Advertisement
ಅವರು ಉಜಿರೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸಮಾವೇಶದಲ್ಲಿ ಭಾಗಿಯಾಗಲಿದ್ದು, ಜಿಲ್ಲೆಯಲ್ಲಿ ಭಾಗಿಯಾಗುವ ಪ್ರಥಮ ಸಾರ್ವಜನಿಕ ಕಾರ್ಯಕ್ರಮವೂ ಹೌದು.
Related Articles
ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿ 3 ಬಾರಿ ಜಿಲ್ಲೆಗೆ ಚುನಾವಣೆ ಸಂದರ್ಭ ಭೇಟಿ ನೀಡಿದ್ದರು. 2008ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭ ಪುತ್ತೂರಿಗೆ ಆಗಮಿಸಿ ಬಳಿಕ ಕಾರ್ಕಳಕ್ಕೆ, 2013ರ ವಿಧಾನಸಭಾ ಚುನಾವಣೆ ವೇಳೆ, 2014ರ ಲೋಕಸಭಾ ಚುನಾವಣೆ ವೇಳೆ ಮಂಗಳೂರಿನ ನೆಹರೂ ಮೈದಾನದಲ್ಲಿ ಭಾಷಣವನ್ನೂ ಮಾಡಿದ್ದರು.
Advertisement
2017ರ ಫೆಬ್ರವರಿಯಲ್ಲಿ ಉಡುಪಿ ರಾಜಾಂಗಣದಲ್ಲಿ ಶ್ರೀಕೃಷ್ಣಮಠದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿಲ್ಲಿಯಿಂದ ವೀಡಿಯೋ ಕಾನ್ಫರೆನ್ಸ್ ಭಾಷಣ ಮಾಡಿದ್ದರು.
ಆಹಾರ ಸ್ವೀಕಾರಪ್ರಧಾನಿ ಮೋದಿ ಪ್ರವಾಸ ಸಂದರ್ಭ ಹೊರಗಿನ ಆಹಾರ ಸ್ವೀಕರಿಸುವುದಿಲ್ಲ. ವಿಮಾನದಲ್ಲೇ ಆಹಾರ ಸಿದ್ಧವಾಗಿ ಇರುತ್ತದೆ. ಹೊರಗೆಲ್ಲೂ ಭೋಜನ ಸೇವಿಸದೆ ವಿಮಾನದಲ್ಲೇ ಸ್ವೀಕರಿಸುತ್ತಾರೆ ಎನ್ನಲಾಗಿದೆ. ಜಿಲ್ಲೆಗೆ ಬಂದ ಪ್ರಧಾನಿಗಳು ಯಾರ್ಯಾರು?
ಮಂಗಳೂರಿಗೆ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಆಗಮಿಸಿ, ಕೇಂದ್ರ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿದ್ದರು. ಬಳಿಕ ಮೈದಾನಕ್ಕೆ ನೆಹರೂ ಮೈದಾನ ಎಂದು ನಾಮಕರಣ ಮಾಡಲಾಗಿತ್ತು. ಲಾಲ್‌ಬಹಾದ್ದೂರ್ ಶಾಸಿŒಯವರು ಪ್ರಧಾನಿಯಾಗಿದ್ದಾಗ ನವಮಂಗಳೂರು ಬಂದರಿಗೆ ಶಿಲಾನ್ಯಾಸ ನೆರವೇರಿಸಿದ್ದರು.
1975ರಲ್ಲಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ನವ ಮಂಗಳೂರು ಬಂದರನ್ನು ಲೋಕಾರ್ಪಣೆ ಮಾಡಿದ್ದರು. ಮೊರಾರ್ಜಿ ದೇಸಾಯಿ, ಚಂದ್ರಶೇಖರ್, ರಾಜೀವ್ ಗಾಂಧಿ, ಪಿ.ವಿ. ನರಸಿಂಹ ರಾವ್, ಅಟಲ್ ಬಿಹಾರಿ ವಾಜಪೇಯಿ, ಅವರೂ ಪ್ರಧಾನಿಯಾಗಿದ್ದಾಗ ವಿವಿಧ ಸಂದರ್ಭ ಜಿಲ್ಲೆಗೆ ಭೇಟಿ ನೀಡಿದ್ದರು. 2006 ಜೂ. 23ರಂದು ಪ್ರಧಾನಿ ಡಾ| ಮನಮೋಹನ್ ಸಿಂಗ್ ಅವರು ಎಂಆರ್‌ಪಿಎಲ್‌ನ ಪೆಟ್ರೋ ಕೆಮಿಕಲ್ ಸಂಕೀರ್ಣ ಉದ್ಘಾಟಿಸಲು ಮಂಗಳೂರಿಗೆ ಬರಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ವಿಮಾನ ಇಳಿಯದೆ ಬೆಂಗಳೂರಿಗೆ ಹಿಂದಿರುಗಿದ್ದರು.
ವಾಹನ ಸಂಚಾರ ಮಾರ್ಪಾಡು
ಮಂಗಳೂರು, ಅ. 28: ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಧರ್ಮಸ್ಥಳ ಮತ್ತು ಉಜಿರೆಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಟಿಯಿಂದ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ವಾಹನಗಳ ಸಂಚಾರದಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಮಂಗಳೂರಿನಿಂದ ಧರ್ಮಸ್ಥಳಕ್ಕೆ ಬರುವ ಎಲ್ಲ ವಾಹನಗಳು ಮಂಗಳೂರು -ಬಿ.ಸಿ.ರೋಡ್- ಉಪ್ಪಿನಂಗಡಿ- ನೆಲ್ಯಾಡಿ–ಕೊಕ್ಕಡ-ನಿಡ್ಲೆ ಮಾರ್ಗವಾಗಿ ಧರ್ಮಸ್ಥಳಕ್ಕೆ ಬರುವುದು. ಧರ್ಮಸ್ಥಳದಿಂದ ಮಂಗಳೂರು ಕಡೆಗೆ ಹೋಗುವ ಎಲ್ಲ ವಾಹನಗಳು ಧರ್ಮಸ್ಥಳ- ನಿಡ್ಲೆ-ಕೊಕ್ಕಡ- ನೆಲ್ಯಾಡಿ- ಉಪ್ಪಿನಂಗಡಿ ಮಾರ್ಗವಾಗಿ ಮಂಗಳೂರಿಗೆ ತೆರಳುವುದು. ಧರ್ಮಸ್ಥಳದಿಂದ ಉಜಿರೆ-ಚಾರ್ಮಾಡಿ- ಚಿಕ್ಕಮಗಳೂರು ಕಡೆಗೆ ಹೋಗುವ ವಾಹನಗಳು ಧರ್ಮಸ್ಥಳ-ಪುದುವೆಟ್ಟು ಕ್ರಾಸ್- ಕಕ್ಕಿಂಜೆ- ಚಾರ್ಮಾಡಿ ಮಾರ್ಗವಾಗಿ ತೆರಳುವುದು. ಚಿಕ್ಕಮಗಳೂರು ಕಡೆಯಿಂದ ಧರ್ಮಸ್ಥಳಕ್ಕೆ ಬರುವ ವಾಹನಗಳು ಮೂಡಿಗೆರೆ- ಚಾರ್ಮಾಡಿ-ಕಕ್ಕಿಂಜೆ- ಪುದುವೆಟ್ಟು ಕ್ರಾಸ್ ಮಾರ್ಗವಾಗಿ ಧರ್ಮಸ್ಥಳಕ್ಕೆ ಬರುವುದು. ಧರ್ಮಸ್ಥಳದಿಂದ ಉಜಿರೆಗೆ ಹೋಗುವ ಎಲ್ಲ ವಾಹನಗಳು ಧರ್ಮಸ್ಥಳ – ಪುದುವೆಟ್ಟು ಕ್ರಾಸ್- ಕಕ್ಕಿಂಜೆ ಮಾರ್ಗವಾಗಿ ಉಜಿರೆಗೆ ತೆರಳುವುದು. ಕಾರ್ಕಳ, ಮೂಡಬಿದಿರೆ, ವೇಣೂರು ಕಡೆಗಳಿಂದ ಧರ್ಮಸ್ಥಳಕ್ಕೆ ಬರುವ ವಾಹನಗಳು ಗುರುವಾಯನಕೆರೆ-ಉಪ್ಪಿನಂಗಡಿ-ನೆಲ್ಯಾಡಿ- ಕೊಕ್ಕಡ ಮಾರ್ಗವಾಗಿ ಧರ್ಮಸ್ಥಳಕ್ಕೆ ಬರುವುದು. ವಾಹನ ನಿಲುಗಡೆ ನಿಷೇಧ
ಧರ್ಮಸœಳ, ಉಜಿರೆ ಪರಿಸರದಲ್ಲಿ ಮತ್ತು ಧರ್ಮಸœಳ – ಉಜಿರೆ ರಸ್ತೆಯಲ್ಲಿ ಅ. 29 ರಂದು ಬೆಳಗ್ಗಿನಿಂದ ರಸ್ತೆಯ ಎರಡೂಬದಿಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಯಾವುದಾದರೂ ವಾಹನ ರಸ್ತೆ ಬದಿಯಲ್ಲಿ ನಿಲುಗಡೆ ಮಾಡಿರುವುದು ಕಂಡಲ್ಲಿ ಈ ವಾಹನಗಳನ್ನು ಟೋಯಿಂಗ್ ವಾಹನದ ಮೂಲಕ ಬೇರೆ ಸ್ಥಳಕ್ಕೆ ಸœಳಾಂತರಿಸಲಾಗುವುದು. ವಾಹನ ನಿಲುಗಡೆಗೆ ವ್ಯವಸ್ಥೆ: ಸಾರ್ವಜನಿಕರಿಗೆ ವಾಹನ ಪಾರ್ಕಿಂಗ್ ವ್ಯವಸೆœಯನ್ನು ಉಜಿರೆಯ ಜನಾರ್ದನ ಸ್ವಾಮಿ ದೇವಸಾœನದ ಬಳಿ ಮತ್ತು ವಿಐಪಿ ಪಾಸ್ ಹೊಂದಿರುವ ವಾಹನಗಳಿಗೆ ಬೆಳಾಲು ಕ್ರಾಸ್ ಬಳಿ ವ್ಯವಸೆœಯನ್ನು ಕಲ್ಪಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕರ ಪ್ರಕಟನೆ ತಿಳಿಸಿದೆ.