Advertisement

21ಕ್ಕೆ ವಿಶ್ವಸಂಸ್ಥೆಯಲ್ಲಿ ಯೋಗ ದಿನ: ಪ್ರಧಾನಿ ಮೋದಿ ಭಾಗಿ

10:21 PM Jun 16, 2023 | Team Udayavani |

ವಿಶ್ವಸಂಸ್ಥೆ: 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ, ಜೂ.21ರಂದು ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದ ನೇತೃತ್ವವನ್ನು; ಭಾರತದ ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದಾರೆ. ಯೋಗವನ್ನು ನಿತ್ಯಜೀವನದ ಭಾಗವಾಗಿಸಿಕೊಳ್ಳುವುದರಿಂದ ಆಗುವ ಲಾಭವನ್ನು ತಿಳಿಸಿಕೊಡಲು ಯೋಗ ದಿನಾಚರಣೆ ಆರಂಭಿಸಲಾಗಿದೆ.

Advertisement

9 ವರ್ಷಗಳ ಹಿಂದೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೊದಲ ಬಾರಿ ಮೋದಿ ವಾರ್ಷಿಕವಾಗಿ ಯೋಗ ದಿನಾಚರಣೆ ನಡೆಸಬೇಕೆಂದು ಮನವಿ ಮಾಡಿದ್ದರು. ಅದಕ್ಕೆ ಆಗಲೇ ಅನುಮೋದನೆ ದೊರೆತಿತ್ತು. ವಿಶೇಷವೆಂದರೆ ಮೋದಿ ಸರ್ಕಾರ ಸರಿಯಾಗಿ 9 ವರ್ಷಗಳನ್ನು ಪೂರೈಸಿರುವ ಈ ಹೊತ್ತಿನಲ್ಲೇ ವಿಶ್ವಸಂಸ್ಥೆಯಲ್ಲಿ ಮೊದಲ ಬಾರಿಗೆ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಐತಿಹಾಸಿಕವೆನಿಸಿಕೊಂಡಿದೆ.

ಯುದ್ಧ ನಿಲ್ಲಿಸುವುದಕ್ಕೆ ಭಾರತ ಸಮರ್ಥ
ಉಕ್ರೇನ್‌-ರಷ್ಯಾ ಯುದ್ಧ ನಿಲ್ಲಿಸುವುದಕ್ಕೆ ಸೂಕ್ತ ದೇಶ ಭಾರತ, ಚೀನಾ ಅಲ್ಲ ಎಂದು ಅಮೆರಿಕ ಕಾಂಗ್ರೆಸ್‌ ಸದಸ್ಯ ಅಮಿ ಬೇರಾ ಹೇಳಿದ್ದಾರೆ. ಭಾರತಕ್ಕೆ ರಷ್ಯಾದೊಂದಿಗೆ ಹಿಂದಿನಿಂದಲೂ ಉತ್ತಮ ಬಾಂಧವ್ಯವಿದೆ. ಭಾರತ ತನ್ನ ಸಂಪೂರ್ಣ ರಾಜತಾಂತ್ರಿಕ ಬಲ ಬಳಸಿ ಈ ಸಮಸ್ಯೆಯನ್ನು ಸರಿಪಡಿಸಬೇಕು. ಆದರೆ ಇದಾಗುತ್ತದೆ ಎಂಬ ಬಗ್ಗೆ ನನಗೆ ನಂಬಿಕೆಯಿಲ್ಲ ಎಂದು ಭಾರತೀಯ ಮೂಲದ ಅಮೆರಿಕ ಸಂಸದ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next