ಟರ್ಕಿಯಲ್ಲಿ ಇದೇ 27-28ರಂದು ಆಯೋಜಿಸಲಾಗಿರುವ ಬೃಹತ್ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಮೋದಿ ಪಾಲ್ಗೊಳ್ಳಬೇಕಿತ್ತು. ಆದರೆ ಇತ್ತೀಚೆಗೆ, ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿàಪ್ ಎಡೋìಗನ್, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಭಾರತದ ನಡೆಯನ್ನು ಆಕ್ಷೇಪಿಸಿ, ಪಾಕಿಸ್ತಾನದ ನಿಲುವಿಗೆ ಬೆಂಬಲ ಸೂಚಿಸಿದ್ದರು. ಹಣಕಾಸು ಕಾರ್ಯಪಡೆ ಸಭೆಯಲ್ಲೂ, ಅವರು ಪಾಕ್ ಪರ ಮಾತನಾಡಿದ್ದರು. ಹಾಗಾಗಿ, ಮೋದಿ ಭೇಟಿ ರದ್ದುಗೊಳಿಸಲು ಭಾರತ ನಿರ್ಧರಿಸಿದೆ ಎನ್ನಲಾಗಿದೆ.
Advertisement