿರದಿದ್ದರೆ ಏನಾಗಿರುತ್ತಿದ್ದಿರಿ ಎಂಬ ಅವರ ಪ್ರಶ್ನೆಗೆ ಪ್ರಧಾನಿಗಳು ಗಂಭೀರವಾಗಿಯೇ ಉತ್ತರಿಸಿದರು. ಈ ಪ್ರಶ್ನೆಗೆ ಉತ್ತರಿಸುವುದು ಬಹಳ ಕಷ್ಟ. ಕೆಲವು ಮಕ್ಕಳು ತಾವು ಏನಾಗಬೇಕೆಂದು ಯೋಚಿಸುತ್ತಾರೆ. ಆದರೆ ನಾನು ಹಾಗೆ ಯೋಚಿಸಿಯೇ ಇರಲಿಲ್ಲ. ಒಂದಂತೂ ಸತ್ಯ, ನನಗೆ ರಾಜಕೀಯಕ್ಕೆ ಬರಬೇಕೆಂಬ ಯಾವುದೇ ಆಸಕ್ತಿಯೂ ಇರಲಿಲ್ಲ. ಈಗ ಬಂದಮೇಲೆ ಹಗಲೂ ಇರುಳು ಈ ದೇಶದ ಉನ್ನತೀಕರಣಕ್ಕಾಗಿ ಚಿಂತಿಸುತ್ತೇನೆ. ಪ್ರಾಮಾಣಿಕವಾಗಿ ನನ್ನನ್ನು ಅರ್ಪಿಸಿಕೊಂಡಿದ್ದೇನೆ ಎಂದು ಪ್ರಧಾನಿ ಉತ್ತರಿಸಿದ್ದಾರೆ. ಮಾತೃಭಾಷೆ ನಿರ್ಲಕ್ಷಿಸಿ ಮಾಡುವ ಅಭಿವೃದ್ಧಿ ಅರ್ಥಹೀನ
2019ನ್ನು ವಿಶ್ವಸಂಸ್ಥೆ ದೇಶೀಯ ಭಾಷೆಗಳ ವರ್ಷ ಎಂದು ಘೋಷಿಸಿದೆ. ಬರೀ 10,000 ಮಂದಿಯಿರುವ ಉತ್ತರಾಖಂಡದ ರಂಗ ಸಮುದಾಯ ಲಿಪಿಯಿಲ್ಲದ ತಮ್ಮ ಭಾಷೆಯನ್ನು ಭಾರೀ ಹೋರಾಟದ ಮೂಲಕ ಉಳಿಸಿಕೊಂಡಿದ್ದಾರೆ. ಅದು ಎಲ್ಲರಿಗೂ ಸ್ಫೂರ್ತಿಯಾಗಬೇಕು. 150 ವರ್ಷದ ಹಿಂದೆ ಭರತೇಂದು ಹರಿಶ್ಚಂದ್ರ, ಒಬ್ಬನ ಭಾಷಾ ಬೆಳವಣಿಗೆ, ಅವನ ಸರ್ವಾಂಗೀಣ ಬೆಳವಣಿಗೆಯ ಮೂಲ. ಮಾತೃಭಾಷೆ ನಿರ್ಲಕ್ಷಿಸಲ್ಪಟ್ಟರೆ ಉಳಿದೆಲ್ಲ ಅಭಿವೃದ್ಧಿಯೂ ಅರ್ಥಹೀನ ಎಂದಿದ್ದರು. 19ನೇ ಶತಮಾನದಲ್ಲಿ ತಮಿಳುನಾಡಿನ ಕವಿ ಸುಬ್ರಹ್ಮಣ್ಯ ಭಾರತಿ-ಭಾರತಮಾತೆಗೆ 30 ಕೋಟಿ ಮುಖಗಳು, ಒಂದು ದೇಹ, 18 ಭಾಷೆ, ಒಂದೇ ಯೋಚನೆ ಎಂದಿದ್ದರು.